.
ಬೆಳಗಾವಿ:- ಸ್ಥಳೀಯ ಬಿ.ಇ. ಎಜುಕೇಶನ್ ಸೊಸೈಟಿಯ ಬಿ.ಕೆ.ಮಾಡೇಲ್ ಆಂಗ್ಲ ಮಾಧ್ಯಮ ಶಾಲೆಯ 10ನೇಯ ತರಗತಿಯ ವಿಧ್ಯಾರ್ಥಿನಿಯಾದ ವಿಜಯಲಕ್ಷ್ಮಿ ರವಿಕುಮಾರ ಪೂಜಾರಿ ಇವಳು ಪ್ರಸಕ್ತ ಸಾಲಿನ ಜನೇವರಿ 10ರಂದು ನಗರದ ಮಹಾಂತ ಭವನದಲ್ಲಿ ನಡೆದ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಭರತನಾಟ್ಯ ವಿಭಾಗದಲ್ಲಿ ಉತ್ತಮ ಪ್ರದರ್ಶನ ನೀಡಿ. ಪ್ರಥಮ ಸ್ಥಾನಗಳಿಸುವುದರ ಜೊತೆಗೆ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾಳೆ…

ಈ ಪ್ರತಿಭೆಗೆ ಹಾಗೂ ಸಾಧನೆಗೆ ಶಾಲೆಯ ಆಡಳಿತ ಮಂಡಳಿ, ಶಿಕ್ಷಕವೃಂದ ವಿಧ್ಯಾರ್ಥಿಬಳಗ ಹಾಗೂ ಪಾಲಕರು ಅಭಿನಂದನೆ ಸಲ್ಲಿಸಿದ್ದಾರೆ. ಹಾಗೂ ರಾಜ್ಯಮಟ್ಟದಲ್ಲಿ ಉತ್ತಮ ಪ್ರದರ್ಶನ ನೀಡಲಿ ಎಂದು ಶುಭ ಹಾರೈಸಿದ್ದಾರೆ….
