ಬೆಳಗಾವಿ
ಮಹಾಂತೇಶ ನಗರದ ಕೆಎಂಎಫ್ ಡೈರಿ ಬಳಿ ಗುಂಡಿನ ದಾಳಿ ನಡೆದಿದ್ದು, 31 ವರ್ಷದ ಪ್ರಣೀತ್ ಕುಮಾರ್ ತೀವ್ರವಾಗಿ ಗಾಯಗೊಂಡಿದ್ದಾರೆ.

ದ್ವಾರಕಾ ನಗರ, ಟಿಳಕವಾಡಿಯ 5ನೇ ಕ್ರಾಸ್ ನಿವಾಸಿ ಪ್ರಣೀತ್ ಕುಮಾರ್ ಅವರಿಗೆ ಡೇರಿ ಬಳಿ ಗುಂಡು ತಗುಲಿ ತೀವ್ರ ಗಾಯಗೊಂಡಿದ್ದಾರೆ. ವೈಯಕ್ತಿಕ ದ್ವೇಷವೇ ದಾಳಿಗೆ ಕಾರಣ ಎಂದು ಶಂಕಿಸಲಾಗಿದೆ.
ಸ್ಥಳಕ್ಕೆ ಮಾಳಮಾರುತಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹೆಚ್ಚಿನ ತನಿಖೆ ನಡೆಯುತ್ತಿದೆ.