ಬೆಳಗಾವಿ: ಗಡಿನಾಡ ಬೆಳಗಾವಿಯಲ್ಲಿ ಅಂಗವಿಕಲನ ಮೇಲೆ ಉದ್ಯಮಬಾಗ ಪೊಲೀಸರ ಕ್ರೌರ್ಯದ ಸುದ್ದಿ ಇನ್ನೂ ಜನರ ಮನಸ್ಸಿನಲ್ಲಿ ಹಾಗೇ ಇದೆ. ಅಂತಹುದರಲ್ಲಿ ಮಕ್ಕಳೂ ಸಹ ಠಾಣೆ ಮೆಟ್ಟಿಲು ಹತ್ತಿದ್ದಾರೆಂದರೆ ಜನರಲ್ಲಿ ಒಂದು ರೀತಿಯ ಆತಂಕ ಇದ್ದದ್ದೇ. ಮತ್ತೇ ಅಂಗವಿಕಲನ ನ್ನು ಹೊಡೆದಂತೆ ಮಕ್ಕಳನ್ನು ಹೊಡೆದಿರಬಹುದು. ಹೀಗಾಗಿ ಮಕ್ಕಳೆಲ್ಲರೂ ಕೂಡಿ ಠಾಣೆ ಮೆಟ್ಟಿಲು ಹತ್ತಿರಬಹುದು ಎಂದು ಊಹಿಸುವುದು ಸಹಜ.!
ಆದರೆ ಈಗ ಪೊಲೀಸರು ಅಂತಹ ದುಸ್ಸಾಹಕ್ಕೆ ಕೈ ಹಾಕಿಲ್ಲ.ಗೃಹ ಮಂತ್ರಿ ಡಾ. ಜಿ.ಪರಮೇಶ್ವರ ಹೇಳಿದಂತೆ ಜನಸ್ನೇಹಿ ಪೊಲೀಸ್ ಆಗುವ ನಿಟ್ಟಿನಲ್ಲಿ ವಿನೂತನ ಪ್ರಯೋಗ ಮಾಡಿದರು. ಅದು ತೆರೆದ ಮನೆ.ಅಂದರೆ OPEN HOUSE . ನಗರದ ಎಲ್ಲಾ ಪೊಲೀಸ್ ಠಾಣೆಗಳಲ್ಲಿ ಗುರುವಾರ ತೆರೆದ ಮನೆ ಕಾರ್ಯಕ್ರಮದಡಿ ಶಾಲಾ ಮಕ್ಕಳನ್ನು ಠಾಣೆಗೆ ಬರಮಾಡಿಕೊಳ್ಳುವ ಕೆಲಸವನ್ಬು ಪೊಲೀಸರು ಮಾಡಿದರು. ಪೊಲೀಸ್ ಠಾಣೆಗೆ ವಿದ್ಯಾರ್ಥಿಗಳನ್ನು ಬರಮಾಡಿಕೊಂಡು ಅವರಿಗೆ ಪೊಲೀಸರ ಬಗೆಗಿದ್ದ ಭಯವನ್ನು ದೂರಮಾಡುವುದು ಈ ಕಾರ್ಯಕ್ರಮದ ಉದ್ದೇಶ.
ಇದೇ ವೇಳೆ ವಿದ್ಯಾರ್ಥಿನಿ ಯರಿಗೆ ಮಹಿಳೆ ಮತ್ತು ಮಕ್ಕಳ ಹಕ್ಕುಗಳ ಕಾಯ್ದೆಯ ಬಗ್ಗೆ ತಿಳಿಸಿ ಹೇಳಲಾಯಿತು. ಎಲ್ಲಾ ಠಾಣೆಯ ಅಧಿಕಾರಿಗಳು ಇವತ್ತು ಮಕ್ಕಳ ಜತೆ ಪ್ರೀತಿ, ಸ್ನೇಹ ಮತ್ತು ಸೌಜನ್ಯದಿಂದ ನಡೆದುಕೊಂಡರಂತೆ. ತಮ್ಮ ಠಾಣೆ ಮತ್ತು ಇಲಾಖೆಯ ಕಾರ್ಯವೈಖರಿಯ ಬಗ್ಗೆ ವಿವರಿಸಿದರು.