ವಕ್ಫ್ ಆಸ್ತಿ..ಸಿದ್ದು ಡಬಲ್ ಗೇಮ್?

ಬೆಂಗಳೂರು.

ರಾಜ್ಯವ್ಯಾಪಿ ಈಗ ವಕ್ಫ್ ಆಸ್ತಿ ಕೋಲಾಹಲ ಸೃಷ್ಟಿಯಾಗಿದೆ. ಕಂಡ ಕಂಡವರ ಆಸ್ತಿ ತಮ್ಮದೆಂದು ಹೇಳುತ್ತ ಸಾಗಿರುವ ವಕ್ಫ್ ವಿರುದ್ಧ ರೈತ ಸಮುಸಾಯ ಬಂಡೆದ್ದಿದೆ.

ವಿಜಯಪುರದಲ್ಲಿ ಸಚಿವ ಜಮೀರ್ ಅಹ್ಮದ ಆಡಿದ ಮಾತಿನಿಂದ ಬಿಜೆಪಿ ಅಷ್ಟೇ ಅಲ್ಲ ರೈತ ಸಮುದಾಯ ಕೆರಳಿ ಕೆಂಡವಾಗಿದೆ.

ಉಪಚುನಾವಣೆ ಹೊತ್ತಿಲಲ್ಲಿ ಇದರಿಂದ ಕಾಂಗ್ರೆಸ್ ಗೆ ಪೆಟ್ಟು ಬೀಳಬಹುದು ಎಂದು ಅರಿತ ಮುಖ್ಯಮಂತ್ರಿ ಸಿದ್ಧರಾಮಯ್ಯ ವಕ್ಫ ರೈತರಿಗೆ ನೀಡಿದ್ದ ‌ನೋಟೀಸನ್ನು ವಾಪಸ್ಸು ಪಡೆದುಕೊಂಡಿದ್ದಾಗಿ ಹೇಳಿದ್ದಾರೆ.

ಆದರೆ ಇದೆಲ್ಲದರ ನಡುವೆ ರಾಜ್ಯ ಸರ್ಕಾರ ವಕ್ಫ್ ಆಸ್ತಿ ರಕ್ಷಣೆಗಾಗಿ ಬರೊಬ್ಬರಿ 32 ಕೋಟಿ ರೂ ಬಿಡುಗಡೆ ಮಾಡಿದೆ.

ಈ ಕುರಿತಂತೆ ಆದೇಶ ಪತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಆದರೆ ಆ ಆದೇಶ ಅಸಲಿಯೋ ಅಥವಾ ನಕಲಿಯೋ ಎನ್ನುವುದು ಸ್ಪಷ್ಟವಾಗಬೇಕಿದೆ.

ಕಳೆದ 7 Feb 2024 ರಂದು ಈ ಆದೇಶ ಹೊರಬಿದ್ದಿದೆ 416 ವಕ್ಫ್ ಆಸ್ತಿಗೆ ಆವರಣ ಗೋಡೆ. ಮುಂತಾದವುಗಳಿಗಾಗಿ ಈ ಅನುಸಾನ ಬಳಕೆ ಮಾಡಬೇಕು ಎಂದು ಸೂಚಿಸಲಾಗಿದೆ.

ಸಿದ್ಧರಾಮಯ್ಯ ಏನಂದ್ರು?

ಬೆಂಗಳೂರು: ವಕ್ಫ್‌ ವಿಚಾರದಲ್ಲಿ ರೈತರಿಗೆ ನೀಡಲಾಗಿರುವ ನೋಟಿಸ್‌ಗಳನ್ನು ತಕ್ಷಣದಿಂದಲೇ ವಾಪಸ್‌ ಪಡೆಯುವಂತೆ ಅಧಿಕಾರಿಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಖಡಕ್‌ ಸೂಚನೆ ನೀಡಿದ್ದಾರೆ.

ಮುಖ್ಯಮಂತ್ರಿಗಳು ಇಂದು ಕಂದಾಯ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಹಾಗೂ ಮತ್ತು ವಕ್ಫ್‌ ಮಂಡಳಿಯ ಹಿರಿಯ ಅಧಿಕಾರಿಗಳ ಜೊತೆ ಸುದೀರ್ಘ ಸಭೆ ನಡೆಸಿದರು. ವಕ್ಫ್‌ ಜಮೀನು ವಿಚಾರದಲ್ಲಿ ಇತ್ತೇಚೆಗೆ ನಡೆದಿರುವ ಬೆಳವಣಿಗೆಗಳ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

Leave a Reply

Your email address will not be published. Required fields are marked *

error: Content is protected !!