ಪಾಲಿಕೆ ಸಭೆ ಅಂದ್ರೆ ಶನಿವಾರ ಸಂತಿ ಆಗೈತಿ

ಬೆಳಗಾವಿ. ಗಡಿನಾಡ ಬೆಳಗಾವಿಯಲ್ಲಿ ಇದೇ ದಿ.‌ 9 ರಿಂದ ಚಳಿಗಾಲ ಅಧಿವೇಶನ ಆರಂಭವಾಗಲಿದೆ. ಅಂತಹ ಸಂದರ್ಭದಲ್ಲಿ ಬೆಳಗಾವಿ ಬೇಕು ಬೇಡಗಳ ಬಗ್ಗೆ ಚರ್ಚೆ ನಡೆಸಬೇಕಾಗಿದ್ದ ನಗರಸೇವಕರು ಅನಗತ್ಯ ಚರ್ಚೆ ಮೂಲಕ ಕಾಲಹರಣ ಮಾಡಿದರು.

ಒಂದು ರೀತಿಯಲ್ಲಿ ಆಡಳಿತ ಮತ್ತು ವಿರೋಧ ಪಕ್ಷದ ನಗರಸೇವಕರ ಈ ನಡುವಳಿಕೆ ಕಂಡ ಶಾಸಕ ಅಭಯ ಪಾಟೀಲರು, ಇದೇನ್ ಬೆಳಗಾವಿ ಸಂತಿ ಮಾಡೇರಿ ಎಂದು ಅಸಮಾಧಾನ ಹೊರಹಾಕಿದರು.

ಒಂದೇ‌ವಿಷಯ ಇಟ್ಟು ಕೊಂಡು ಮಾಡುತ್ತಿರುವ ವಾದವನ್ನು ಗಮನಿಸಿದ ಅವರು, ಬೆಳಗಾವಿ ಜನ ನಿಮ್ಮ ವರ್ತನೆಯನ್ನು ಗಂಭೀರವಾಗಿ ಅವಲೋಕಿಸುತ್ತಿದ್ದಾರೆ. ಈ ರೀತಿ ಚರ್ಚೆ ಯಾರಿಗೂ ಶೋಭೆ ತರಲ್ಲ ಎಂದರು.

ಇಲ್ಲಿ ಶಾಸಕರು ಹೇಳಿದಂತೆಯೇ ಪಾಲಿಕೆ ಸಭೆ ಗಾಂಭೀರ್ಯತೆವಿಲ್ಲದಂತೆ ನಡೆಯುತ್ತಿತ್ತು. ಸದಸ್ಯರ ಅಭಿಪ್ರಾಯ ವನ್ನು ಆಲಿಸಿ ರೂಲಿಂಗ್ ಕೊಡಬೇಕಾದವರು ಎಲ್ಲವೂ ಅವರು ಹೇಳಿದಂತೆ ಪಾಸ್ ಎನ್ನುತ್ತಿದ್ದರು.

ಅದನ್ನು ಬಿಡಿ. ಶಾಸಕ ಅಭಯ ಪಾಟೀಲರು ಶಹಾಪುರ ಡಬಲ್ ರೋಡ್ ಬಂದ್ ಆಗಿದ್ದರಿಂದ ಆಗುತ್ತಿರುವ ಸಮಸ್ಯೆ ಬಗ್ಗೆ ಸಭೆಯ ಗಮನಕ್ಕೆ ತಂದರು.

ಈಗಾಗಲೇ ಅಧಿವೇಶನ ಹಿನ್ನೆಲೆಯಲ್ಲಿ ಒನ್ ಸೈಡ್ ರೋಡ್ ಓಪನ್ ಮಾಡಲು ಕ್ರಮ‌ ತೆಗೆದುಕೊಳ್ಳಲಾಗಿದೆ. ಮುಂದಿನ ದಿನಗಳಲ್ಲಿ ಲೀಗಲ್ ಓಪನಿಯನ್ ಪಡೆದು ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಅವರು ಹೇಳಿದರು.

ಇಲ್ಲಿ ಸಭೆಯ ಆರಂಭದಲ್ಲಿ ಮಹಾರಾಷ್ಟ್ರ ನವ ನಿರ್ಮಾಣ ಸೇನೆಯ ರವಿ ಸಾಳುಂಕೆ ಎಂದಿನಂತೆ ಮರಾಠಿ ಭಾಷೆಯಲ್ಲಿ ದಾಖಲೆ ಕೊಡಿ ಎನ್ನುವ ಬೇಡಿಕೆ ಇಟ್ಡು ವಾದ ಮಾಡಿದರು.

ಅಚ್ಚರಿಯ ಸಂಗತಿ ಎಂದರೆ, ಈ ಬೇಡಿಕೆಗೆ ಕಾಂಗ್ರೆಸ್ ಶಾಸಕ‌ ಆಸೀಫ್ ಶೇಠ, ಬಿಜೆಪಿಯ‌ ಮರಾಠಿ ಭಾಷಿಕ ಕೆಲ ನಗರಸೇವಕರು ಸಾಥ್ ನೀಡಿದರು. ಸಮಾಧಾನಕರ ಸಂಗತಿ ಎಂದರೆ, ಸರ್ಕಾರಿ ನಾಮನಿರ್ದೇಶಿತ ಸದಸ್ಯ ರಮೇಶ ಸೊಂಟಕ್ಕಿ ಅವರು ಮರಾಠಿ‌ ದಾಖಲೆ ಕೇಳಿದವರಿಗೆ ಟಕ್ಕರ್ ಕೊಡುವ ರೀತಿಯಲ್ಲಿ ಮಾತನಾಡಿದರು.

Leave a Reply

Your email address will not be published. Required fields are marked *

error: Content is protected !!