ರಸ್ತೆ ನಿರ್ಮಿಸಿದ ದುಡ್ಡು ತುಂಬೋರು ಯಾರು?
ದಾರಿ ತಪ್ಪಿದ ಪಾಲಿಕೆ ಆಡಳಿತ. ನಡೆಯದ ಸಾಮಾನ್ಯ , ಸ್ಸಾಯಿ ಸಮಿತಿ ಸಭೆಗಳು.
ಪಾಲಿಕೆ ದಾರಿ ತಪ್ಪಿಸುತ್ತಿರುವವರು ಯಾರು?
ಸಾಮಾನ್ಯ ಸಭೆ ಕರೆಯಲು ಹಿಂದೇಟು ಏಕೆ?
ಮತ್ತೊಂದು ನೋಟೀಸ್ ಕೊಡಲು ಸರ್ಕಾರದ ಚಿಂತನೆ
ಬೆಳಗಾವಿ.
ಗಡಿನಾಡ ಬೆಳಗಾವಿ ಮಹಾನಗರ ಪಾಲಿಕೆಯ ಆಡಳಿತದ ಕಾರ್ಯವೈಖರಿ ವಿರುದ್ಧ ನಾಳೆ ದಿ. 30 ರಂದು ಪ್ರತಿಭಟನೆ ನಡೆಯಲಿದೆ.
ನಗರದ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ನಡೆಯಲಿರುವ ಈ ಪ್ರತಿಭಟನೆಯಲ್ಲಿ ಮಾಜಿ ಮೇಯರ್, ಮಾಜಿ ನಗರಸೇವಕರು ಭಾಗವಹಿಸಲಿದ್ದಾರೆ,
ನಗರದ ಸರ್ದಾರ ಪ್ರೌಢಶಾಲೆಯ ಮೈದಾನದಿಂದ ಆರಂಭಗೊಳ್ಳುವ ಪ್ರತಿಭಟನಾ ಮೆರವಣಿಗೆಯು ಪಾಲಿಕೆಗೆ ಬಂದು ತಲುಪಲಿದೆ.

ಭೂ ಪರಿಹಾರ ಬದಲು ಜಾಗೆ ಕೊಡುವತೀಮರ್ ಸೇರಿದಂತೆ ಇನ್ನಿತರ ಭ್ರಷ್ಟಾಚಾರವನ್ನು ಮುಂದಿಟ್ಟುಕೊಂಡು ಪ್ರತಿಭಟನೆ ನಡೆಯಲಿದೆ.

ನಡೆಯದ ಸಾಮಾನ್ಯ ಸಭೆ
ಬೆಳಗಾವಿ ಮಹಾನಗರ ಪಾಲಿಕೆಯ ಬಿಜೆಪಿ ಮೇಯರ್ ಎರಡನೆ ಅವಧಿಯಲ್ಲಿ ಸರಿಯಾಗಿ ಸಾಮಾನ್ಯ ಮತ್ತು ಸ್ಥಾಯಿ ಸಮಿತಿ ಸಭೆಗಳು ನಡೆಯುತ್ತಿಲ್ಲ ಎನ್ನುವ ದೂರುಗಳು ಕೇಳಿ ಬಂದಿವೆ.
ಈ ಸಭೆಗಳನ್ನು ನಡೆಸಲು ಪಾಲಿಕೆ ಅಧಿಕಾರಿಗಳೇ ನಾಳೆ ಬಾ ಎನ್ನುವ ರೆಡಿಮೇಡ್ ಉತ್ತರ ಕೊಡುತ್ತಿದ್ದಾರೆ ಎನ್ನುವ ಮಾತುಗಳಿವೆ.
ಪ್ರತಿ ತಿಂಗಳು ಸಾಮಾನ್ಯ ಸಭೆಗಳು ನಡೆಯಬೇಕು, ಅಷ್ಟೇ ಅಲ್ಲ 15 ದಿನಕ್ಕೊಮ್ಮೆ ಸ್ಥಾಯಿ ಸಮಿತಿ ಸಭೆ ಜರುಗಬೇಕು, ಆದರೆ ಇಲ್ಲಿ ಎಲ್ಲವೂ ತಾಳ ತಪ್ಪಿದೆ ಎಂದು ಹೇಳಲಾಗುತ್ತಿದೆ.,
ಕಳೆದ ಫೆಬ್ರುವರಿಯಲ್ಲಿ ಬೆಳಗಾವಿ ಪಾಲಿಕೆಗೆ ಬಿಜೆಪಿಯ ಎರಡನೆ ಅವಧಿ ಮೇಯರ್ ಆಯ್ಕೆ ನಡೆದಿತ್ತು, ಅಂದರೆ ಅಲ್ಲಿಂದ ಇಲ್ಲಿಯವರೆಗೆ ಕನಿಷ್ಟ 8 ಸಾಮಾನ್ಯ ಸಭೆಗಳು ನಡೆಯಬೇಕಿತ್ತು,
ಆದರೆ 29 ಫೆಬ್ರುವರಿ, 20 ಜೂನ್ ಮತ್ತು 17 ಅಗಸ್ಟ್ ರಂದು ಮಾತ್ರ ಮೂರು ಸಾಮಾನ್ಯ ಸಭೆಗಳು ನಡೆದಿವೆ, ಇಲ್ಲಿ ಕಳೆದ ಅಗಸ್ಟ್ 27 ರಂದು ಭೂ ಪರಿಹಾರ ಸಂಬಂಧ ವಿಶೇಷ ಸಭೆ ಕರೆಯಲಾಗಿದೆ. ಆದರೆ ವಿಶೇಷ ಸಭೆ ಸಾಮಾನ್ಯ ಸಭೆಯ ಲೆಕ್ಕಕ್ಕೆ ಬರುವುದಿಲ್ಲ ಎನ್ನುವುದು ಹಿರಿಯ ಅಧಿಕಾರಿಯೊಬ್ಬರ ಹೇಳಿಕೆ.
ಇಲ್ಲಿ ಅಧಿಕಾರಿಗಳೇ ಉದ್ದೇಶ ಪೂರ್ವಕವಾಗಿ ಸಾಮಾನ್ಯ ಸಭೆಗಳನ್ನುಕರೆಯುತ್ತಿಲ್ಲ. ಇದೇ ರೀತಿ ಮುಂದುವೆರೆದರೆ ಸರ್ಕಾರ ಪಾಲಿಕೆಗೆ ಮತ್ತೊಂದು ನೊಟೀಸ್ ಕೊಡುವ ಸಾಧ್ಯತೆಗಳನ್ನು ಅಲ್ಲಗಳೆಯಲಾಗದು.
ತೆಗ್ಗು ಮುಚ್ಚಲು ಹಣವಿಲ್ಲ..
ಪ್ರತಿವರ್ಷ ಬೆಳಗಾವಿಯಲ್ಲಿ ಗಣೇಶೋತ್ಸವ ಸಂದರ್ಭದಲ್ಲಿ ರಸ್ತೆಯಲ್ಲಿ ಬಿದ್ದಿರುವ ತೆಗ್ಗು ಗುಂಡಿಗಳನ್ನು ಮುಚ್ಚುವ ಕೆಲಸ ಆಗುತ್ತಿತ್ತು,
ಗಮನಿಸಬೇಕಾದ ಸಂಗತಿ ಎಂದರೆ, ಈ ಬಾರಿ ಅದೂ ಆಗಿಲ್ಲ. ಅಂದರೆ ಪಾಲಿಕೆಯ ಆಥರ್ಿಕ ಸ್ಥಿತಿ ಯಾವ ಮಟ್ಟಕ್ಕೆ ಹೋಗಿದೆ ಎನ್ನುವುದನ್ನು ಊಹಿಸಬಹುದು.