ಹೂತಿದ್ದ ಶವ ಹೊರಕ್ಕೆ

ಸಂತೋಷ ಪದ್ಮಣ್ಣವರ ಕೊಲೆಯ ಶಂಕೆ: ಪೊಲೀಸರಿಗೆ ದೂರು ನೀಡಿದ ಪುತ್ರಿ

ಬೆಳಗಾವಿ : ಇಲ್ಲಿನ ಆಂಜನೇಯ ನಗರದ ನಿವಾಸಿ ಸಂತೋಷ ದುಂಡಪ್ಪ ಪದ್ಮಣ್ಣವರ ಅವರ ಹಠಾತ್ ಸಾವಿನ ಕುರಿತು ಅವರ ಪುತ್ರಿ ಸಂಜನಾ ಅವರು ಸಂಶಯ ವ್ಯಕ್ತಪಡಿಸಿರುವುದರಿಂದ ಮಾಳಮಾರುತಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತೀವ್ರ ತನಿಖೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

ತನಿಖೆ ನಡೆಸುತ್ತಿರುವ ಪೋಲೀಸರ ಪ್ರಾಥಮಿಕ ತನಿಖೆಯಿಂದ ಕಂಡು ಬಂದ ಅಂಶಗಳು

ಮೃತ ಸಂತೋಷ ಪದ್ಮಣ್ಣವರ ಅವರು ಸಂತೋಷ ಫೈನಾನ್ಸ ಹೆಸರಿನಲ್ಲಿ ಬಡ್ಡಿಯಿಂದ ಜನರಿಗೆ ಸಾಲ ಕೊಡುತ್ತಿದ್ದರು. ಅವರಿಗೆ ಬರಬೇಕಾಗಿದ್ದ ಮೊತ್ತ ಅಸಲು, ಬಡ್ಡಿ ಸಮೇತ ಕೆಲವು ಕೋಟಿಗಳಷ್ಟು ಎನ್ನಲಾಗಿದೆ. ಇದಕ್ಕಿಂತ ಮುಖ್ಯ ವಿಷಯವೆಂದರೆ ಸಂತೋಷ ಪತ್ನಿ ಉಮಾ ಅಲ್ಲದೇ ಅವರು ಇನ್ನೊಂದು ವಿವಾಹ ಮಾಡಿಕೊಂಡಿದ್ದರು ಮತ್ತು ತಮ್ಮ ಎರಡನೇ ಪತ್ನಿಗೇ ಹೆಚ್ಚು ಪ್ರಾಧಾನ್ಯತೆ ನೀಡಿ ಅವರಿಗೆ ಹೆಚ್ಚು ಹಣ ವೆಚ್ಚ ಮಾಡುತ್ತಿದ್ದರು ಎನ್ನಲಾಗಿದೆ. ಇದು ಸಂತೋಷ ಮತ್ತು ಮೊದಲ ಪತ್ನಿ ಉಮಾ ನಡುವೆ ಹಲವು ಬಾರಿ ಕೌಟುಂಬಿಕ ಘರ್ಷಣೆಗೆ ಕಾರಣವಾಗಿದ್ದು ಇದೇ ಕಾರಣದಿಂದ ಅವರ ಹತ್ಯೆ ನಡೆದಿರಬಹುದೇ ಅಥವಾ ಬೇರೆ ಕಾರಣದಿಂದ ಅವರ ಸಾವು ಸಂಭವಿಸಿದೆಯೇ ಎಂಬುದರ ತನಿಖೆಯನ್ನು ಪೊಲೀಸರು ಕೈಗೊಂಡಿದ್ದಾರೆ ಎಂದು ಪೊಲೀಸ ಮೂಲಗಳಿಂದ ತಿಳಿದು ಬಂದಿದೆ.

ಕೋಟ್ಯಾಂತರ ರೂಪಾಯಿ ಹಣಕಾಸಿನ ಲೇವಾದೇವಿ ಮಾಡುತ್ತಿದ್ದ ಎನ್ನಲಾಗುವ ಕೋಟ್ಯಾಧಿಪತಿ ಸಂತೋಷ ಅವರು ಇದೇ ತಿಂಗಳು 9ನೇ ತಾರೀಖು ಹಠಾತ್ ನೇ ಮರಣ ಹೊಂದಿದ್ದರು. ಬೆಂಗಳೂರಿನಲ್ಲಿ ಇಂಜಿನೀಯರಿಂಗ ವಿದ್ಯಾಭ್ಯಾಸ ಮಾಡುವ ಸಂತೋಷ ಅವರ 18 ವರ್ಷದ ಪುತ್ರಿ ಸಂಜನಾ ಅವರು ತಂದೆಯ ಸಾವಿನ ಸುದ್ದಿ ಕೇಳಿ ಧಾವಿಸಿ ಬಂದಿದ್ದರು. ಅಂತ್ಯಕ್ರಿಯೆಯ ನಂತರ ಮನೆಗೆ ಬಂದ ಸಂಜನಾ ಅವರು ತಂದೆಯ ಆಕಸ್ಮಿಕ ಸಾವಿನ ಕುರಿತು ಸಂಶಯಗೊಂಡು ತಾಯಿಯನ್ನು ಕೇಳಿದ್ದಾರೆ ಹಾಗು ಆ ದಿನದ ಮನೆಯ ಸಿಸಿಟಿವಿ ಕ್ಯಾಮೆರಾದ ದೃಶ್ಯಗಳನ್ನು ತೋರಿಸಲು ಕೇಳಿದ್ದಾರೆ. ಅದಕ್ಕೆ ತಾಯಿ “ಈಗಷ್ಟೇ ಅಂತ್ಯಸಂಸ್ಕಾರದಿಂದ ಬಂದಿರುವಿ, ಮೊದಲು ಸ್ನಾನ ಮಾಡಿ ಬಾ ನಂತರ ನೋಡುವಿ” ಎಂದು ಕಳುಹಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!