ವರದಿ ಬಂದಾಗ ತೋರಿಕೆಗೆ ವಾಹನ ಜಪ್ತಿ. ಮತ್ತೊಂದು ಕಡೆಗೆ ಅಕ್ರಮಕ್ಕಿಲ್ಲ ತಡೆ.
ಹಿರೇಬಾಗೇವಾಡಿ ಠಾಣೆಯಲ್ಲಿ FIR ಆದರೂ ಪೊಲೀಸ್ ಡೋಂಟಕೇರ್.
ಅಕ್ರಮ ಕಲ್ಲುಗಣಿಯಿಂದ ಹೈರಾಣಾದ ನಾಲ್ಕು ಊರಿನ ಜನ.
ಬೆಳಗಾವಿ.
ರಾಜ್ಯದಲ್ಲಿ ಸರ್ಕಾರ ಅನ್ನೊದು ಒಂದಿದ್ದರೆ ಆಡಳಿತ ವ್ಯವಸ್ಥೆ ಗಡಿ ಭಾಗದಲ್ಲಿ ಈ ಮಟ್ಟಕ್ಕೆ ಕುಸಿಯುತ್ತಿರಲಿಲ್ಲ.
ಇಲ್ಲಿ ಸುತ್ತು ಬಳಸಿ ವಿಷಯ ಹೇಳುವ ಬದಲು ನೇರವಾಗಿ ಎಲ್ಲವನ್ನು ಓದುಗರ ಮುಂದೆ ತೆರೆದಿಡುವ ಕೆಲಸವನ್ನು ನಿಮ್ಮ e belagavi ಮಾಡುತ್ತಿದೆ.
ಕಳೆದ ಒಂದುವರೆ ವರ್ಷದಲ್ಲಿ ಯಾರ ಮುಲಾಜಿಗೂ ಒಳಗಾಗದೇ ಕೆಲವೊಂದು ಸಂಗತಿಗಳನ್ನು ಓದುಗರ ಮುಂದೆ ತೆರೆದಿಡುವ ಕೆಲಸವನ್ನು ಮಾಡುತ್ತ ಬಂದಿದೆ.
ಆ ವರದಿಯಿಂದ ಕೆಲವರಿಗೆ ಬಿಸಿ ತಟ್ಟಿರಬಹುದು. ಅದು ಅವರಿಗೆ ಬಿಟ್ಟ ವಿಷಯ. ಆದರೆ ಅದರ ಬಗ್ಗೆ ಇ ಬೆಳಗಾವಿ ಇಟ್ಟ ಹೆಜ್ಜೆ ಹಿಂದಿಡುವ ಕೆಲಸ ಮಾಡಲಿಲ್ಲ. ಅಷ್ಟೇ ಅಲ್ಲ ಅಳುಕಲಿಲ್ಲ.
ನಿಮಗೆ ನೆನಪಿರಬಹುದು. ತೀರಾ ಇತ್ತೀಚೆಗೆ ಖಾನಾಪುರ ತಾಲೂಕಿನ ನಂದಗಡ ಭಾಗದಲ್ಲಿ ಅಕ್ರಮಮರಳು ದಂಧೆ ನಡೆಯುತ್ತಿದೆ ಎನ್ನುವ ವರದಿಯನ್ನು e belagavi ಪ್ರಕಟಿಸಿತ್ತು. ಅದಕ್ಕೆ ಸಂಬಂಧಿಸಿದಂತೆ ವಿಡಿಯೋ ಕೂಡ ಪ್ರಸಾರ ಮಾಡಿತ್ತು.
ಸಹಜವಾಗಿ ಎಸ್ಪಿಯವರು ವರದಿಯನ್ನು ಗಂಭೀರವಾಗಿ ಪರಿಗಣಿಸಿದ್ದರು. ಆಗ ಎಚ್ಚೆತ್ತುಕೊಂಡ ಆ ಭಾಗದ ಪೊಲೀಸರು ಅಕ್ರಮ ಮರಳು ಸಾಗಾಟ ಮಾಡುವ ವಾಹನವನ್ಬು ಹಿಡಿದುಬಿಟ್ಟರು.
ಅಂದರೆ ಇದರರ್ಥ ಅಲ್ಲಿ ಅಕ್ರಮ ಮರಳು ದಂಧೆ ಸಂಪೂರ್ಣ ಸ್ಥಗಿತ ಗೊಂಡಿತು ಎನ್ನುವ ಮಾತು ಕೇಳಿ ಬಂತು. ಜನ ಕೂಡ ಹಾಗೇ ಅಂದುಕೊಂಡಿದ್ದರು.
ಆದರೆ ಅಲ್ಲಿ ಹಾಗೇ ಆಗಲಿಲ್ಲ. ಬದಲಾಗಿ ಮತ್ತೇ ಎಂದಿನಂತೆ ಅಲ್ಲಿ ಅಕ್ರಮವಾಗಿ ಮರಳು ಸಾಗಾಟ ಮುಂದುವರೆದಿತ್ತು. ಇದರರ್ಥ ಮಾಧ್ಯಮಗಳಲ್ಲಿ ವರದಿ ಬಂದಾಗ ಪೊಲೀಸರು ಕಳ್ಳ- ಪೊಲೀಸ್ ಆಟ ಆಡುತ್ತಾರೆ ಎನ್ನುವುದು ಇಲ್ಲಿ ಸ್ಪಷ್ಟ
ಇನ್ನೂ ಆಘಾತಕಾರಿ ಸಂಗತಿ ಎಂದರೆ, ಇಷ್ಟೊಂದು ರಾಜಾರೋಷವಾಗಿ ಈ ಅಕ್ರಮ ಮರಳು ದಂಧೆ ನಡೆಯುತ್ತಿರುವುದು ಅಲ್ಲಿ ಜನಪ್ರತಿನಿಧಿಗಳಿಗೆ ಗೊತ್ತಿಲ್ಲ ಎಂದಿಲ್ಲ. ಪೊಲೀಸರೂ ಸಹ ಕಣ್ಣಿದ್ದು ಕುರುಡರಂತಿದ್ದಾರೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಇದೆಲ್ಲಕ್ಕಿಂತ ಮಿಗಿಲಾಗಿ ಪೊಲೀಸರ ಹೊರತಾಗಿಯೂ ಅಕ್ರಮ ದಂಧೆಯಲ್ಲಿ ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿರುವ ಮೂರನೇಯವರ ಬಗ್ಗೆ ಚರ್ಚೆ ಜೋರಾಗಿ ನಡೆದಿದೆ. ಹೀಗಾಗಿ ಈ ಎಲ್ಲವನ್ನು ಹದ್ದು ಬಸ್ತಿನಲ್ಲಿಡಬೇಕಾದ ಕೆಲಸವನ್ನು ಎಸ್ಪಿಯವರು ಮಾಡಬೇಕಿದೆ. ಕಾದು ನೋಡೊಣ.
ಇದು ಜಿಲ್ಲಾ ಪೊಲೀಸ್ ಕಥೆಯಾದರೆ, ಬೆಳಗಾವಿ ಪೊಲೀಸ್ ಆಯುಕ್ತರ ವ್ಯಾಪ್ತಿಯಲ್ಲಿ ಬರುವ ಠಾಣೆ ಹದ್ದಿನಲ್ಲಿ ಅಕ್ರಮ ಮರಳು ದಂಧೆ ರಾಜಾರೋಷವಾಗಿ ನಡೆಯುತ್ತಿದೆ.
ಬೆಳಗಾವಿ ತಾಲೂಕಿನ ಬಸ್ಸಾಪುರ ಗ್ರಾಮದ ಹೊರವಲಯದಲ್ಲಿ ಗಣಿಗಾರಿಕೆ ನಡೆಯುತ್ತಿದೆ. ಈ ಗಣಿಗಾರಿಕೆಯವರು ನಿಯಮ ಉಲ್ಲಂಘಿಸಿ ದಂಧೆ ನಡೆಸಿದ್ದಾರೆ ಎನ್ನುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ.
ಅಲ್ಲಿನ ನಿವಾಸಿಗಳು ಹಿರೇಬಾಗೇವಾಡಿ ಪೊಲೀಸ್ ಠಾಣೆಗೆ ಅರ್ಜಿ ಕೊಟ್ಡು ಕೊಟ್ಟು ಸುಸ್ತಾಗಿದ್ದಾರೆ. ಆದರೆ ಅವರು ಜನರ ಮನವಿಗೆ ಕ್ಯಾರೆ ಸಹ ಎಂದಿಲ್ಲ.
ಅದನ್ನು ಬಿಡಿ. ಈ ಕಲ್ಲು ಗಣಿಗಾರಿಕೆಯಿಂದ ಮನೆಗಳು ಬಿರುಕು ಬಿಡುತ್ತಿವೆ ಎಂದು ಹೇಳಿ ಬೀದಿಗಿಳಿದ ಜನ ಅಲ್ಲಿ ನಿತ್ಯ ಉರೋಳಗೆ ಸಂಚರಿಸವ ವಾಹನಗಳನ್ನು ಅಡ್ಡಗಟ್ಟಿದರೆ, ಪೊಲೀಸರು ಅದೇ ಜನರಿಗೆ ನ್ಯಾಯ ಕೊಡಿಸುವ ಮಾತುಗಳ ಬದಲಿಗೆ ಕೇಸ್ ಜಡಿಯುವ ಎಚ್ಚರಿಕೆ ಕೊಡುತ್ತಾರಂತೆ. ಅಂದರೆ ಪೊಲೀಸರ ಈ ನಡೆಯನ್ನು ನೀವು ಹೇಗೆ ಅರ್ಥೈಸಿಕೊಳ್ಳುತ್ತಿರಿ ಎನ್ನುವುದು ತಮಗೆ ಬಿಟ್ಟ ವಿಷಯ.
ಹೀಗಾಗಿ ಇದರಿಂದ ಬೇಸತ್ತ ಆ ಜನ ಈಗ ಅಧಿವೇಶನ ಸಂದರ್ಭದಲ್ಲಿ ಪೊಲೀಸರ ನಡೆ ವಿರುದ್ಧ ಪ್ರತಿಭಟನೆ ನಡೆಸುವ ತಯಾರಿ ನಡೆಸಿದ್ದಾರೆ ಎಂದು ಗೊತ್ತಾಗಿದೆ.
ಅಷ್ಟೇ ಅಲ್ಲ ನಿಯಮಬಾಹಿರ ನಡೆಸುತ್ಯಿರುವ ಕ್ರಷರ್ ಮಾಲಿಕರ ವಿರುದ್ಧ FIR. ಆದರೂ ಕೂಡ ಹಿರೇಬಾಗೇವಾಡಿ ಪೊಲೀಸರು ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎನ್ನುವುದನ್ನು ಗಮನಿಸಿದರೆ ಅಲ್ಲಿನ ವ್ಯವಸ್ಥೆ ಯಾವ ಮಟ್ಟಕ್ಕೆ ಕುಸಿದಿದೆ ಎನ್ನುವುದು ಗೊತ್ತಾಗುತ್ತದೆ.
ಈಗಲಾದರೂ ಹಿರೇಬಾಗೇವಾಡಿ ಪೊಲೀಸರಿಗೆ ಬುದ್ದಿ ಹೇಳಿ ನೋಂದರಿಗೆ ನ್ಯಾಯ ಕೊಡಿಸುವ ಕೆಲಸವನ್ಬು ಪೊಲೀಸ್ ಆಯುಕ್ತರು ಮಾಡಬೇಕಿದೆ. ಇದನ್ನೂ ಕಾದು ನೋಡೋಣ.