ಬೆಳಗಾವಿ..
ಅಂತೂ ಇಂತೂ ರಮೇಶ ಕತ್ತಿ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸ್ಥಾನಕ್ಕೆ ನೀಡಿದ ರಾಜೀನಾಮೆ ನಿನ್ನೆ ಅಂಗೀಕಾರವಾಗಿದೆ.
ಹೀಗಾಗಿ ಮುಂದಿನ ಅಧ್ಯಕ್ಷ ಯಾರು ಎನ್ನುವ ಚರ್ಚೆ ರಾಜಕೀಯವಲಯದಲ್ಲಿ ನಡೆದಿದೆ. ಬೆಳಗಾವಿ ರಾಜಕಾರಣದ ಕೇಂದ್ರ ಬಿಂದು ಬೆಳಗಾವಿ ಡಿಸಿಸಿ ಬ್ಯಾಂಕ್. ಹೀಗಾಗಿ ಅಧ್ಯಕ್ಷ ಯಾರಾಗ್ತಾರೆ ಎನ್ನುವ ಕುತೂಹಲ ಬಹುತೇಕರನ್ನು ಕಾಡುತ್ತಿದೆ.

ಸಧ್ಯ ನಡೆಯುತ್ತಿರುವ ಚರ್ಚೆಯ ಪ್ರಕಾರ ಮಾಜಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಮತ್ತು ಕಿತ್ತೂರಿನ ಮಾಜಿ ಶಾಸಕ ಮಹಾಙತೇಶ ದೊಡಗೌಡರ ಹೆಸರು ಅಧ್ಯಕ್ಷ ಸ್ಥಾನದ ರೇಸನಲ್ಲಿ ಕೇಳಿ ಬರುತ್ತಿದೆ.

ಆದರೆ ಬೆಳಗಾವಿ ರಾಜಕಾರಣ ಬಲ್ಲವರು ಹೇಳುವುದನ್ನು ಮನಗಂಡರೆ ಅಣ್ಣಾಸಾಹೇಬ ಜೊಲ್ಲೆಗೆ ಸ್ವಲ್ಪ ಕಷ್ಟ ಎನ್ನುವ ಮಾತಿದೆ. ಅವರಿಗೆ ಮಾಜಿ ಡಿಸಿಎಂ ಹಾಗೂ ಹಾಲಿ ಅಥಣಿ ಶಾಸಕ ಲಕ್ಷ್ಮಣ ಸವದಿ ಕೂಡ ವಿರೋಧ ವ್ಯಕ್ತಪಡಿಸಬಹುದು. ಜೊತೆಗೆ ಜಾರಕಿಹೊಳಿ ಗುಂಪು ಸಹ ಜೊಲ್ಲೆಗೆ ವಿರೋಧ ವ್ಯಕ್ತಪಡಿಸಲು ಅನೇಕ ಕಾರಣಗಳಿವೆ ಅಷ್ಟೆ ಅಲ್ಲ ಈಗಿನ ಪರಿಸ್ಥಿತಿಗೆ ಅಣ್ಣಾಸಾಹೇಬ ಜೊಲ್ಲೆ ಕಾರಣ ಎನ್ನುವ ಸಿಟ್ಡು ರಮೇಶ ಕತ್ತಿಗೆ ಇದೆ. ಹೀಗಾಗಿ ಕತ್ತಿ ಗುಂಪು ಸಹ ಅಣ್ಣಾಸಾಹೇಬಗೆ ಸಾಥ್ ಕೊಡುವುದಿಲ್ಲ

ಹೀಗಾಗಿ ಇನ್ನು ಉಳಿದಿರುವುದು ಕಿತ್ತೂರು ಮಾಜಿ ಶಾಸಕ ಮಹಾಂತೇಶ ದೊಡಗೌಡರು ಮಾತ್ರ. ಇವರು ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಕಟ್ಟಾ ಶಿಷ್ಯ ಬಳಗದಲ್ಲಿ ಗುರುತಿಸಿಕೊಂಡವರು. ರಾಜಕಾರಣ ಹೊರತುಪಡಿಸಿಯೂ ಇವರ ನಡುವೆ ಗುರು ಶಿಷ್ಯರ ಸಂಬಂಧವಿದೆ. ಮೇಲಾಗಿ ಮಹಾಂತೇಶ ಅವರ ಹೆಸರನ್ನು ಪ್ರಸ್ತಾಪ ಮಾಡಿದರೆ ಆಯ್ಕೆ ಜವಾಬ್ದಾರಿ ಹೊತ್ತವರು ನೋ ಅನ್ನೋ ಮಾತೇ ಬರಲ್ಲ. ಇದ್ದುದರಲ್ಲಿಯೇ ಎಲ್ಲರ ಜೊತೆ ಹೊಂದಾಣಿಕೆ ಮಾಡಿಕೊಂಡು ಹೋಗುವ ವ್ಯಕ್ತಿತ್ವ ಹೊಂದಿದವರು ಎನ್ನುವ ಮಾತಿದೆ. ಹೀಗಾಗಿ ಬಹುತೇಕ ನಿರ್ದೇಶಕರ ಒಲವು ಮಹಾಂತೇಶರತ್ತ ಇದೆ ಎನ್ನಲಾಗುತ್ತಿದೆ.