ಇಲ್ಲಿ ರಸ್ತೆ‌ ನಿರ್ಮಿಸಿದ್ದೇ ತಪ್ಪಾಯಿತಾ?

E belagavi ವಿಶೇಷ

ಬೆಳಗಾವಿ ರಾಜಕಾರಣವೇ ವಿಚಿತ್ರ. ವಿರೋಧಕ್ಕೆ ವಿರೋಧ ಇಲ್ಲಿ ಮಾಮೂಲು.

ಶಾಸಕ ಅಭಯ‌ ಪಾಟೀಲ ಎದ್ದು‌ ನಿಂತರೂ ತಪ್ಪು, ಕೂತರೂ ತಪ್ಪು ಅನ್ನುವ ಕೆಲವರು ಇಲ್ಲಿದ್ದಾರೆ..

ಆ ರಸ್ತೆ ಕೇವಲ ಅಭಯ ಪಾಟೀಲರು ಉಪಯೋಗಿಸುತ್ತಿರಲಿಲ್ಲ. ಸಂಚಾರ ದಟ್ಟಣೆ ನಿವಾರಣೆ ಸಲುವಾಗಿ ನಿರ್ಮಿಸಿದ ರಸ್ತೆ.

ರಸ್ತೆ ನಿರ್ಮಿಸುವಾಗ ಅಧಿಕಾರಿಗಳು ನಿಯಮ ಪಾಲನೆ ಮಾಡಬೇಕಿತ್ತು.ಅದನ್ನು ಮಾಡದೇ ರಸ್ತೆ ನಿರ್ಮಿಸಿದ್ದು ತಪ್ಪು.

ಶಾಸಕರು ತಮ್ಮ ಮನೆಯ ಮುಂದೆ ರಸ್ತೆ ನಿರ್ಮಿಸಿಕೊಂಡಿರಲಿಲ್ಲ.

ದಕ್ಷಿಣದಲ್ಲಿ ಅಭಯ ಸೋಲಿಲ್ಲದ ಸರದಾರ. ದಕ್ಷಿಣದಲ್ಲಿ ಶುರುವಾಗಿದೆ ರೋಡ್ ಮಹಾಸಮರ

ಬೆಳಗಾವಿ.

ಗಡಿನಾಡ ಬೆಳಗಾವಿ ರಾಜಕಾರಣವೇ ವಿಚಿತ್ರ. ಇಲ್ಲಿ ಪಕ್ಷ ರಾಜಕಾರಣಕ್ಕಿಂತ ಹೊಂದಾಣಿಕೆ ರಾಜಕಾರಣವೇ ಹೆಚ್ಚು. . ಅದನ್ನು ಬಿಡಿ.

ಈಗ ನಾವು ಹೇಳಲು ಹೊರಟಿರುವುದು ಬೆಳಗಾವಿ ದಕ್ಷಿಣ ವಿಧಾನಸಭಾ ಕ್ಷೇತ್ರದ ರಾಜಕಾರಣ ವಿಷ್ಯ.

ಇಲ್ಲಿ ಹೇಗಾಗಿದೆ ಅಂದ್ರೆ ಶಾಸಕ ಅಭಯ ಪಾಟೀಲ ಕೂತರೂ ತಪ್ಪು, ನಿಂತ್ರೂ ತಪ್ಪು ಎನ್ನುವ ಒಂದಿಷ್ಟು ಜನ‌ ಇದ್ದಾರೆ ರಾಜಕಾರಣದಲ್ಲಿ ಇದೆಲ್ಲ ಸಹಜ.

ಬೆಳಗಾವಿ ದಕ್ಷಿಣ ಕ್ಷೇತ್ರದಲ್ಲಿ ಶಾಸಕ ಅಭಯ ಪಾಟೀಲ ಸೋಲಿಲ್ಲದ ಸರದಾರ ಅನ್ನೋದರಲ್ಲಿ ಎರಡು ಮಾತಿಲ್ಲ. ಅಷ್ಟೇ ಅಲ್ಲ ಅಭಿವೃದ್ಧಿ ವಿಷಯದಲ್ಲಿ ಯಾರು ಎಷ್ಟೇ ಟೀಕೆ , ಟಿಪ್ಪಣಿ ಮಾಡಿದರೂ ಅದರ ಬಗ್ಗೆ ತಲೆಕೆಡಿಸಿಕೊಳ್ಳಲ್ಲ ಅಭಯ ಪಾಟೀಲರು.

ಇಲ್ಲಿ ಸಿಂಪಲ್ ಆಗಿ ಹೇಳಬೇಕೆಂದರೆ, ದಕ್ಷಿಣ ಕ್ಷೇತ್ರದಲ್ಲಿ ಬರುವ ಬ್ಯಾಂಕ್ ಆಫ್ ಇಂಡಿಯಾ ದಿಂದ ಜುನ್ನೆ ಬೆಳಗಾವಿವರೆಗೆ ಡಬಲ್ ರೋಡ್ ನಿರ್ಮಾಣ ಮಾಡಲಾಗಿದೆ.

ಸ್ಮಾರ್ಟ್ city ಯಿಂದ ಈ ರಸ್ತೆ ನಿರ್ಮಿಸಲಾಗಿದೆ ಇಲ್ಲಿ ರಸ್ತೆ ಅಗಲೀಕರಣ ಮಾಡುವಾಗ ಭೂ ಸ್ವಾಧೀನ ಪ್ರಕ್ರಿಯೆ ಮಾಡಿ‌ದ್ದರೆ ಯಾವುದೇ ಸಮಸ್ಯೆ ಬರ್ತಿರಲಿಲ್ಲ.

ಆದರೆ ಈಗ ಅದಿಕಾರಿಗಳು ಮಾಡಿದ ತಪ್ಪಿಗೆ ಬೆಳಗಾವಿಗರು ಹೈರಾಣ ಆಗಬೇಕಾಗಿದೆ. ಅಷ್ಟೇ ಅಲ್ಲ ಜನಪ್ರತಿನಿಧಿಗಳು ಮುಜುಗುರ ಪಡುವಙತಾಗಿದೆ.

ಅಭಯ ತಪ್ಪಾದರೂ ಏನು?

ತಮ್ಮ ಕ್ಷೇತ್ರದಲ್ಲಿ ಸುಗಮ ಸಂಚಾರದ ವ್ಯವಸ್ಥೆ ಆಗಬೇಕು ಎನ್ನುವ ನಿಟ್ಟಿನಲ್ಲಿ ಗುಣಮಟ್ಟದ ರಸ್ತೆ ನಿರ್ಮಾಣದ ಕನಸು ಕಂಡವರಲ್ಲಿ ಶಾಸಕ ಅಭಯ ಪಾಟೀಲ ಒಬ್ಬರು.!
ಸಹಜವಾಗಿ ಬೇರೆ ಬೇರೆ ಪ್ರದೇಶದಿಂದ ಜುನ್ನೆ ಬೆಳಗಾವಿ ರಸ್ತೆಗೆ ಹೋಗಬೇಕೆಂದರೆ ಸಾಕು ಸಾಕಾಗುತ್ತಿತ್ತು. ಅಷ್ಟು ಸಂಚಾರ ದಟ್ಟಣೆ ಆಗುತ್ತಿತ್ತು. ಇದನ್ನು ಅರಿತ ಶಾಸಕ ಅಭಯ ಪಾಟೀಲರು ಬ್ಯಾಂಕ್ ಆಫ್ ಇಂಡಿಯಾ ಮೂಲಕ ಡಬಲ್ ರಸ್ತೆ ನಿರ್ಮಾಣದ ಪ್ರಸ್ತಾಪವಿಟ್ಟರು,
ಇಲ್ಲಿ ರಸ್ತೆ ನಿರ್ಮಾಣಕ್ಕೆ ಅನುದಾನ ತಂದು ಕೊಡುವ ಕೆಲಸವನ್ನು ಶಾಸಕರು ಮಾಡಬಹುದು, ಆದರೆ ರಸ್ತೆ ನಿರ್ಮಾಣದ ಸಂದರ್ಭದಲ್ಲಿ ಏನೇ ಕಾನೂನು ತೊಡಕು ಬಂದರೆ ಅಧಿಕಾರಿಗಳು ಬಗೆಹರಿಸುವ ಕೆಲಸವನ್ನು ಮಾಡಬೇಕು. ಆದರೆ ಅಧಿಕಾರಿಗಳು ಅದನ್ನು ಮಾಡುವಲ್ಲಿ ಎಡವಿದ್ದೇ ಇದಕ್ಕೆಲ್ಲ ಕಾರಣವಾಗಿದೆ.

ಇಲ್ಲಿ ಅಧಿಕಾರಿಗಳ ಉಳಿದ ತಪ್ಪುಗಳು ಏನೇ ಇದ್ದರೂ ಕೂಡ ಈ ರಸ್ತೆ ನಿರ್ಮಾಣದಿಂದ ಜನರಿಗೆ ಅನುಕೂಲವಂತೂ ಆಗಿತ್ತು ಎನ್ನುವುದರಲ್ಲಿ ಎರಡು ಮಾತಿಲ್ಲ.

highcourt ನಲ್ಲಿ ಬೆಳಗಾವಿ ಪಾಲಿಕೆ ವಿಚಾರಣೆ

ರಸ್ತೆ ಶಾಸಕರ ಮನೆ ಮುಂದೆ ಆಗಿಲ್ಲ..!
ಇಲ್ಲಿ ಶಾಸಕ ಅಭಯ ಪಾಟೀಲರು ತಮ್ಮ ಮನೆಯ ಮುಂದೆ ಈ ಡಬಲ್ ರೋಡ್ ರಸ್ತೆ ನಿರ್ಮಿಸಿ ಕೊಂಡಿದ್ದರೆ ಅವರದ್ದು ಏನೋ ತಪ್ಪಿರಬಹುದು ಎಂದು ಊಹಿಸಬಹುದಿತ್ತು.,

ಆದರೆ ರಸ್ತೆ ನಿರ್ಮಾಣವಾದ ನಂತರ ಅಲ್ಲಿ ಓಡಾಡುವ ಬಹುತೇಕರು ಶಾಸಕರ ಕಾರ್ಯವನ್ನು ಮೆಚ್ಚಿದ್ದಾರೆ, ಆದರೂ ಕೆಲವರು ವಿರೋಧಕ್ಕೆ ವಿರೋಧ ಎನ್ನುವಂತೆ ಇಲ್ಲಿ ಎಲ್ಲಕ್ಕೂ ಶಾಸಕರನ್ನು ಟಾರ್ಗೆಟ್ ಮಾಡುವ ಕೆಲಸ ನಡೆದಿದೆ ಎನ್ನುವುದು ಸುಳ್ಳಲ್ಲ.

ಸೂಪರ್ ಸೀಡ್ ಭಯವಿತ್ತಾ?

ನ್ಯಾಯಾಂಗ ತೂಗುಗತ್ತಿಯಿಂದ ನೇತಾಡುತ್ತಿರುವ ಬೆಳಗಾವಿ ಮಹಾನಗರ ಪಾಲಿಕೆಯನ್ಬು ಕೋರ್ಟ ಯಾವಾಗ ಬೇಕಾದಾಗ ಸೂಪರ್ ಸೀಡ್ ಮಾಡಬಹುದು ಎನ್ನುವ ಭಯವನ್ಬು ನಗರಸೇವಕರಲ್ಲಿ ಬಿತ್ತಕಾಗಿತ್ತಾ?

ಮಹಾನಗರ ಪಾಲಿಕೆಯಲ್ಲಿ ನಡೆದ ವಿಶೇಷ ಸಭೆಯಲ್ಲಿ ಬಹುತೇಕ ನಗರಸೇವಕರು ಆಡಿದ ಮಾತಿನ‌ ಶೈಲಿಯನ್ನು ಗಮನಿಸಿದರೆ ಹಣ ಪಾವತಿಸುವ ನಿರ್ಧಾರ ತೆಗೆದುಕೊಳ್ಳದಿದ್ದರೆ ಕೋರ್ಟ ಪಾಲಿಕೆ ಮೇಲೆ ಕ್ರಮ‌ ಜರುಗಿಸಬಹುದು ಎಂದು ಬಿಂಬಿಸಿದ್ದರು. ಹೀಗಾಗಿ ಕೌನ್ಸಿಲ್ ಗೆ ಎಷ್ಟು ಹಣ ಮಂಜೂರಾತಿ ಅಧಿಕಾರವಿದೆ ಎನ್ನುವುದನ್ನು ನೋಡದೇ ಮೇಯರ್ ರೂಲಿಂಗ್ ನೀಡಿದರು.

ಆದರೆ ಆ ಅಧಿಕಾರ ಇಲ್ಲ ಎನ್ನುವುದು ಗೊತ್ತಾಗುತ್ತಿದ್ದಂತೆಯೇ ಪಾಲಿಕೆಯವರು ಅದೇ ಕೌನ್ಸಿಲ್ ಗಮನಕ್ಕೆ ಬಾರದೇ ತದ್ವಿರುದ್ಧ ನಿರ್ಧಾರ ತೆಗೆದುಕೊಂಡರು. ಈಗ ಜಾಗೆ ಮರಳಿ ಕೊಡುವ ಬಗ್ಗೆ ಕೋರ್ಟ್ ಗೆ ಅಫಿಡೆವಿಟ್ ಸಲ್ಲಿಸಬೇಕು. ಅದಕ್ಕೆ ಪಾಲಿಕೆ ಯವರು ಕೌನ್ಸಿಲ್ ಗೆ ತರ್ತಾರೋ ಅಥವಾ ತಾವೇ ಕೊಡುತ್ತಾರೋ ಎನ್ನುವುದನ್ನು ಕಾದು ನೋಡಬೇಕು.

Leave a Reply

Your email address will not be published. Required fields are marked *

error: Content is protected !!