ನಾವು ಜಿದ್ದಿಗೆ ಬಿದ್ದಿದ್ದರೆ ಅವರ IAS ಗೂ ಕಷ್ಟ ಆಗ್ತಿತ್ತು.ಆದ್ರೆ ನಾವು ಆ ರೀತಿ ಮಾಡಲು ಹೋಗಲಿಲ್ಲ.
ಆ ರೋಡ್ ಬಂದ್ ಆಗಿದ್ದರಿಂದ ಬೆಳಗಾವಿಗರಿಗೆ ತೊಂದರೆ ಆಗ್ತಿದೆ.
ಅದನ್ನು ಸರಿಮಾಡೊಣ. ಇದರಲ್ಲಿ ರಾಜಕಾರಣ ಮಾಡಬೇಡಿ. ನಾವು ತಕ್ಕೊಂತ ಹೋದ್ರೆ ಬಹಳ ಇದೆ.
ಬೆಳಗಾವಿ
ಮಹಾನಗರ ಪಾಲಿಕೆ ಸಾಮಾನ್ಯ ಸಭೆಯಲ್ಲಿ ನೆಳಗಾವಿ ದಕ್ಷಿಣ ಶಾಸಕ ಅಭಯ ಪಾಟೀಲರು ಬಂದ್ ಆಗಿದ್ದ ಡಬಲ್ ರೋಡ್ ಬಗ್ಗೆ ಪ್ರಸ್ತಾಪಿಸಿದರು.
ಶಹಾಪುರ ಡಬಲ್ ರೋಡ್ ಬಂದ್ ಆಗಿದ್ದರಿಂದ ಏನೇನು ಸಮಸ್ಯೆ ಆಗುತ್ತಿದೆ ಎನ್ನುವುದನ್ನು ಸಭೆಯ ಗಮನಕ್ಕೆ ತಂದರು,

ಒಂದು ಹಂತದಲ್ಲಿ ಅಧಿವೇಶನ ಇರುವುದರಿಂದ ಭೂ ಮಾಲಿಕರಿಗೆ ಮಾತನಾಡಿ ಒಂದು ಕಡೆಗೆ ಮಾತ್ರ ರಸ್ತೆ ಸಂಚಾರಕ್ಕೆ ಅನುಕೂಲ ಕಲ್ಪಿಸಿಕೊಡಲು ಕೇಳಿಕೊಳ್ಳಲಾಗಿತ್ತು, ಶೀಘ್ರವೇ ಅದು ಶುರು ಆಗುತ್ತದೆ,
ನಂತರ ಕಾನೂನು ಅಭಿಪ್ರಾಯ ಆಲಿಸಿ ಅದನ್ನು ಬಗೆಹರಿಸಲು ಪ್ರಯತ್ನ ಮಾಡಲಾಗುತ್ತದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಶಾಸಕ ಆಸೀಪ್ ಶೇಠರು ಸಕರ್ಾರಕ್ಕೆ ಪ್ರಸ್ತಾವನೆ ಸಲ್ಲಿಸಿ ಎಂದು ಹೇಳಿದಾಗ ಶಾಸಕ ಅಭಯ ಪಾಟೀಲ ಸ್ವಲ್ಪ ಗರಂ ಕೂಡ ಆದರು,
ಇಲ್ಲಿ ರೋಡ್ ರಾಜಕಾರಣ ಮಾಡಬೇಡಿ, ನಾವು ಮಾತನಾಡಿದರೆ ಎಲ್ಲವನ್ನೂ ಹೊರಗೆಳೆಯಬೇಕಾಗುತ್ತದೆ, ಈ ರಸ್ತೆ ಬಂದ್ ಆಗಿದ್ದರಿಂದ ಬೆಳಗಾವಿಗರಿಗೆ ಎಷ್ಟು ತೊಂದರೆ ಆಗುತ್ತಿದೆ ಎನ್ನುವುದನ್ನು ಅರಿತುಕೊಳ್ಳಿ, ಈ ವಿಷಯದಲ್ಲಿ ಸಕರ್ಾರ ಸ್ಪಷ್ಟನೆ ಕೊಟ್ಟಿದೆ. ಪಾಲಿಕೆಯೇ ಹಣ ಸಂದಾಯ ಮಾಡಬೇಕಿದೆ ಎಂದರು. ಭೂಸ್ವಾಧೀನ ಪ್ರಕ್ರಿಯೆ ನಡೆಸಿ ಎಂದು ಸಲಹೆ ನೀಡಿದರು,