ಎಲ್ಲಿದೆ ನ್ಯಾಯ?

ನೋಂದವರನ್ನು ಗೃಹ ಬಂಧನದಲ್ಲಿ ಇಟ್ಟಿದ್ದು ಯಾರು?

ಅದಕ್ಕೆ ಪೊಲೀಸರೇ ಮೌನ ಸಮ್ಮತಿ ಸೂಚಿಸಿದರಾ?

ನೋಂದವರನ್ನು ಮರೆಮಾಚಿ ಪ್ರಕರಣಕ್ಕೆ ಎಳ್ಳುನೀರು ಬಿಡುವ ಹುನ್ನಾರ ಏನಾದರೂ ನಡೆಯಿತಾ?

ಬೆಳಗಾವಿ.

ಗಡಿನಾಡ ಬೆಳಗಾವಿ ನ್ಯಾಯ, ಅನ್ಯಾಯ ಕೇಳೊರು ಇಲ್ಲವೇ? ಅಥವಾ‌ ಆನೆ ನಡೆದಿದ್ದೇ ದಾರಿನಾ? ಇಂತಹ ಪ್ರಶ್ನೆಯನ್ನು ಮುಂದಿಟ್ಡುಕೊಂಡು ಹೊರಟರೆ ಬೆಳಗಾವಿಗರು ಹೇಳುವ ಉತ್ತರ ಒಂದೇ..!

ಬೆಳಗಾವಿಯಲ್ಲಿ ನ್ಯಾಯ ಇದೆನಾ?. ಒಂದೇ ಒಂದು ವ್ಯವಸ್ಥೆ ಸರಿದಾರಿಯಲ್ಲಿ ಸಾಗುತ್ಯಿದೆಯಾ? ಅಥವಾ ನೊಂದವರಿಗೆ ಕನಿಷ್ಟ ನ್ಯಾಯ ಕೊಡಿಸುವ ಕೆಲಸವಾದರೂ ಆಗುತ್ತಿದೆಯಾ?

ಸಾಂದರ್ಭಿಕ ಚಿತ್ರ

ಅಂದರೆ ಇಲ್ಲಿ ಬಹುತೇಕರು ತಮ್ಮ ತಮ್ಮ ಜವಾಬ್ದಾರಿಯನ್ನು ಅರಿತುಕೊಂಡು ಮುನ್ನಡೆದಿದ್ದರೆ ಬೆಳಗಾವಿಯ ಹೆಸರು ರಾಜ್ಯಮಟ್ಟದಲ್ಲಿ ಪಾತಾಳಕ್ಕೆ ಇಳಿಯುತ್ತಿರಲಿಲ್ಲ. ಆದರೆ ಈಗ ಬೆಳಗಾವಿಯ ಪ್ರತಿಯೊಂದು ಕ್ಷೇತ್ರದಲ್ಲಿ ಇದ್ದವರನ್ನು ಹೊರಗಿನವರು ಸಂಶಯ ದೃಷ್ಟಿಯಿಂದ ನೋಡುವ ಹಾಗಾಗುತ್ತಿದೆ.

ಗಡಿನಾಡ ಬೆಳಗಾವಿಯಲ್ಲಿ ಕಳೆದ ಎರಡ್ಮೂರು‌ದಿನಗಳ ಹಿಂದೆ ನಡೆಯಬಾರದ ಅಮಾನವೀಯ ಘಟನೆಯೊಂದು ನಡೆದಿತ್ತು. ಅದಕ್ಕೆ ಸಂಬಂಧಿಸಿದಂತೆ ನೊಂದವರು ಠಾಣೆಯ ಮೆಟ್ಟಿಲು ಹತ್ತಿದ್ದರು. ಆಗ ಪೊಲೀಸರು ದೂರು ದಾಖಲು ಮಾಡಿಕೊಳ್ಳಲಿಲ್ಲವಂತೆ. ಕೆಲವರು ಬಂದು ಹೇಳಿದಂತೆ ರಾಜೀ ಸಲಹೆ ಕೊಟ್ಟು ವಾಪಸ್ಸು ಕಳಿಸಿದರು ಎನ್ನುವ ಮಾತಿದೆ.

ಆದರೆ ಅಸಲಿಗೆ ಏನಾಗಿತ್ತು ಎಂದರೆ ಆ ತಾಯಿಯ ಮಗಳು ಏನು ಮಾಡಬಾರದ್ದನ್ನು ಮಾಡುತ್ತಿದ್ದಳು ಭಗವಂತನೇ ಬಲ್ಲ. ಅದು ಅಲ್ಲಿನ ಜನರಿಗೆ ಒಂಥರಾ ಮುಜುಗುರವಾಗಿತ್ತು. ಇದೇ ಹಿನ್ನೆಲೆಯಲ್ಲಿ ಆ ತಾಯಿ ಮತ್ತು ಮಗಳನ್ನು ಮನೆಯಿಂದ ಹೊರಗೆಳೆದರು. ಅಷ್ಟೇ ಅಲ್ಲ ವೃದ್ಧೆಯ ಬ್ಲೌಸನ್ನು ಹರಿದು ಹಾಕಿದರು. ಕೊನೆಗೆ ಪ್ರಕರಣ ಗಂಭೀರವಾಗುತ್ತಿದ್ದಂತೆ ಪೊಲೀಸರು ಪ್ರಕರಣ ಕೂಡ ದಾಖಲು ಮಾಡಿಕೊಂಡರು.

ಇದೆಲ್ಲ ಘಟನೆ ಒಂದು ಕಡೆಯಾಗಿದ್ದರೆ, ಮತ್ತೊಧು ಕಡೆಗೆ ನೊಂದವರನ್ನು ಬೆಳ್ಳಂ ಬೆಳಿಗ್ಗೆ ಗೃಹ ಬಂಧನದಲ್ಲಿ ಇಟ್ಟಿದ್ದು ಯಾರು ಎನ್ನುವುದು ಚರ್ಚೆಯ ವಸ್ತುವಾಗಿದೆ.

ಇಲ್ಲಿ ನೋಂದವರನ್ನು ಆಸ್ಪತ್ರೆಗೆ ಕರಡದುಕೊಂಡು ಹೋಗಿ ಚಿಕಿತ್ಸೆಕೊಡಿಸಬೇಕಾಗಿದ್ದವರನ್ನು ಯಾರ ಕೈಗೂ ಸಿಗದಂತೆ ಗೃಹ ಬಂಧನಕ್ಕೆ ಕರೆದುಕೊಂಡು ಹೋಗಲು ಪೊಲೀಸರೇ ಮೌನ ಸಮ್ಮತಿ ಕೊಟ್ಟರಾ? ಹೇಗೆ ಎನ್ನುವ ಚರ್ಚೆ ಜೋರಾಗಿ ನಡೆದಿದೆ.

ಇದಕ್ಕೆ ಪೊಲೀಸರೇ ಉತ್ತರ ದಾಯಿತ್ವರು. ಇದೊಂದು ಗಂಭೀರ ಪ್ರಕರಣ . ಘಟನೆ ನಡೆದಿದ್ದು ಗೊತ್ತಾದ ಮೇಲೂ ನೋಂದವರಿಗೆ ರಕ್ಷಣೆ ಇಲ್ಲ ಅಂದ್ರೆ ಅದಕ್ಕೆ ಯಾರು ಹೊಣೆ.? ಇದಕ್ಕೆ ಪೊಲೀಸ್ ಆಯುಕ್ತರು ಸ್ಪಷ್ಟನೆ ಕೊಡಬೇಕು. ಕಾದು ನೋಡೊಣ.

Leave a Reply

Your email address will not be published. Required fields are marked *

error: Content is protected !!