ಚಿಕ್ಕೋಡಿ.
ಕನ್ನಡಕ್ಕೆ ಆದಿ ಕವಿ ಪಂಪನಾದರೆ ಭಾರತ ದೇಶಕ್ಕೆ ಆದಿ ಕವಿ ಮಹರ್ಷಿ ವಾಲ್ಮೀಕಿ ಆಗಿದ್ದಾರೆ ಎಂದು ಕಾಗವಾಡೆ ಪದವಿಪೂರ್ವ ಕಾಲೇಜು ನಸಲಾಪುರ್ ಉಪನ್ಯಾಸಕ ಸಿದ್ದಪ್ಪ ಹನಗಂಡಿ ಹೇಳಿದರು.
ಇತ್ತೀಚಿಗೆ ಚೌಸನ್ ಶಿಕ್ಷಣ ಮಹಾವಿದ್ಯಾಲಯ ಮಹರ್ಷಿ ವಾಲ್ಮೀಕಿ ಅವರ ಜಯಂತಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.

ಜಾತಿ ರಹಿತ, ವರ್ಗ ರಹಿತ ಶೋಷಣೆ ರಹಿತ ಸಮಪಾಲು ಸಮ ಬಾಳು, ಸಮಾನ ಅವಕಾಶದ ಸುಖಿ ಸಮಾಜದ ಸಂದೇಶವನ್ನು ವಾಲ್ಮೀಕಿ ಮಹರ್ಷಿಗಳು ಮನುಕುಲಕ್ಕೆ ಸಾರಿರುತ್ತಾರೆ. ವಾಲ್ಮೀಕಿ ಮಹರ್ಷಿಗಳು ಸಾರಿರುವ ಸಂದೇಶ ಸರ್ವಕಾಲಿಕ ಸತ್ಯವಾಗಿದೆ ಎಂದರು. ಜೀವನದಲ್ಲಿ ಆಲೋಚನೆಗಳು ಸಕಾರಾತ್ಮಕವಾಗಿ ಇದ್ದರೆ ನೀವು ಹಾಕಿಕೊಂಡ ಗುರಿಯನ್ನು ಮುಟ್ಟಲು ಸಾಧ್ಯವಿದೆ ಎಂದು ಹೇಳಿದರು.
ಡಾ. ಕನಕಾಚಲ ಕನಕಗಿರಿಪ್ರಾಸ್ತಾವಿಕವಾಗಿ ಮಾತನಾಡಿದರು.
ಇದೇ ಸಂದರ್ಭದಲ್ಲಿ ಮಹಾವಿದ್ಯಾಲಯದ ಪ್ರಶಿಕ್ಷಣಾರ್ಥಿಗಳಾದ ಆರತಿ ತಳವಾರ್ ಅನ್ನಪೂರ್ಣ, ಐಶ್ವರ್ಯ ನಾವಿ,ದೇವಿತಾ,ಕಿರ್ತಿ. ಮಹರ್ಷಿ ವಾಲ್ಮೀಕಿ ಅವರ ವಿಚಾರಗಳು ಕುರಿತು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು
ಪ್ರಾಧ್ಯಾಪಕ ಡಾ. ಎನ್ ಎಸ್ ಶಿಂಧೆ ಅಧ್ಯಕ್ಷತೆವಹಿಸಿದ್ದರು.
ಪ್ರಶಿಕ್ಷಣಾರ್ಥಿಯಾದ ಶಿವಲೀಲಾ ಹೊನ್ನಾಳಿ ಪ್ರಾರ್ಥನ ಗೀತೆ ಹಾಡಿದರು. ಪ್ರತಿಕ್ಷಾ ಕಾಂಬಳೆ ಸ್ವಾಗತಿಸಿದರು ಕಾರ್ಯಕ್ರಮದಲ್ಲಿ ಪ್ರಾಧ್ಯಾಪಕರಾದ ಸುಜಾತ ಚಂದ್ಗಡೆ. ಉಪಸ್ಥಿತರಿದ್ದರು. ಸುನೀತಾ ಹಾಗೂ ಸವಿತಾ ಗಲಗಲಿ ಕಾರ್ಯಕ್ರಮವನ್ನು ನಿರೂಪಿಸಿದರು.