ಬೆಳಗಾವಿ.
ಸರ್ಕಾರ ಅಥವಾ ಮತ್ಯಾವುದೋ ಕಾಲ ಸನ್ನಿಹಿತವಾದಾಗ ಬೆಂಗೂರಿನವರಿಗೆ ಗಡಿಭಾಗ ಬೆಳಗಾವಿ ನೆನಪಿಗೆ ಬರುತ್ತದೆ. ಅಷ್ಟೇ ಅಲ್ಲ ಇಲ್ಲಿನ ರಾಜಕಾರಣಿಗಳೂ ನೆನಪಿಗೆ ಬರುತ್ತಾರೆ.
ಮತ್ತೇ ಎಲ್ಲವೂ ಸುರಳಿವಾಗಿ ನಡೆದರೆ ಬೆಳಗಾವಿಗರು ನೆನಪಿಗೆ ಬರಲ್ಲ. ಬರೀ ಸಾಹುಕಾರ,ಅಪ್ಪಾ, ಅಣ್ಣಾ ಎಂದು ಮಾತನಾಡಿ ಹೆಗಲ ಮೇಲೆ ಕೈ ಹಾಕಿ ಕಳಿಸಿ ಬಿಡುತ್ತಾರೆ.
ಈಗ ಈ ಮಾತು ಯಾಕೆಂದರೆ ರಾಜ್ಯ ಬಿಜೆಪಿ ವಕ್ಫ ವಿರುದ್ಧದ ಹೋರಾಟಕ್ಕೆ ಮೂರು ತಂಡಗಳನ್ನು ರಚಿಸಿದೆ.

ಆದರೆ ಮೂರು ತಂಡಗಳಲ್ಲಿನ ಸದಸ್ಯರ ಹೆಸರನ್ನು ಗಮನಿಸಿದರೆ ಇಲ್ಲಿನವರನ್ನು ಯಾವ ಮಟ್ಟಕ್ಕೆ ಪರಿಗಣಿಸಿದ್ದಾರೆ ಎನ್ನುವುದು ಸ್ಪಷ್ಟವಾಗುತ್ತದೆ.

ಈ ಮೂರು ತಂಡಗಳಲ್ಲಿ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಗೋಕಾಕ ಶಾಸಕ ರಮೇಶ ಜಾರಕಿಹೊಳಿ, ನ್ಯಾಯವಾದಿ ಎಂ.ಬಿ.ಜಿರಲಿ, ಮೂಲತಃ ಹುಬ್ಬಳ್ಳಿಯವರಾದ ಬೆಳಗಾವಿ ಸಂಸದ ಜಗದೀಶ ಶೆಟ್ಟರ್ , ಮಾಜಿ ಶಾಸಕ ಪಿ. ರಾಜೀವ ಅವರನ್ಬು ಬಿಟ್ಟರೆ ಮತ್ತೆ ಯಾರೂ ಇಲ್ಲ. ಡಾ. ಪ್ರಭಾಕರ ಕೋರೆ, ಮಹಾಂತೇಶ ಕವಟಗಿಮಠ, ಬಾಲಚಂದ್ರ ಜಾರಕಿಹೊಳಿ, ಅಭಯ ಪಾಟೀಲ ಮುಂತಾದವರನ್ನು ಇಲ್ಲಿ ಕಡೆಗಣಿಸಲಾಗಿದೆ.

ಇದನ್ನು ಬಿಡಿ ಕೆಲಚರಿಗೆ ಮಹಾ ಚುನಾವಣೆ ಜವಾಬ್ದಾರಿ ಕೊಟ್ಟಿದ್ದಾರೆ. ಹೀಗಾಗಿ ಬಿಟ್ಟಿರಬಹುದು ಎಂದು ಸುಮ್ಮನಾಗಬಹುದು.
ಆದರೆ ಬಿಜೆಪಿ ಹೈಕಮಾಂಡ ಬೆಳಗಾವಿ ಜಿಲ್ಲೆಯನ್ನೇ ಮರೆತುಬಿಟ್ಟಿದೆ ಹಾಗಿದ್ದರೆ ಇಲ್ಲಿನ ರೈತಾಪಿ ಜನರ ಜಮೀನನ್ನು ವಕ್ಫ್ ಕಬಳಿಸಿಲ್ಲವಾ? ಬೆಳಗಾವಿ ದಕ್ಷಿಣ, ಬೈಲಹೊಂಗಲ, ಸವದತ್ತಿ, ಅಥಣಿ, ಚಿಕ್ಕೋಡಿಯಲ್ಲಿ ವಕ್ಫ ಕಬಳಿಸಿದ್ದನ್ನು ಬಿಜೆಪಿ ಹೈಕಮಾಂಡಗೆ ಯಾರೂ ಮಾಹಿತಿನೇ ಕೊಟ್ಟಿಲ್ಲವಾ ಎನ್ನುವ ಪ್ರಶ್ನೆ ಕೆಲವರನ್ನು ಕಾಡುತ್ತಿದೆ. ಅಥವಾ ಉದ್ದೇಶಪೂರ್ವಕವಾಗಿ ಬಿಜೆಪಿ ಹೈ ನಾಯಕರು ಬೆಳಗಾವಿಯನ್ನು ಮರೆತುಬಿಟ್ಟರಾ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಉತ್ತರಿಸುವವರು ಯಾರು?