ಭಿನ್ನರಿಗೆ ಶೆಡ್ಡು ಹೊಡೆದ ಬಿಜೆಪಿ ನಿಷ್ಠರು
ಬೆಳಗಾವಿ. ಬಿಜೆಪಿಯಲ್ಲಿ ರೇಬಲ್ ನಾಯಕರೆಂದೇ ಹೆಸರಾದ ವಿಜಯಪುರದ ಬಸನಗೌಡ ಪಾಟೀಲ ಯತ್ನಾಳ ಮತ್ತು ಗೋಕಾಕ ಶಾಸಕ ರಮೇಶ ಜಾರಕಿಹೊಳಿ ನೇತೃತ್ವದಲ್ಲಿ ನಡೆದ ವಕ್ಫ್ ಹೋರಾಟದಿಂದ ಬೆಳಗಾವಿ ಬಿಜೆಪಿಗರು ಅಂತರ ಕಾಯ್ದುಕೊಂಡರು,

ಇಂದಿನ ಈ ಜನಜಾಗ್ರತಿ ಸಮಾವೇಶಕ್ಕೆ ರಮೇಶ ಜಾರಕಿಹೊಳಿ ಆಪ್ತರು ಮಾತ್ರ ಭಾಗವಹಿಸಿದ್ದರು, ಇನ್ನುಳಿದಂತೆ ಯಾವೊಬ್ಬ ಬಿಜೆಪಿ ಶಾಸಕರು, ಸಂಸದರು ಸೇರಿದಂತೆ ಹೇಳಿಕೊಳ್ಳುವಂತಹ ಘಟಾನುಘಟಿಗಳು ಗೈರಾದರು.
ಬೆಳಗಾವಿ ಮಹಾನಗರ ಪಾಲಿಕೆ ಬಿಜೆಪಿ ನಗರಸೇವಕರು, ಪಕ್ಷದ ಜಿಲ್ಲಾಧ್ಯಕ್ಷ, ಮಹಾನಗರ ಅಧ್ಯಕ್ಷರೂ ಸಹ ಈ ಸಮಾವೇಶದಿಂದ ದೂರ ಉಳಿದರು.

ಸಮಾವೇಶದಲ್ಲಿ ಪರೋಕ್ಷವಾಗಿ ಪಕ್ಷದ ರಾಜ್ಯಾಧ್ಯಕ್ಷರೇ ಇವರ ಟಾಗರ್ೆಟ್ ಆಗಿದ್ದರು, ಆದರೆ ಮಾಧ್ಯಮದವರ ಮುಂದೆಮಾತನಾಡುವಾಗ ಮಾಜಿ ಸಂಸದ ಪ್ರತಾಪ್ ಸಿಂಹ್, ಬಸನಗೌಡ ಪಾಟೀಲ ಯತ್ನಾಳ, ಅರವಿಂದ ಲಿಂಬಾವಳಿ ಅವರು ನೇರಾ ನೇರ ವಿಜಯೇಂದ್ರ ಬಣಕ್ಕೆ ಟಕ್ಕರ್ ಕೊಡುವ ಹೇಳಿಕೆ ನೀಡಿದರು,
ಗೌಪ್ಯ ಸಭೆ.
ಇಲ್ಲಿ ಗಮನಿಸಬೇಕಾದ ಸಂಗತಿ ಎಂದರೆ, ಇನ್ನುಳಿದವರನ್ನು ಹೊರಗಿಟ್ಟು ಈ ನಾಯಕರು ಗೌಪ್ಯ ಸಭೆ ನಡೆಸಿದರು, ಆದರೆ ಸಭೆಯಲ್ಲಿ ಯಾವ ಯಾವ ಸಂಗತಿಗಳು ಚಚರ್ೆಗೆ ಬಂದವು ಎನ್ನುವುದು ಗೊತ್ತಾಗಲಿಲ್ಲ.

ಹೊಂದಾಣಿಕೆ ಮಾಡಿಕೊಳ್ಳಲು
ರಾಜ್ಯಾಧ್ಯಕ್ಷರನ್ನಾಗಿ ಮಾಡಿಲ್ಲ ಹುಷಾರ್”
ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಲು ನಿಮ್ಮನ್ನು ರಾಜ್ಯಾಧ್ಯಕ್ಷರನ್ನಾಗಿ ಮಾಡಿಲ್ಲ ಹುಷಾರ್ ಎಂದು ಮಾಜಿ ಸಚಿವ ಅರವಿಂದ ಲಿಂಬಾವಳಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ವಿರುದ್ಧ ಗರಂ ಆದ ಪ್ರಸಂಗವೂ ನಡೆಯಿತು.
ಜನಜಾಗೃತಿ ಸಮಾವೇಶದಲ್ಲಿಯೇ ನೇರಾ ನೇರ ಮಾತನಾಡಿದ ಅವರು, ನಿಮ್ಮ ಹೊಂದಾಣಿಕೆ ರಾಜಕಾರಣದಿಂದ ನಾವು ವಿರೋಧ ಪಕ್ಷದಲ್ಲಿ ಕುಳಿತಿದ್ದೇವೆ ಎಂದು ಬಿವೈವಿ ವಿರುದ್ಧ ನೇರವಾಗಿ ವಾಗ್ದಾಳಿ ನಡೆಸಿದರು.
ಉಪ ಚುನಾವಣೆಯಲ್ಲಿ ಏನೇನೂ ಹೊಂದಾಣಿಕೆ ಮಾಡಿಕೊಂಡಿದ್ದೀರಿ ಎಂಬುದು ಗೊತ್ತಿದೆ. ಅದನ್ನು ಈಗ ಹೇಳುವ ಸಂದರ್ಭವಲ್ಲ. ಸಮಯ ಬಂದಾಗ ಹೇಳುತ್ತೇನೆ ಎಂದರು.,
ನಿಮ್ಮ ತಂಡದೊಂದಿಗೆ ವಕ್ಫ್ ವಿರುದ್ಧ ಹೋರಾಟ ಮಾಡಿ. ನಮ್ಮ ಜೊತೆ ಬರಲು ಆಗದಿದ್ದರೆ ನೀವೇ ಪ್ರತ್ಯೇಕವಾಗಿ ಹೋರಾಟ ಮಾಡಿ ಎಂದು ಸಲಹೆ ನೀಡಿದರು.
ಜನಪರ ಕೆಲಸ ಮಾಡಲಿ ಎಂದು ಅಧ್ಯಕ್ಷರನ್ನಾಗಿ ಮಾಡಿದರೆ, ಹಾದಿಬೀದಿಯಲ್ಲಿ ಮಾತನಾಡುತ್ತಿದ್ದೀರಿ. ಹಾದಿಬೀದಿಯಲ್ಲಿ ನಾವು ಮಾತನಾಡ್ತಿದ್ದೇವೆ ಎಂದು ಹೇಳಿಕೆ ಕೊಡುತ್ತೀರಿ. ಬೆಂಗಳೂರಿನಲ್ಲಿ ಕುಳಿತು ವಿವಾದ ಸೃಷ್ಟಿ ಮಾಡುತ್ತಿದ್ದೀರಿ. ಇದು ನಿಮಗ ಶೋಭೆ ತರುವುದಿಲ್ಲ ಎಂದು ವಿಜಯೇಂದ್ರ ವಿರುದ್ಧ ಗುಡುಗಿದರು,
ವಕ್ಫ್ ವಿರುದ್ಧ ಹೋರಾಟ ಮಾಡಬೇಕಿದ್ದ ನಮ್ಮ ಬಿಜೆಪಿಯ ನಾಯಕರೇ ಅಪಸ್ವರ ಎತ್ತಿದ್ದಾರೆ. ಯತ್ನಾಳ ಅವರನ್ನು ಉಚ್ಚಾಟಿಸಲಬೇಕೆಂದು ಬಿಜೆಪಿ ನಾಯಕರೇ ಹೇಳುತ್ತಿದ್ದಾರೆ. ಹೊಂದಾಣಿಕೆ ಮಾಡಿಕೊಂಡು ರಾಜಕಾರಣ ಮಾಡುವುದನ್ನು ಇನ್ನಾದರೂ ಬಿಟ್ಟುಬಿಡಿ ಎಂದು ಕಿಡಿಕಾರಿದರು.