ಸಹೋದರರಾದ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ, ರಮೇಶ ಜಾರಕಿಹೊಳಿ ಹಾಗೂ ನಾನು ಒಂದೇ ವೇದಿಕೆಯಲ್ಲಿ ಕೂಡಿರುವುದು ದೇವರ ಅನುಗ್ರಹ. ಹೀಗೇ ದೇವರ ಆಶೀರ್ವಾದದಿಂದ ಕೂಡಿ ಇರಲಿ ಎಂದು ಬಯಸುತ್ತೇನೆ. ಮೂವರೂ ಸೇರುವ ಮೂಲಕ ಜಿಲ್ಲೆಗೆ ಇನ್ನೂ ಹೆಚ್ಚಿನ ಅನುಕೂಲ ಆಗಲಿ. -ಬಾಲಚಂದ್ರ ಜಾರಕಿಹೊಳಿ
ಬೆಳಗಾವಿ: ಪಕ್ಷ ರಾಜಕಾರಣ ಬದಿಗೊತ್ತಿ ಈ ಬಾರಿ ಸಹಕಾರಿ ತತ್ವದಡಿ 9 ತಿಂಗಳ ಅವಧಿಗೆ ಬೆಳಗಾವಿ ಡಿಸಿಸಿ ಬ್ಯಾಂಕಿಗೆ ನೂತನ ಅಧ್ಯಕ್ಷರನ್ನಾಗಿ ರಾಯಬಾಗದ ಅಪ್ಪಾಸಾಹೇಬ್ ಕುಲಗೊಡೆ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ಡಿಸಿಸಿ ಬ್ಯಾಂಕಿನ ಎಲ್ಲ ನಿರ್ದೇಶಕರನ್ನು ವಿಶ್ವಾಸಕ್ಕೆ ತೆಗೆದುಕೊಂಡ ಜಾರಕಿಹೊಳಿ ಸಹೋದರರು ಈ ಆಯ್ಕೆ ಮಾಡಿದರು,
ಎಲ್ಲರನ್ನೂ ವಿಶ್ವಾಸಕ್ಕೆ ತಕ್ಕಂತೆ ಕೆಲಸ ಮಾಡುವೆ…. ಜಿಲ್ಲೆಯ ಹಿರಿಯ ಮುಖಂಡರು ಪಕ್ಷಭೇದ ಮರೆತು ನನ್ನನ್ನು ಅವಿರೋಧವಾಗಿ ಸರ್ವಾನುಮತದಿಂದ ಆಯ್ಕೆ ಮಾಡಿದ್ದಾರೆ. ನಾಯಕರು ನನ್ನ ಮೇಲೆ ಇಟ್ಟಿರುವ ವಿಶ್ವಾಸಕ್ಕೆ ತಕ್ಕಂತೆ ಹಾಗೂ ಬ್ಯಾಂಕ್ ನ ನಿರ್ದೇಶಕರೂ ಸೇರಿದಂತೆ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡುತ್ಥೇನೆ.
ಅಪ್ಪಾಸಾಹೇಬ ಕುಲಗೋಡೆ,
ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ, ಬೆಳಗಾವಿ ಹಾ;ಲು ಒಕ್ಕೂಟದ ಅಧ್ಯಕ್ಷರೂ ಆಗಿರುವ ಶಾಸಕ ಬಾಲಚಂದ್ರ ಜಾರಕಿಹೊಳಿ ಮತ್ತು ಗೋಕಾಕ ಶಾಸಕ ರಮೇಶ ಜಾರಕಿಹೊಳಿ ಅವರು ನಡೆಸಿದ ರಹಸ್ಯ ಸಭೆಯಲ್ಲಿ ಈ ಅಚ್ಚರಿ ಆಯ್ಕೆ ನಡೆಯಿತು. ಮೂತಲ: ರಾಯಬಾಗ ತಾಲುಕಿನ ಅಪ್ಪಾಸಾಹೇಬ ಕುಲಗೋಡೆ ಅವರು ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಂಡವರು. ಆದರೆ ಈ ಆಯ್ಕೆ ಮಾಡುವಾಗ ಎಲ್ಲ ಪಕ್ಷವನ್ನು ಬದಿಗೊತ್ತಿ ಸಹಕಾರಿ ಮೇಲೆ ಆಯ್ಕೆ ಮಾಡಲಾಯಿತು,
ಇನ್ನು ಮುಂಬರುವ ಸಹಕಾರಿ ಸಂಸ್ಥೆಗಳ ಚುನಾವಣೆ ಕೂಡ ಇದೇ ರೀತಿ ಅವಿರೋಧವಾಗಿ ಆಯ್ಕೆಯಾದರೆ ಸಹಕಾರಿ ಸಂಸ್ಥೆಗಳು ಬೆಳೆಯುತ್ತವೆ ಎಂದು ಬಾಲಚಂದ್ರ ಜಾರಕಿಹೊಳಿ ಹೇಳಿದರು.
ರೈತರ ಹಿತದೃಷ್ಟಿಯಿಂದ ಸರ್ವಾನುಮತದ ಆಯ್ಕೆ…. ಅನಿರೀಕ್ಷಿತವಾಗಿ ತೆರವಾಗಿದ್ದ ಬೆಳಗಾವಿ ಡಿಸಿಸಿ ಬ್ಯಾಂಕ್ ನ ಅಧ್ಯಕ್ಷರಾಗಿ ರಾಯಬಾಗದ ಹಿರಿಯ ಸಹಕಾರಿ ಧುರೀಣ ಅಪ್ಪಾಸಾಹೇಬ ಕುಲಗೋಡೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಬ್ಯಾಂಕ್ ಹಿತದೃಷ್ಟಿಯಿಂದ ಎಲ್ಲಕ್ಕೂ ಹೆಚ್ಚಾಗಿ ಜಿಲ್ಲೆಯ ರೈತರ ಹಿತದೃಷ್ಟಿಯಿಂದ ಎಲ್ಲರೂ ಸೇರಿ ಪಕ್ಷಾತೀತವಾಗಿ ಸರ್ವಾನುಮತದಿಂದ ಈ ಆಯ್ಕೆ ಮಾಡಿದ್ದೇವೆ. ಪಕ್ಷಗಳನ್ನು ಬದಿಗಿಟ್ಟು, ರೈತರ ಹಿತ ಕಾಪಾಡುವದಕ್ಕಾಗಿ ಹೊಂದಾಣಿಕೆ ಅನಿವಾರ್ಯವಾಗುತ್ತದೆ. ಮುಂದಿನ ದಿನಮಾನದಲ್ಲಿ ಬ್ಯಾಂಕಿಗೆ ಒಳ್ಳೆಯದಾಗುವ ವಿಶ್ವಾಸವಿದೆ. –ಲಕ್ಷ್ಮಣ ಸವದಿ, ಶಾಸಕರು