ಧ್ವನಿಯಿಲ್ಲದವರಿಗೆ ಧ್ವನಿಯಾದ ರಾಹುಲ್‌

ಧ್ವನಿಯಿಲ್ಲದವರಿಗೆ ಧ್ವನಿಯಾದ ರಾಹುಲ್‌ ಜಾರಕಿಹೊಳಿ: ಡಾ. ಅಲ್ಲಮಪ್ರಭು ಮಹಾಸ್ವಾಮೀಜಿ

ಕೆಪಿಟಿಸಿಎಲ್‌ ಸಭಾಂಗಣದಲ್ಲಿ ರಾಹುಲ್‌ ಜಾರಕಿಹೊಳಿ 25ನೇ ಜನ್ಮದಿನಾಚರಣೆ- ಸಕಲ ಶ್ರೀಗಳು ಸತ್ಕರಿಸಿ, ಆಶೀರ್ವಾದ ಪಡೆದ ರಾಹುಲ್‌ ಜಾರಕಿಹೊಳಿ

ಬೆಳಗಾವಿ: ಜೀವನದಲ್ಲಿ ಸರಳತೆ ಮೈಗೂಡಿಸಿಕೊಂಡು, ಚಿಕ್ಕ ವಯಸ್ಸಿನಲ್ಲಿಯೇ ಯುವಕರು, ದೀನ, ದಲಿತರು ಸೇರಿದಂತೆ ಧ್ವನಿ ಇಲ್ಲದವರ ಧ್ವನಿಯಾಗಿ ಕಾರ್ಯ ನಿರ್ವಹಿಸುತ್ತಿರುವ ರಾಹುಲ್‌ ಜಾರಕಿಹೊಳಿ ಅವರ ಕಾರ್ಯ ಶ್ಲಾಘನೀಯ ಎಂದು ನಾಗನೂರು ರುದ್ರಾಕ್ಷಿಮಠದ ಡಾ. ಅಲ್ಲಮಪ್ರಭು ಮಹಾಸ್ವಾಮೀಜಿ ಅವರು ಹೇಳಿದರು.

ನಗರದ ಕೆಪಿಟಿಸಿಎಲ್‌ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ರಾಹುಲ್‌ ಜಾರಕಿಹೊಳಿಯವರ 25ನೇ ಜನ್ಮದಿನಾಚರಣೆ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿ, ಯುವ ನಾಯಕ ರಾಹುಲ್‌ ಜಾರಕಿಹೊಳಿಗೆ ಆಶೀರ್ವದಿಸಿ ಮಾತನಾಡಿದ ಅವರು, ರಾಹುಲ್‌ ಜಾರಕಿಹೊಳಿ ಈ ನಾಡಿನ ಭವಿಷ್ಯದ ಆಶಾಕಿರಣವಾಗಲೆಂದು ಹರಿಸಿದರು.

ಕಳೆದ ಕೆಲವು ವರ್ಷಗಳಿಂದ ಹಲವು ಕ್ಷೇತ್ರದಲ್ಲಿ ರಾಹುಲ್‌ ಗುರುತಿಸಿಕೊಂಡಿದ್ದು, ಭವಿಷ್ಯದಲ್ಲಿ ಇನ್ನಷ್ಟು ಉನ್ನತ ಸ್ಥಾನದಲ್ಲಿ ಗುರುತಿಸಿಕೊಳ್ಳಲಿ, ತಂದೆ ಸತೀಶ್‌ ಜಾರಕಿಹೊಳಿ ಅವರಂತೆ ಆಧುನಿಕತೆಗೆ ಹೆಚ್ಚಿನ ಆದ್ಯತೆ ನೀಡಲೆಂದು ಸಲಹೆ ನೀಡಿದರು.

ಕಾರಂಜಿ ಮಠದ ಶ್ರೀ. ಗುರುಸಿದ್ದ ಮಹಾಸ್ವಾಮೀಜಿ ಮಾತನಾಡಿ, ಜನರ ಕಷ್ಟ, ದುಃಖ, ದುಮ್ಮಾನಗಳಿಗೆ ಜಾರಕಿಹೊಳಿ ಪರಿವಾರ ಸ್ಪಂದಿಸುತ್ತಿದೆ. ಅದೇ ದಾರಿಯಲ್ಲಿ ಸಾಗುತ್ತಿರುವ ರಾಹುಲ್‌ ಜಾರಕಿಹೊಳಿಯವರು ಜಾತಿ, ಮತ, ಪಂತ ಮೀರಿ ಎಲ್ಲ ಕ್ಷೇತ್ರದಲ್ಲಿ ವಿವಿಧ ಚಟುವಟಿಕೆ ಹಮ್ಮಿಕೊಳ್ಳುವ ಮೂಲಕ ಯುವಕರನ್ನು ಪ್ರೋತ್ಸಾಹಿಸುವ ಕೆಲಸ ಮಾಡುತ್ತಿದ್ದು, ದೇವರು ಅವರಿಗೆ ಒಳ್ಳೆಯ ಆರೋಗ್ಯ, ಆಯುಷ್ಯ ನೀಡಲೆಂದು ಆಶೀರ್ವದಿಸಿದರು.

ಹುಣಸಿಕೊಳ್ಳ ಶೂನ್ಯ ಸಂಪಾದನಾ ಮಠದ ಸಿದ್ದ ಬಸವದೇವರು ಮಾತನಾಡಿ, ಅಧಿಕಾರ, ಶ್ರೀಮಂತಿಕೆ ಇದ್ದರೂ ಸತೀಶ್‌ ಜಾರಕಿಹೊಳಿಯವರು ತಮ್ಮ ಮಕ್ಕಳಿಗೆ ಒಳ್ಳೆಯ ಸಂಸ್ಕಾರ ನೀಡಿದ್ದಾರೆ. ತಂದೆಯ ಹಾದಿಯಲ್ಲಿ ರಾಹುಲ್‌ ಸಾಗುತ್ತಿದ್ದು, ಅವರ ಜನ್ಮದಿನ ನಿಮಿತ್ತ ಕ್ರೀಡೆ, ರಕ್ತದಾನ ಶಿಬಿರ, ಉಚಿತ ಕಣ್ಣಿನ ತಪಾಸಣಾ ಶಿಬಿರ ಏರ್ಪಡಿಸಿದ್ದು ವಿಶೇಷ. ತಾವು ಬೆಳೆಯುವ ಜತೆಗೆ ಸರ್ವ ಸಮಾಜದವರನ್ನು ಬೆಳೆಸುತ್ತಿರುವ ಅವರ ಕಾರ್ಯ ಶ್ಲಾಘನೀಯ ಎಂದರು.

ಹತ್ತರಗಿ ಕಾರಿ ಮಠದ ಶ್ರೀ ಗುರು ಸಿದ್ದೇಶ್ವರ ಮಹಾಸ್ವಾಮೀಜಿ ಮಾತನಾಡಿ, ತಂದೆಯಂತೆ ದೂರದೃಷ್ಟಿ ಇಟ್ಟುಕೊಂಡು ರಾಹುಲ್ ಜಾರಕಿಹೊಳಿ ಶೈಕ್ಷಣಿಕ, ಸಾಮಾಜಿಕವಾಗಿ ಕಾರ್ಯ ನಿರ್ವಹಿಸುವ ಜತೆಗೆ ಸಾವಿರಾರೂ ಯುವಕರಿಗೆ ಉದ್ಯೋಗ ನೀಡುವ ಕೆಲಸ ಮಾಡುತ್ತಿದ್ದಾರೆ. ಅವರ ದೂರದೃಷ್ಟಿ ವಿಚಾರ ಅವರನ್ನು ಇನ್ನಷ್ಟು ಎತ್ತರಕ್ಕೆ ಬೆಳೆಸುತ್ತದೆ ಎಂದರು.

ಯುವ ನಾಯಕ ರಾಹುಲ್ ಜಾರಕಿಹೊಳಿ ಮಾತನಾಡಿ, ಅಭಿಮಾನಗಳೊಂದಿಗೆ ಜನ್ಮದಿನ ಆಚರಿಸಿಕೊಳ್ಳುವುದು ಸಂತಸ ತಂದಿದೆ. ತಂದೆ ಸತೀಶ್ ಜಾರಕಿಹೊಳಿಯವರ ನಿರ್ದೇಶನದಂತೆ ನೂರಾರು ಕಾರ್ಯಕ್ರಮ ಸತೀಶ್ ಜಾರಕಿಹೊಳಿ ಫೌಂಡೇಶನ್ ಮೂಲಕ‌ ಮಾಡುತ್ತಿದ್ದೇವೆ. ಇದುವರೆಗೆ ಸತೀಶ್ ಶುಗರ್ಸ್ ಅವಾರ್ಡ್ ಗೋಕಾಕಗೆ ಅಷ್ಟೇ ಸಮೀತವಾಗಿತ್ತು. ಆದರೆ ಈ ಕಾರ್ಯಕ್ರಮ ಮುಂದಿನ ದಿನಗಳಲ್ಲಿ ಚಿಕ್ಕೋಡಿಯಲ್ಲಿಯೂ ಮಾಡುತ್ತೇವೆ ಎಂದು ತಿಳಿಸಿದರು.

ತಂದೆ, ಸಚಿವ ಸತೀಶ್‌ ಜಾರಕಿಹೊಳಿ ಅವರಿಗೆ ಜನ ಸುಮ್ಮನೇ ಸಾವಕಾರ ಎಂದು ಕರೆಯುತ್ತಿಲ್ಲ. ಅದು ಅವರ ಶ್ರೀಮಂತಿಕೆಯಿಂದ ಅಲ್ಲ. ಅವರ ಸಮಾಜಮುಖಿ ಕಾಳಜಿ, ಅವರು ಕಳೆದ ಇಪ್ಪತ್ತು ವರ್ಷಗಳಿಂದ ಮಾಡುತ್ತಿರುವ ಜನ ಸೇವೆಯಿಂದ ಅವರನ್ನು ಸಾವಕಾರ ಎನ್ನುತ್ತಿದ್ದಾರೆ ಎಂದ ಅವರು, ನಿಮ್ಮ ಪ್ರೀತಿ, ವಿಶ್ವಾಸ ಸದಾ ನಮ್ಮ ಮೇಲಿರಲಿ, ತಮ್ಮ ಸಮಸ್ಯೆಗಳಿಗೆ ನಾವು ಯಾವಾಗಲೂ ಪ್ರಾಮಾಣಿಕವಾಗಿ ಸ್ಪಂದಿಸುತ್ತೇವೆ ಎಂದು ಇದೇ ವೇಳಿ ತಿಳಿಸಿದರು.

ನಾಗನೂರು ರುದ್ರಾಕ್ಷಿಮಠದ ಡಾ. ಅಲ್ಲಮಪ್ರಭು ಮಹಾಸ್ವಾಮೀಜಿ, ಕಾರಂಜಿ ಮಠದ ಶ್ರೀ. ಗುರುಸಿದ್ದ ಮಹಾಸ್ವಾಮೀಜಿ, ಹುಣಸಿಕೊಳ್ಳ ಶೂನ್ಯ ಸಂಪಾದನಾ ಮಠದ ಸಿದ್ದ ಬಸವದೇವರು, ಹತ್ತರಗಿ ಕಾರಿ ಮಠದ ಶ್ರೀ ಗುರು ಸಿದ್ದೇಶ್ವರ ಮಹಾಸ್ವಾಮೀಜಿ ಅವರನ್ನು ಯುವ ನಾಯಕ ರಾಹುಲ್‌ ಜಾರಕಿಹೊಳಿ ಅವರು ಸತ್ಕರಿಸಿ, ಆಶೀರ್ವಾದ ಪಡೆದರು. ಇದೇ ವೇಳೆ ಸಕಲ ಶ್ರೀಗಳು ರಾಹುಲ್‌ ಜಾರಕಿಹೊಳಿಗೆ ಸತ್ಕರಿಸಿ, ಆಶೀರ್ವದಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಗ್ರಾಮೀಣ ಅಧ್ಯಕ್ಷ ವಿನಯ ನಾವಲಗಟ್ಟಿ, ಬೆಳಗಾವಿ ಜಿಲ್ಲಾ ಕಾರ್ಯದರ್ಶಿ ಪ್ರದೀಪ ಎಂ,ಜೆ, ಜಿಪಂ ಮಾಜಿ ಸದಸ್ಯರಾದ ಸಿದ್ದು ಸುಣಗಾರ, ಕೆಪಿಸಿಸಿ ಸದಸ್ಯ ಮಲಗೌಡಾ ಪಾಟೀಲ, ಮುಖಂಡರಾದ ಮಹಾಂತೇಶ ಮಗದುಮ್ಮ, ಅರುಣ ಕಟಾಂಬಳೆ, ಶಿವು ಪಾಟೀಲ್, ಕೆಪಿಸಿಸಿ ಸದಸ್ಯೆ ಆಯಿಷಾ ಸನದಿ ಸೇರಿದಂತೆ ಸಾವಿರಾರೂ ಕಾಂಗ್ರೆಸ್‌ ಕಾರ್ಯಕರ್ತರು, ರಾಹುಲ್‌ ಜಾರಕಿಹೊಳಿ ಅಭಿಮಾನಿ ಬಳಗದ ಸದಸ್ಯರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!