DINNER POLITICS.. ಅವರದ್ದು ಯಾಕೆ..? ಇವರದ್ದು ಓಕೆ..!

ಬೆಳಗಾವಿ.

ಗಡಿನಾಡ ಬೆಳಗಾವಿಯಲ್ಲಿ‌ ಈಗ ಉಪ‌ಮುಖ್ಯಮಂತ್ರಿ ಗಳೂ ಆಗಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ಅವರ ಡಿನ್ನರ ಪಾಲಿಟಿಕ್ಸ್ ಬಗ್ಗೆಯೇ ಚರ್ಚೆ ಜೋರಾಗಿ ನಡೆದಿದೆ.

ಅಷ್ಟೇ ಅಲ್ಲ ಬೆಳಗಾವಿ ಡರ್ಟಿ ಪಾಲಿಟಿಕ್ಸ್ ಬಗ್ಗೆ ಕೇಳಬೇಡಿ ಎನ್ನುವ ಡಿಕೆಶಿ ಹೇಳಿಕೆ ಬಗ್ಗೆ ಜಿಲ್ಲೆಯ ಬಹುತೇಕ ನಾಯಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಆದರೆ ಸಚಿವ ಸತೀಶ್ ಜಾರಕಿಹೊಳಿ ಮಾತ್ರ ಈ ಡರ್ಟಿ ಪಾಲಿಟಿಕ್ಸ್ ಹೇಳಿಕೆ ಬಗ್ಗೆ ‘ಅವರನ್ನೇ‘ ಕೇಳಿ ಎಂದು ಸೂಚ್ಯವಾಗಿ ಹೇಳಿದ್ದಾರೆ.

ನಿಮಗೆ ನೆನಪಿರಬಹುದು. ಇತ್ತೀಚೆಗೆ ಡಿ‌ಕೆಶಿ ಅವರು ವಿದೇಶ ಪ್ರವಾಸ ದಲ್ಲಿದ್ದ ಸಂದರ್ಭದಲ್ಲಿ ಸಚಿವ ಸತೀಶ್ ಜಾರಕಿಹೊಳಿ ನಿವಾಸದಲ್ಲಿ ಅಹಿಂದ ಶಾಸಕರ ಡಿನ್ನರ ಪಾರ್ಟಿ ನಡೆದಿತ್ತು.

ನಂತರ ಗೃಹ ಸಚಿವ ಪರಮೇಶ್ವರ ಕೂಡ ಅದೇ ತೆರನಾದ ಡಿನ್ನರ ಪಾರ್ಟಿ ಆಯೋಜನೆಗೆ ಮುಂದಾಗಿದ್ದರು. ಆದರೆ ಆಗ ವಿದೇಶದಿಂದ ವಾಪಸ್ಸಾದ ಡಿಸಿಎಂ ಡಿ.ಕೆ‌. ಶಿವಕುಮಾರ ಈ ಡಿನ್ಬರ ಪಾರ್ಟಿ ಪಾಲಿಟಿಕ್ಸ್ ಬಗ್ಗೆ ಹೈಕಮಾಂಡಗೆ ದೂರು ನೀಡಿ ಅದು ರದ್ದಾಗುವಂತೆ ಮಾಡಿದರು. ಆಗ ಅದರ ಬಗ್ಗೆ ಬಣ ಬಡಿದಾಟ ಜೋರಾಗಿ ನಡೆಯಿತು.‌ಅದೆಲ್ಲಾ ಮುಗಿದ ಅಧ್ಯಾಯ.

ಈಗ ಗಾಂಧಿ ಭಾರತ ಕಾರ್ಯಕ್ರಮ ಕ್ಕೆ ಮುನ್ನಾದಿನ ಆಗಮಿಸಿದ ಅದಶೆ ಡಿಸಿಎಂ ಡಿ.ಕೆ. ಶಿವಕುಮಾರ ಅವರು ಬೆಳಗಾವಿಯಲ್ಲಿಯೇ ಎರಡು ಕಡೆಗೆ ತಮ್ಮವರೊಂದಿಗೆ ಡಿನ್ನರ ಪಾರ್ಟಿ ನಡೆಸಿದರು.

Oplus_0

ಬೆಳಗಾವಿ ಉತ್ತರ ಕ್ಷೇತ್ರದ ಮಾಜಿ ಶಾಸಕ ಫಿರೋಜ ಶೇಠ ಮತ್ತು ಬಿಜೆಪಿ ಧುರೀಣ ಡಾ.ಪ್ರಭಾಕರ ಕೋರೆ ಮನೆಗೆ ಡಿನ್ನರಗೆ ಡಿಕೆಶಿ ಮತ್ತು ಇತರರು ಹೋಗಿದ್ದರು.

ಶೇಠರ ಮನೆಗೆ ಹೋಗಿದ್ದ ಸಂದರ್ಭದಲ್ಲಿ ಹಾಲಿ ಶಾಸಕ ಆಸೀಫ್ ಶೇಠ ಹಾಜರಿದ್ದರು. ಅವರು ಇತ್ತೀಚೆಗಷ್ಟೆ ಸಚಿವ ಜಾರಕಿಹೊಳಿ ಜೊತೆ 15 ಜನ‌ ಶಾಸಕರು ವಿದೇಶ ಪ್ರವಾಸ ಹೋಗುವುದಾಗಿ ಹೇಳಿದ್ದರು. ಅದರ ಬಗ್ಗೆ ಖುದ್ದು ಡಿಕೆಶಿ ಆಸೀಫ್ ರನ್ನು ಕ್ಲಾಸ್ ತೆಗೆದುಕೊಂಡರು ಎನ್ನುವ ಸುದ್ದಿ ಇದೆ.

ಇಲ್ಲಿ ಡಿಕೆಶಿ ಅವರು ಫಿರೋಜ್ ಶೇಠ ಮನೆಗೆ ಯಾಕೆ ಹೋದರು ಎನ್ನುವ ಚರ್ಚೆ ಕೂಡ ಜೋರಾಗಿ ನಡೆದಿದೆ. ಅದರ ಬಗ್ಗೆ ಕೆದಕುತ್ತ ಹೋದರೆ ಮತ್ತೊಂದು ರಾಜಕೀಯ ಬಾಗಿಲು ತೆರೆದುಕೊಳ್ಳುತ್ತದೆ.

ಇದಾದ ನಂತರ ಇಂದು ಬಿಜೆಪಿ ಹಿರಿಯ ಮುಖಂಡರೂ ಆಗಿರುವ ಕೆಎಲ್ಇ ಕಾರ್ಯಾಧ್ಯಕ್ಷ ಡಾ. ಪ್ರಭಾಕರ ಕೋರೆ ಮನೆಗೆ ತಮ್ಮ‌ ಆಪ್ತೆಷ್ಟರ ಜೊತೆ ಔತಣಕೂಟಕ್ಕೆ ಹೋಗಿದ್ದರು.

ಇಲ್ಲಿಗೆ ಹೋಗಿದ್ದರ ಬಗ್ಗೆ ಡಿಕೆಶಿ ಕಾರಣ ಕೂಡ ಕೊಟ್ಟಿದ್ದಾರೆ. ಅಷ್ಟೆ ಅಲ್ಲ ಯಾವುದೇ ರೀತಿಯ ರಾಜಕೀಯ ಚರ್ಚೆ ನಡೆದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ಆದರೆ ಬೆಳಗಾವಿ ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿರುವ ಮಾತುಗಳೇ ಬೇರೆ. ಇಲ್ಲಿ ಅಮಿತ್ ಕೋರೆ ಅವರಿಗೆ ಮುಂದಿನ‌ ದಿನಗಳಲ್ಲಿ ಚಿಕ್ಕೋಡಿ ಭಾಗದ ಯಾವುದಾದರೂ ಕ್ಷೇತ್ರದ ಟಿಕೆಟ್ ಬಗ್ಹೆ ಆಶ್ವಾಸನೆ ಕೊಟ್ಟಿರಬಹುದು ಎನ್ನುವ ಮಾತುಗಳು ಕೇಳಿ ಬರುತ್ತಿವೆ.

ಇದೆಲ್ಲದರ ನಡುವೆ ಡಾ.‌ಕೋರೆ ಅವರು, ನಾನು ಬಿಜೆಪಿಯಲ್ಲೇ ಆರಾಮವಾಗಿದ್ದೇನೆ. ಹೀಗಾಗಿ ಪಾರ್ಟಿ ಬದಲಿಸುವ ಪ್ರಮೇಯವೇ ಇಲ್ಲ ಎಂದು ಹೇಳಿದ್ದಾರೆ.

ಇಲ್ಲಿ ಇದೆಲ್ಲ ಒತ್ತಟ್ಟಿಗಿರಲಿ, ಡಿನ್ನರ ಬ ಪಾರ್ಟಿ ವಿಷಯದಲ್ಲಿ ಒಂದೇ‌ ನ್ಯಾಯ ಏಕಿಲ್ಲ ಎನ್ನುವುದು ಬಹುತೇಕರ ಪ್ರಶ್ನೆ . ಉತ್ತರಿಸೋರು ಯಾರು.?

Leave a Reply

Your email address will not be published. Required fields are marked *

error: Content is protected !!