ಇ ಬೆಳಗಾವಿ ವಿಶೇಷ ಬೆಳಗಾವಿ. ಒಂದಾನೊಂದು ಕಾಲದಲ್ಲಿ ಗಡಿನಾಡ ಬೆಳಗಾವಿ ಮಹಾನಗರ ಪಾಲಿಕೆ ಎಂದರೆ ಇಡೀ ರಾಜ್ಯದ ಜನ ತಿರುಗಿ ನೋಡುತ್ತಿದ್ದರು, ಅಂದರೆ ಅದಕ್ಕೊಂದು ವರ್ಚಸ್ಸು ಇತ್ತು, ಘನತೆ ಗೌರವವೂ ಇತ್ತು, ವಿಜಯ ಮೋರೆ ಮೇಯರ್ ಆಗಿದ್ದ ಸಂದರ್ಭದಲ್ಲಿ ಪಾಲಿಕೆ ಸಭೆಯಲ್ಲಿ ಗಡಿ ವಿಷಯಕ್ಕೆ ಸಂಬಂಧಿಸಿದಂತೆ ಗೊತ್ತುವಳಿ ಸ್ವೀಕರಿಸಿದ್ದರಿಂದ ಪಾಲಿಕೆಯನ್ನು ಆಗಿನ ಧರ್ಮಸಿಂಗ್ ಸಕರ್ಾರ ಸೂಪರ್ ಸೀಡ್ ಮಾಡಿತ್ತು, ಆಗ ಪಿ.ಎ.ಮೇಘನ್ನವರ ಪಾಲಿಕೆ ಆಯುಕ್ತರಾಗಿದ್ದರೆ, ಡಾ, ಶಾಲಿನಿ ರಜನೀಶ್ ಜಿಲ್ಲಾಧಿಕಾರಿಯಾಗಿದ್ದರು, ಈಗ ಅವರು ರಾಜ್ಯ ಸಕರ್ಾರದ ಮುಖ್ಯ ಕಾರ್ಯದರ್ಶಿಗಳಾಗಿದ್ದರು.
ಇಲ್ಲಿ ಮತ್ತೊಂದು ಸಂಗತಿ ಎಂದರೆ, ಆಗ ಕೇವಲ ಲಕ್ಷ ರೂ ಅನುದಾನಕ್ಕೆ ಪಾಲಿಕೆ ನಿಯೋಗ ಬೆಂಗಳೂರಿಗೆ ಹೋಗಿದ್ದು ಉಂಟು, ಎಲ್ಲಕ್ಕಿಂತ ಮುಖ್ಯವಾಗಿ ಮಹಾನಗರ ಪಾಲಿಕೆ ಹಳೆಯ ಕಟ್ಟಡದಲ್ಲಿತ್ತು, ಆಗ ಕನ್ನಡ, ಮರಾಠಿ ಎಷ್ಟೆ ವಿವಾದಗಳು ಇದ್ದರೂ ಪಾಲಿಕೆ ಎಂದಿಗೂ ತಲೆ ತಗ್ಗಿಸುವ ಘಟನೆಗೆ ಕಾರಣವಾಗಿರಲಿಲ್ಲ. ಅಂದರೆ ಆಗಿನ ಆಡಳಿತ ಕೂಡ ಹಾಗಿತ್ತು,
ಈಗ ಪಾಲಿಕೆ ಹೊಸ ಕಟ್ಟಡಕ್ಕೆ ಸ್ಥಳಾಂತರವಾಗಿದೆ,. ನಗರಸೇವಕರು ಬದಲಾಗಿದ್ದಾರೆ. ಮೇಲಾಗಿ ಕನ್ನಡ,ಮರಾಠಿ ಹೋಗಿ ಪಕ್ಷವಾರು ಆಯ್ಕೆಯಾಗಿ ನಗರಸೇವಕರು ಬಂದಿದ್ದಾರೆ, ಆದರೆ ಬೆಳಗಾವಿಗರ ದುದರ್ೈವವೋ ಏನೋ. ಪಾಲಿಕೆ ಆಡಳಿತ ಮಾತ್ರ ಹದಗೆಟ್ಟು ಮೂರಾಬಟ್ಟೆಯಾಗಿದೆ. ನಿತ್ಯ ಒಂದಿಲ್ಲೊಂದು ವಿವಾದಗಳು ಪಾಲಿಕೆಯಲ್ಲಿ ಸದ್ದು ಮಾಡುತ್ತಿವೆ, ಹೀಗಾಗಿ ಜನ ಕೂಡ ಛೀ ಥೂ ಎನ್ನುವ ಹಾಗಾಗಿದೆ,
ಹೈಕೋರ್ಟ್ ನಲ್ಲಿ ಬೆಳಗಾವಿ ಪಾಲಿಕೆ ಬಗ್ಗೆ ಘನವೆತ್ತ ನ್ಯಾಯಮೂರ್ತಿಗಳು ಹೇಳಿದ ಮಾತುಗಳನ್ನು ಕೇಳಿ
ಇಲ್ಲಿ ಜನರದ್ದು ಬಿಡಿ. ಆಡಳಿತ ಮತ್ತು ವಿರೋಧ ಪಕ್ಷದ ನಗರ ಸೇವಕರಲ್ಲಿಯೇ ತಾಳಮೇಳವಿಲ್ಲ. ಒಂದಲ್ಲ, ಎರಡ್ಮೂರು ಗುಂಪುಗಳಾಗಿವೆ.
ಇಲ್ಲಿ ಆಡಳಿತ ಪಕ್ಷಕ್ಕೆ ವಿರೋಧ ಪಕ್ಷದ ಅಗತ್ಯವೇ ಇಲ್ಲ. ಅಂದರೆ ಆಡಳಿತದಲ್ಲಿದ್ದುಕೊಂಡೇ ವಿರೋಧ ಮಾಡುವವರು ಇಲ್ಲಿದ್ದಾರೆ, ಹೀಗಾಗಿ ಮಹಾನಗರ ಪಾಲಿಕೆ ಕೌನ್ಸಿಲ್ದಲ್ಲಿ ಯಾವೊಂದು ಅಭಿವೃದ್ಧಿ ಪರ ಚಚರ್ೆಗಳು ಸರಿಯಾಗಿ ಆಗುತ್ತಿಲ್ಲ. ಕೆಲವರು ಗಾಳಿ ಬಿಟ್ಟಾಗ ತೂರಿಕೊಳ್ಳುವ ನಿಟ್ಟಿನಲ್ಲಿ ಹೊರಟಿದ್ದಾರೆ. ಅವರ ಈ ರೀತಿಯ ನಡೆ ಪಕ್ಷಕ್ಕೆ ಕೆಟ್ಟ ಹೆಸರು ಎನ್ನುವುದರಲ್ಲಿ ಎರಡು ಮಾತಿಲ್ಲ. ಅದನ್ನು ಬಿಡಿ.. ಈಗೇನಾಗುತ್ತಿದೆ ಎನ್ನುವುದನ್ನು ನೋಡ ಹೊರಟರೆ ಅಧಿಕಾರಿಗಳು ಮಾಡುತ್ತಿರುವ ಒಂದೊಂದೆ ಯಡವಟ್ಟಿಗೆ ರಾಜ್ಯ ಸಕರ್ಾರ ಬೆಳಗಾವಿ ಮಹಾನಗರ ಪಾಲಿಕೆಗೆ ಮತ್ತೊಂದು ನೋಟೀಸ್ ಕೊಡುವುದರಲ್ಲಿ ಎರಡು ಮಾತಿಲ್ಲ. ಈಗಾಗಲೇ ತಮ್ಮದಲ್ಲದ ತಪ್ಪಿಗೆ ಪಾಲಿಕೆ ಸೂಪರ್ ಸೀಡ್ ನೋಟೀಸ್ ತೆಗೆದುಕೊಂಡಿತ್ತು, ಅದರ ಸಲುವಾಗಿ ಬೆಳಗಾವಿ ಶಾಸಕ ಅಭಯ ಪಾಟೀಲರು ಮಾಡಿದ ರಾಜಕೀಯ ಹೋರಾಟ ಅಷ್ಟಿಷ್ಟಲ್ಲ. ಆದರೂ ಬೆಳಗಾವಿ ಮಹಾನಗರ ಪಾಲಿಕೆ ಮೇಲೆ ಸೂಪರ್ ಸೀಡ್ ನೋಟೀಸ್ ತಪ್ಪಿದ್ದಲ್ಲ ಎನ್ನುವ ಮಾತುಗಳು ಕೇಳಿ ಬರುತ್ತಿವೆ,
ಈ ತಪ್ಪು ಯಾರದ್ದು…! ಬೆಳಗಾವಿ ಅಷ್ಟೇ ಅಲ್ಲ ಇಡೀ ರಾಜ್ಯದ ಇತಿಹಾಸದಲ್ಲಿಯೇ ಮೊಟ್ಟ ಮೊದಲ ಬಾರಿಗೆ ಸಕರ್ಾರಿ ಅಧಿಕಾರಿಗಳು ಭೂ ಸ್ವಾಧೀನ ಮಾಡಿಕೊಳ್ಳದೇ ಮತ್ತು ಭೂ ಮಾಲಿಕರಿಗೆ ಪರಿಹಾರವನ್ನೂ ಕೊಡದೇ ಮಹಾನಗರ ಪಾಲಿಕೆಯು ಸುಮಾರು 7 ಕೋಟಿ ರೂ. ವೆಚ್ಚದಲ್ಲಿ ಡಬಲ್ ರೋಡ್ ನಿರ್ಮಿಸಿತ್ತು ಆದರೆ ದೇವರು ದೊಡ್ಡವನು, ಅಧಿಕಾರಿಗಳ ಯಡವಟ್ಟಿಗೆ ಹೈಕೋರ್ಟ ಸರಿಯಾಗಿಯೇ ಚಾಟಿ ಬೀಸಿದೆ. ಅಷ್ಟೇ ಅಲ್ಲ ನೊಂದ ಭೂ ಮಾಲಿಕರಿಗೆ ಜಾಗೆಯನ್ನು ಮರಳಿ ಕೊಡುವಂತೆ ಆದೇಶ ಕೂಡ ಮಾಡಿದೆ. ಈಗ ಕೋರ್ಟ ಆದೇಶದ ಪ್ರಕಾರ ಪಾಲಿಕೆ ಆ ಜಾಗೆಯನ್ನು ಮರಳಿ ಭೂ ಮಾಲಿಕರಿಗೆ ಒಪ್ಪಿಸುವ ಕೆಲಸ ಮಾಡಿದೆ. ಆದರೆ ಆ ರಸ್ತೆ ನಿರ್ಮಿಸಲು ವೆಚ್ಚ ಮಾಡಿದ ಹಣಕ್ಕೆ ಯಾರು ಹೊಣೆ ಎನ್ನುವುದು ಬೆಳಗಾವಿಗರ ಪ್ರಶ್ನೆ. ಗಮನಿಸಬೇಕಾದ ಸಂಗತಿ ಎಂದರೆ, ಯಾವನೋ ಒಬ್ಬ ಬಡಪಾಯಿ ಸ್ವಂತ ದುಡ್ಡಿನಿಂದ ಕಟ್ಟಿಸಿಕೊಳ್ಳುವಾಗ ಒಂದಡಿ ಮುಂದೆ ಬಂದಿದ್ದರೆ ಅದನ್ನು ತೆಗೆಸುವ ಕೆಲಸವನ್ನು ಮಾಡಲಾಗುತ್ತದೆ, ಆದರೆ ಇಲ್ಲಿ ಪಾಲಿಕೆ ಅಧಿಕಾರಿಗಳ ತಪ್ಪಿಗೆ ರಸ್ತೆ ನಿರ್ಮಿಸಿದ ಮೊತ್ತಕ್ಕೆ ಬೆಳಗಾವಿಗರ ತೆರಿಗೆ ಹಣ ಯಾಕೆ ವ್ಯಯಿಸಬೇಕು ಎನ್ನುವ ಪ್ರಶ್ನೆ ಕೇಳಿ ಬರುತ್ತಿದೆ. ಮೂಲಗಳ ಪ್ರಕಾರ ಅಧಿಕಾರಿಗಳ ತಪ್ಪಿಗೆ ಬೆಳಗಾವಿ ಜನರ ತೆರಿಗೆ ಹಣ ಯಾಕೆ ಎನ್ನುವ ವಿಷಯ ಮುಂದಿಟ್ಟುಕೊಂಡು ಕೆಲವರು ಕೋರ್ಟ ಮೆಟ್ಟಿಲು ಹತ್ತಿದರೂ ಅಚ್ಚರಿ ಪಡಬೇಕಿಲ್ಲ