ಬ್ರಾಹ್ಮಣ ಸಮಾವೇಶ ಅತ್ಯಂತ‌ ಯಶಸ್ಸು ಕಂಡಿದೆ- ಹಾರನಹಳ್ಳಿ

ರಾಜ್ಯ ಸಮಾವೇಶ ಭಾರೀ ಯಶಸ್ಸು ಕಂಡಿದೆ
ದಾವಣಗೆರೆ: ಬ್ರಾಹ್ಮಣ ಸಮಾಜದ ಮೊದಲ ರಾಜ್ಯಮಟ್ಟದ ಸಮಾವೇಶ ನಮ್ಮಲ್ಲಿರುವ ಸುಪ್ತ ಶಕ್ತಿ, ಸಾಮರ್ಥ್ಯದ ದ್ಯೋತಕ ಆಗಿದೆ ಎಂದು ಅಖಿಲ ಕರ್ನಾಟಕ ಬ್ರಾಹ್ಮಣ ಸಮಾಜದ ಅಧ್ಯಕ್ಷ ಅಶೋಕ್ ಹಾರನಹಳ್ಳಿ ಹೇಳಿದರು.
ನಗರದ ಶಂಕರ್ ಸಮುದಾಯ ಭವನದಲ್ಲಿ ದಾವಣಗೆರೆ ಬ್ರಾಹ್ಮಣ ಸಮಾಜ ಹಮ್ಮಿಕೊಂಡ ಸ್ಪೂರ್ತಿ 2025 ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳ ಉದ್ಘಾಟಿಸಿ ಮಾತನಾಡಿದ ಅವರು, ಬ್ರಾಹ್ಮಣ ಸಮಾಜವನ್ನು ಎಲ್ಲರೂ ಗೌರವಿಸುತ್ತಾರೆ. ಇಂದಿಗೂ ನಮ್ಮ ಸಮಾಜದ ಬಗ್ಗೆ ಇರುವ ಗೌರವ ಕುಂದಿಲ್ಲ.

ಆದರೆ, ನಮ್ಮಲ್ಲಿರುವ ಸಣ್ಣಪುಟ್ಟ ಗೊಂದಲ, ಸಣ್ಣ ಗುಂಪುಗಾರಿಕೆ ನಮಗೆ ಹಿನ್ನಡೆ ಆಗಿದೆ ಎಂದರು.
ನಮ್ಮ ಸಮಾವೇಶದ ಬಳಿಕ ಅಂತಾರಾಷ್ಟ್ರೀಯ ಮಟ್ಟದ ದೊಡ್ಡ ದೊಡ್ಡ ಕಂಪನಿ ನಡೆಸುತ್ತಿರುವ ಬ್ರಾಹ್ಮಣ ಉದ್ಯಮಿಗಳು ನಮ್ಮಿಂದ ಯಾವ ಸೇವೆ ಸಮಾಜಕ್ಕೆ ಆಗಬೇಕು ತಿಳಿಸಿ ಎನ್ನುತ್ತಿದ್ದಾರೆ. ಹಿರಿಯ ರಾಜರಕರಣಿಗಳು, ಅಧಿಕಾರಿಗಳು ನಮ್ಮ ಬೆನ್ನಿಗೆ ನಿಂತಿದ್ದಾರೆ. ನಾವು ಸರ್ಕಾರ ಮಟ್ಟದಲ್ಲಿ ಕೇಳುವ ಬದಲು ನಾವೇ ನಮ್ಮಲ್ಲಿರುವ ಸುಪ್ತ ಶಕ್ತಿ, ಸಾಮರ್ಥ್ಯವನ್ನು ಬಳಸುವ ಕಡೆ ಗಮನ ಹರಿಸಬೇಕು ಎಂದರು.
ಬ್ರಾಹ್ಮಣ ಸಮಾಜದ ದಾವಣಗೆರೆ ಜಿಲ್ಲಾಧ್ಯಕ್ಷ ಶಶಿಕಾಂತ್, ಡಾ. ಅಚ್ಯುತ್, ಸತ್ಯನಾರಾಯಣ ಇತರರು ವೇದಿಕೆಯಲ್ಲಿದ್ದರು.

Leave a Reply

Your email address will not be published. Required fields are marked *

error: Content is protected !!