Headlines

ಇದು ನಿಮ್ಮ ಸೊಂಟ ಮುರಿಯುತ್ತೆ..!

ಬೆಳಗಾವಿ.

ಅಬ್ಬಾ ಅದೇನೊ‌ ಏನೊ.! ನೀವು ಅದರ ಉಸಾಬರಿಗೆ ಹೋಗದೇ ನಿಮ್ಮಷ್ಟಕ್ಜೆ ಹೋಗ್ತಿದ್ದರೂ ಅದು ನಿಮ್ನನ್ನು ಬಿಡಲ್ಲ.

ಅದು ನಿಮ್ಮ‌ ಸೊಂಟವನ್ನು‌ ಮುರಿಯುತ್ತದೆ .‌ವಾಹನ ಮೇಲೆ ಹೊರಟರೂ ಅದು ನಿಮ್ಮನ್ನು ಕೇಳೊದಿಲ್ಲ. ಅದು‌ ನಿಮ್ಮನ್ನು ಕೆಳಗೆ ಬೀಳಿಸಿ ಸೊಂಟ ಅಷ್ಟೇ ಅಲ್ಲ‌ ಕೈಕಾಲು ಮುರಿಯುತ್ತದೆ.‌ಅಷ್ಟು ಶಕ್ತಿ ಅದಕ್ಕಿದೆ.

ಅದು ಬೇರೆನೂ ಅಲ್ಲ.

ಅದು ಹಲಶಿ ಬೆಕವಾಡ ಮತ್ತು ಹಲಶಿ ಬೀಡಿ ರಸ್ತೆ.

ಧಾರವಾಡದಿಂದ ನೀವು ಹಲಶಿಗೆ ಹೋಗಲು ಇದೇ ರಸ್ತೆಯನ್ನು ಅವಲಂಬಿಸಬೇಕು‌. ಕೇವಲ ಆರು ಕಿಲೋ ಮೀಟರ ಅಂತರ ಇರುವ ಈ ರಸ್ತೆಯನ್ನು ಗಮನಿಸಿದರೆ ಅದು ರಸ್ತೆ ಎನಿಸದೇ ಇರದು.

ಹುಷಾರು..ಇವರು ನಿಮ್ಮ‌ಠಾಣೆಗೂ ಬರ್ತಾರೆ

https://ebelagavi.com/index.php/2023/09/03/hi-35/

ಬರೀ ಹೊಂಡವೇ ಕಾಣಸಿಗುತ್ತದೆ. ಬಹುಶ; ಈ ಭಾಗದ ಜನಪ್ರತಿನಿಧಿಗಳಿಗೆ ಇಂರಹುದೊಂದು ರಸ್ತೆ ನಮ್ಮ ಖಾನಾಪುರ ಕ್ಷೇತ್ರದಲ್ಲಿ ಇದೆ ಎನ್ನುವುದು ಗೊತ್ತಿದ್ದಂತಿಲ್ಲ. ಅಥವಾ‌‌ ಈ ಭಾಗದಲ್ಲಿ ಕನ್ನಡಿಗರೇ ಹೆಚ್ಚಾಗಿ ಇರ್ತಾರೆ ಅಂತ ಹಾಗೇ ಬಿಟ್ಟಿರಬಹುದು ಅನಿಸುತ್ತದೆ.

ಈ ಕಾರಣದಿಂದ ಧಾರವಾಡ ಮಾರ್ಗವಾಗಿ ಹಲಶಿ ಕಡೆಗೆ ಬರುವವರು‌ ನಿತ್ಯ‌ ಜನಪ್ರತಿನಿಧಿಗಳನ್ನು ಮತ್ತು ಸರ್ಕಾರವನ್ನು ಶಪಿಸದೇ ಇರಲಾರರು.

Leave a Reply

Your email address will not be published. Required fields are marked *

error: Content is protected !!