ಆಯುಕ್ತರ ಮುಂದೇಯೇ `ಅಧಿಕಾರ’ ರಂಪಾಟ. ಹೊಡೆದಾಟ ಹಂತಕ್ಕೆ ಬಂದಾಗ ಮಧ್ಯ ಪ್ರವೇಶ ಮಾಡಿದ್ದು ಯಾರು ಗೊತ್ತಾ?
ಆರೋಗ್ಯ ಇಲಾಖೆಯ ಇಬ್ಬರು ಅಣದಿಕಾರಿಗಳ ರಂಪಾಟ.
ಹಣಕಾಸಿನ ವಿಷಯಕ್ಕೆ ನಡೀತಾ ಈ ಮಾತಿನ ಚಕಮಕಿ. ಪಾಲಿಕೆಯಲ್ಲಿ ನಿಲ್ಲದ ಸಮರ,
ಜಿಲ್ಲಾ ಮಂತ್ರಿ ಮುಂದೆಯೂ ಹೋಯಿತು ಪಾಲಿಕೆ ಕರಾಮತ್ತು
ಬೆಳಗಾವಿ.
ಗಡಿನಾಡ ಬೆಳಗಾವಿ ಮಹಾನಗರ ಪಾಲಿಕೆಯ ಆಯುಕ್ತರ ಸಮ್ಮುಖದಲ್ಲಿಯೇ ಆರೋಗ್ಯ ಶಾಖೆಯ ಇಬ್ಬರು ಅಧಿಕಾರಿಗಳು ಏಕವಚನದಲ್ಲಿ ಬೈದಾಡಿ ಕೊಂಡ ಘಟನೆ ಇಂದು ನಡೆದಿದೆ.
ಆಯುಕ್ತರ ಕೊಠಡಿಯಲ್ಲಿಯೇ ಈ ಘಟನೆ ನಡೆದಿದೆ.
ಮಹಾನಗರ ಪಾಲಿಕೆಯಲ್ಲಿ ನಿತ್ಯ ಮಾಧ್ಯಮಗಳಲ್ಲಿ ಪ್ರಕಟವಾಗುತ್ತಿರುವ ವರದಿಗಳ ಹಿನ್ನೆಲೆಯಲ್ಲಿ ಆಯುಕ್ತರು ಆಧೀನ ಅಧಿಕಾರಿಗಳ ಸಭೆ ಕರೆದ ಸಂದರ್ಭದಲ್ಲಿ ಈ ಇಬ್ಬರು ಅಧಿಕಾರಿಗಳು ರಂಪಾಟ ಮಾಡಿಕೊಂಡಿದ್ದಾರೆ,

ಪರಿಸ್ಥಿತಿ ಕೈಕೈ ಮಿಲಾಯಿಸುವ ಮಟ್ಟಕ್ಕೂ ಹೋಗಿತ್ತು ಎಂದು ಮೂಲಗಳು ತಿಳಿಸಿವೆ.
ಆರೋಗ್ಯ ಶಾಖೆಯ ಡಾ, ನಾಂದ್ರೆ ಮತ್ತು ಅದೇ ವಿಭಾಗದ ಎಇಇ ಕಲಾದಗಿ ನಡುವೆ ಈ ಘಟನೆ ನಡೆದಿದೆ.
ಆರಂಭದಲ್ಲಿ ಮಾತಿನ ಚಕಮಕಿ ನಡೆದು ಕೊನೆಗೆ ಅದು ಕೈ ಕೈ ಮಿಲಾಯಿಸುವ ಮಟ್ಟಕ್ಕೂ ಹೋಯಿತು ಎಂದು ಹೇಳಲಾಗಿದೆ.
ಈ ಸಂದರ್ಭದಲ್ಲಿ ಅಲ್ಲಿಯೇ ಇದ್ದ ಟಿಪಿಓ ವಿಭಾಗದ ಅಧಿಕಾರಿಯೊಬ್ಬರು ಅಡ್ಡಲಾಗಿ ಬಂದಿದ್ದರಿಂದ ಹೊಡೆದಾಟ ತಪ್ಪಿತು ಎಂದು ಮೂಲಗಳು ಹೇಳಿವೆ.
ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಈಗ ಅಧಿಕಾರಕ್ಕೆ ಕತ್ತರಿ ಹಾಕುವ ಕೆಲಸ ನಡೆದಿದೆ, ಈ ಹಿನ್ನೆಲೆಯಲ್ಲಿ ಕಳೆದ ಕೆಲ ದಿನಗಳ ಹಿಂದೆ ನಡೆದ ಸ್ಥಾಯಿ ಸಮಿತಿ ಸಭೆಯಲ್ಲಿ ತಮಗೆ ಆ ಅಧಿಕಾರ ಇಲ್ಲ ಎನ್ನುವ ವಿಷಯವನ್ನು ಒಬ್ಬರು ಹೇಳಿದ್ದರು.
ಇಂದು ಆಯುಕ್ತರು ಕರೆದ ಸಭೆಯಲ್ಲೂ ಕೂಡ ಇದೇ ವಿಷಯ ಪ್ರಸ್ತಾಪವಾಯಿತು. ಆದರೆ ಇಲ್ಲಿ ಯಾವುದೋ ಒಂದು ವಿಷಯಕ್ಕೆ ಸಂಬಂಧಿಸಿದಂತೆ ಇಬ್ಬರು ವಾದ ನಡೆಸಿದರು, ಕೊನೆಗೆ ಅದು ಕೈಕೈ ಮಿಲಾಯಿಸುವ ಮಟ್ಟಕ್ಕೂ ಹೋಯಿತು ಎನ್ನಲಾಗಿದೆ.