ಮೇಯರ್ ಚುನಾವಣೆಗೆ ಕಾಲ ಸನ್ನಿಹಿತ’
1 ರಂದು ಸಾಮಾನ್ಯ ವಿಶೇಷ ಸಭೆ
ಬೆಳಗಾವಿ.
ಹಂಗಾಮಿ ಮೇಯರ್ ಅಧ್ಯಕ್ಷತೆಯಲ್ಲಿಯೇ ಬೆಳಗಾವಿ ಮಹಾನಗರ ಪಾಲಿಕೆ ವಿಶೇಷ ಸಭೆ ನಡೆಸಲು ಸಕರ್ಾರ ಅನುಮತಿ ನೀಡಿದೆ.
ಮಹಾನಗರ ಪಾಲಿಕೆ ಮೇಯರ್ ಅವಧಿ ಮುಗಿದಿದ್ದರಿಂದ ಬಜೆಟ್ ಸಭೆ ನಡಸಲು ಬರುತ್ತದೆಯೋ ಇಲ್ಲವೋ ಎನ್ನುವುದರ ಬಗ್ಗೆ ಪಾಲಿಕೆ ಸ್ಪಷ್ಟೀಕರಣ ಕೇಳಿತ್ತು, ಅಷ್ಟೇ ಅಲ್ಲ ಇಬ್ಬರು ನಗರಸೇವಕರ ಸದಸ್ಯತ್ವ ರದ್ದುಗೊಂಡಿದ್ದರಿಂದ ಮೇಯರ್ ಚುನಾವಣೆಗೆ ಒಂದು ರೀತಿಯ ಕಗ್ಗಂಟಾಗಿತ್ತು,

ಈಗ ಸಕರ್ಾರ ಅನುಮತಿ ನೀಡಿದ ಹಿನ್ನೆಲೆಯಲ್ಲಿ ಇದೇ ದಿ, 1 ರಂದು ಬೆಳಿಗ್ಗೆ 11 ಕ್ಕೆ ಹಂಗಾಮಿ ಮೇಯರ್ ಅಧ್ಯಕ್ಷತೆಯಲ್ಲಿ ಸಭೆ ನಡೆಸುವ ತೀಮರ್ಾನವನ್ನು ಮಾಡಲಾಗಿದೆ ಎಂದು ಗೊತ್ತಾಗಿದೆ. ಅಷ್ಟೇ ಅಲ್ಲ ಸಭೆಯ ಗಮನಕ್ಕೆ ಇಬ್ಬರು ಸದಸ್ಯರ ಸದಸ್ಯತ್ವ ವಿಷಯ ಕೂಡತರುವ ಕೆಲಸವನ್ನು ಅಧಿಕಾರಿಗಳು ಮಾಡಲಿದ್ದಾರೆ, ಆದರೆ ಮೂಲಗಳ ಪ್ರಕಾರ ಇಬ್ಬರ ಸದಸ್ಯತ್ವ ರದ್ದತಿ ಬಗ್ಗೆ ಚಚರ್ೆಗೆ ಅವಕಾಶವಿಲ್ಲ ಎಂದು ಗೊತ್ತಾಗಿದೆ, ಇಬ್ಬರ ಸದಸ್ಯತ್ವ ರದ್ದತಿಯನ್ನು ಧಾರವಾಡ ಹೈಕೋರ್ಟ ಎತ್ತಿ ಹಿಡಿದಿದೆ.
ಈ ಸಭೆಯ ನಂತರ ಪ್ರಾದೇಶಿಕ ಆಯುಕ್ತರು ಮೇಯರ್ ಚುನಾವಣೆಗೆ ಮುಹೂರ್ತ ಫಿಕ್ಸ್ ಮಾಡಬಹುದು ಎನ್ನುವ ಮಾತುಗಳಿವೆ,
ಇದೆಲ್ಲದರ ನಡುವೆ ಸ್ಥಾಯಿ ಸಮಿತಿ ಸಭೆಯಲ್ಲಿ ತಾತ್ಕಾಲಿಕ ಬಜೆಟ್ಗೆ ಅನುಮತಿ ನೀಡಲಾಗಿದೆ ಎಂದು ಹೇಳಲಾಗಿದೆ.