ಅಧಿವೇಶನದಲ್ಲಿ ಇವೆಲ್ಲ ಚರ್ಚೆ ಆಗಬೇಕಲ್ಲವೇ?

ರೈತರ ಸಮಸ್ಯೆ ಜೊತೆಗೆ ಸಹಕಾರಿ ವಂಚನೆ ಚರ್ಚೆ ಬೇಡವೇ?

ಅಪ್ಪುಗೋಳ ನಂತರ ಬೈಲಹೊಂಗಲದ ಆ ಸಾಧು ಏನು ಮಾಡಿದ್ರು ಗೊತ್ತೆ?

ಸಾಧು ಬಣ್ಣ ಬಯಲು ಮಾಡೋರು ಯಾರು? ಸಾಧು ನಂಬಿ ಹಣ ಹೂಡಿಕೆ ಮಾಡಿದವರ ಗೋಳು ಕೇಳೊರು ಯಾರು?

ಸಾಧು ರಾಜಕಾರಣ ಬಣ್ಣ ಬಯಲಾಗೊದು ಯಾವಾಗ?

ಶಾಸಕ ಮಹಾಂತೇಶ ಕೌಜಲಗಿ ಸಾಧು ಬಣ್ಣ ತಗೀತಾರಾ?


ಬೆಳಗಾವಿ.
ಗಡಿನಾಡ ಬೆಳಗಾವಿಯಲ್ಲಿ ಇದೇ ಡಿಸೆಂಬರ 9 ರಿಂದ ಹತ್ತು ದಿನಗಳ ಕಾಲ ಚಳಿಗಾಲ ಅಧಿವೇಶನ‌ ನಡೆಯಲಿದೆ.
ಅದೊಂದು ಥರಾ ಸರ್ಕಾರಿ ಜಾತ್ರೆ ಇದ್ದಂತೆ. ಜಾತ್ರೆಗೆ ಬರುವವರಿಗೆ ಅಂದರೆ ಶಾಸಕರಿಗೆ, ಅಧಿಕಾರಿಗಳಿಗೆ ಸಕಲ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ಮಾಡಲು ಬೆಳಗಾವಿ ಜಿಲ್ಲಾಡಳಿತ ಮಾಡಲು ಸನ್ಬದ್ಧವಾಗಿದೆ. ಅದು ಸಹಜ.


ಆದರೆ ಈ ಬಾರಿ ಅಧಿವೇಶನದಲ್ಲಿ ಏನೇನು ಚರ್ಚೆ ನಡೆಯಬೇಕು ಎನ್ನುವ ಸಂಗತಿಯನ್ನು ಜನರ ಮುಂದಿಟ್ಟಾಗ ಅಚ್ಚರಿಯ ವಿಷಯಗಳು ಬಂದವು.
ಉತ್ತರ ಕರ್ನಾಟಕದ ಗಂಡುಮೆಟ್ಟಿನ‌ ನಾಡಲ್ಲಿ ಬಂದು ಮತ್ತೇ ಬೆಂಗಳೂರು, ಮೈಸೂರು ಬಗ್ಗೆ ಮಾತಾಡುವುದನ್ನು ಬಿಟ್ಟು ಗಡಿನಾಡು ಬೆಳಗಾವಿ ಸೇರಿದಂತೆ ಅಖಂಡ ಉತ್ತರ ಕರ್ನಾಟಕದ ಜ್ವಲಂತ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಯಬೇಕು ಎನ್ನುವುದು ಜನರ ಆಶಯ.
ಆದರೆ ಈ ಚರ್ಚೆಯಲ್ಲಿ ಬರೀ ತವಡು ಕುಟ್ಟುವುದನ್ನೇ ಮಾಡದೇ ಪರಿಹಾರ. ಕಂಡುಕೊಳ್ಳುವ ಕೆಲಸ ಕೂಡ ಆಗಬೇಕು.ಇದು ಬೆಳಗಾವಿಗರ ಆಶಯ.

ಸಹಕಾರಿ ವಂಚನೆ
ಇದೆಲ್ಲಕ್ಕಿಂತ ಮಿಗಿಲಾಗಿ ಸಹಕಾರಿ ದೋಖಾ ಬಗ್ಗೆ ಧ್ವನಿ ಎತ್ತುವ ಕೆಲಸವನ್ನು ಜನಪ್ರತಿನಿಧಿಗಳು ಮಾಡಬೇಕಿದೆ.
ಸಿಂಪಲ್ ಆಗಿ ಹೇಳಬೇಕೆಂದರೆ, ಆನಂದ ಅಪ್ಪುಗೋಳ ಅವರು ತಮ್ಮ ಸಹಕಾರಿ ಸೋಸೈಟಿ ಮೂಲಕ ಗ್ರಾಹಕರಿಗೆ ಕೋಟಿ ಕೋಟಿ ಟೋಪಿ ಹಾಕಿದ ನಂತರ ಜನರಿಗೆ ಸಹಕಾರಿ ಸಂಸ್ಥೆ ಮೇಲಿನ ವಿಶ್ವಾಸವೇ ಹಾರಿ ಹೋಯಿತು.
ಈಗ ಮತ್ತೊಂದು ಸಹಕಾರಿ ಸಂಸ್ಥೆ ಜನರಿಗೆ ದೊಡ್ಡ ಮಟ್ಟದ ಟೋಪಿ ಹಾಕುವ ಕೆಲಸ ಮಾಡಿದೆ ಎನ್ನುವ ದೂರುಗಳು ಕೇಳಿ ಬರುತ್ತಿವೆ.
ಇಲ್ಲಿ ಹೇಗಾಗಿದೆ ಎಂದರೆ, ಅಲ್ಲಿ ಇಲ್ಲಿ ಗಳಿಕೆ ಮಾಡಿ ಕೂಡಿಟ್ಟ ಹಣಕ್ಕೆ ಹೆಚ್ಚಿನ ಬಡ್ಡಿ ಬರಬಹುದು ಎನ್ನುವ ಆಶಯದಿಂದ ಜನ ಸಹಕಾರಿ ಸೊಸೈಟಿಯಲ್ಲಿ ಅದನ್ನು ಡಿಪಾಜಿಟ್ ಮಾಡುತ್ತಾರೆ. ಆದರೆ ಅಲ್ಲಿ ಅಸಲೂ ಇಲ್ಲ, ಬಡ್ಡಿನೂ ಇಲ್ಲ ಎನ್ನುವ ಹಾಗಾಗಿದೆ.
ಬೈಲಹೊಂಗಲದ ಪ್ರತಿಷ್ಠಿತ ರಾಜಕಾರಣಿ ಮನೆತನದವರು ಸ್ಥಾಪಿಸಿದ ಸೊಸೈಟಿ ಕಥೆ ಕೇಳಿದರೆ ಹೌಹಾರುವ ಸ್ಥಿತಿ ಬಂದೊದಗಿದೆ.
ಅದರ ಉಸ್ತುವಾರಿ ಹೊತ್ತವರು ‘ಸಾಧು’ ವಿನಂತೆ ಕಂಡರೂ ಗ್ರಾಹಕರಿಗೆ ಕೋಟಿ ಕೋಟಿ ಟೋಪಿ ಹಾಕಿದ್ದಾರಂತೆ. ಈಗ ಗ್ರಾಹಕರು ಡಿಪಾಜಿಟ್ ಹಣ ಕೊಡಿ ಎಂದರೆ ಸೋಸೈಟಿಯವರು ಬಣ್ಣದ ಮಾತುಗಳ ಮೂಲಕ ನಾಳೆ ನಾಳೆ ಎನ್ನುತ್ತಿದ್ದಾರಂತೆ.
ಮೂಲಗಳ ಪ್ರಕಾರ ಗ್ರಾಹಕರ ಇಟ್ಟ ಹಣದ ಮೇಲೆ ಜಮೀನು ಅಷ್ಟೇ ಅಲ್ಲ ಅದನ್ನು ಚುನಾವಣೆಗೂ ಬಳಸಿಕೊಂಡಿದ್ದಾರೆ ಎನ್ನುವ ಮಾತಿದೆ.
ಈಗ ಬೈಲಹೊಂಗಲ ನೊಂದ‌ಜನರ ಪರ ಧ್ವನಿ ಎತ್ತಬೇಕಾದ ಹೊಣೆಗಾರಿಕೆ ಅಲ್ಲಿನ ಸಂಭಾವಿತ ಶಾಸಕ ಮಹಾಂತೇಶ ಕೌಜಲಗಿ ಮಾಡಬೇಕಿದೆ
.

ಅದನ್ನು ಅವರು ಅಧಿವೇಶನದಲ್ಲಿ ಪ್ರಸ್ತಾಪಿಸಿ ‘ಸಾಧು’ಗಳ ಬಣ್ಣ ಬಯಲು ಮಾಡುವುದರ ಜೊತೆಗೆ ತಪ್ಪಿಗೆ ಶಿಕ್ಷೆಯಾಗುವಂತೆ ನೋಡಿಕೊಳ್ಳಬೇಕಾಗಿದೆ.ಇಲ್ಲಿ ನೋಡಲು ‘ಸಾಧು’ ಎನಿಸಿಕೊಂಡರೂ ಸೋಸೈಟಿ ವ್ಯವಹಾರ ಸೂಕ್ಷ್ಮವಾಗಿ ಗಮನಿಸಿದರೆ ಅದಕ್ಕೆ ತದ್ವಿರುದ್ಧವಾಗಿದ್ದಾರೆ ಎನ್ನುವುದು ಸುಳ್ಳಲ್ಲ.

Leave a Reply

Your email address will not be published. Required fields are marked *

error: Content is protected !!