ಪಂಚಮಸಾಲಿಗ 2 ಎ ಮೀಸಲಾತಿ ಕೊಡದಿದ್ದರೆ
ಸೌಧದೊಳಗೆ ಸಿಎಂಗೆ ಪ್ರವೇಶ ನಿಷೇಧ
ಬೆಳಗಾವಿ.
ಪಂಚಮಸಾಲಿಗೆ 2 ಎ ಮೀಸಲಾತಿ ಕೊಡದಿದ್ದರೆ ಮುಂಬರುವ ಅಧಿವೇಶನದಲ್ಲಿ ಮುಖ್ಯಮಂತ್ರಿಗಳನ್ನು ಸೌಧದೊಳಗೆ ಬಿಟ್ಟುಕೊಡುವುದು ಬೇಡ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.
ನಗರದಲ್ಲಿ ಪಂಚಮಸಾಲಿ ವಕೀಲರ ಸಭೆಯಲ್ಲಿ ಮಾತನಾಡಿದ ಅವರು, ಈ ಸಲದ ಹೋರಾಟ ಕೊನೆಯದಾಗಬೇಕು. ಬರುವ ಅಧಿವೇಶನದೊಳಗೆ ಮೀಸಲಾತಿ ಕೊಡದಿದ್ದರೆ ಉಗ್ರ ಸ್ವರೂಪಗ ಹೋರಾಟಕ್ಕೆ ಸಿದ್ಧರಾಗಬೇಕೆಂದು ಅವರು ಕರೆ ನೀಡಿದರು.

ಈ ಸಲದ ಹೋರಾಟದಲ್ಲಿ ಯಾರೂ ಬರೀ ನಾಟಕ ಮಾಡುವಂತಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಕುರುಬರನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವ ಆಸಕ್ತಿ ಇಲ್ಲ. ಇನ್ನು ನಮ್ಮದೇನು ಗತಿ ಎಂದು ಮಾಮರ್ಿಕವಾಗಿ ಪ್ರಶ್ನೆ ಮಾಡಿದರು.