ಬ್ಸಾಹ್ಮಣ ಸಂಘಟನೆ ವಿಸ್ತಾರಕ್ಕೆ ಆಧ್ಯತೆ

ಬ್ಸಾಹ್ಮಣ ಸಂಘಟನೆ ವಿಸ್ತಾರಕ್ಕೆ ಆಧ್ಯತೆ.

ಅಶೋಕ‌ ಹಾರನಹಳ್ಳಿ ಬೆಂಬಲಿತ ಅಭ್ಯರ್ಥಿ ಗೆ ಟ್ರಸ್ಟ ಬೆಂಬಲ.

AKBMS ಚುನಾವಣೆ ಏಪ್ರಿಲ್ 23 ಕ್ಕೆ

ಬೆಳಗಾವಿ ಜಿಲ್ಲಾ ಪ್ರತಿನಿಧಿ ಅವಿರೋಧ ಆಯ್ಕೆಗೆ ಒಲವು.


ಬೆಳಗಾವಿ
ಬ್ರಾಹ್ಮಣ ಸಂಘಟನೆಯನ್ನು ಜಿಲ್ಲೆಯಲ್ಲಿ ಇನ್ನಷ್ಡು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಜಿಲ್ಲಾ ಬ್ರಾಹ್ಮಣ ಸಭಾ ಟ್ರಸ್ಟ್ ಮಹತ್ವದ ತೀರ್ಮಾನ ಕೈಗೊಂಡಿದೆ.
ನಗರದಲ್ಲಿ ಫೌಂಡ್ರಿ ಕ್ಲಸ್ಟರ್ ನಲ್ಲಿ ಟ್ರಸ್ಟ್ ಅದ್ಯಕ್ಷರೂ ಆಗಿರುವ ರಾಮ ಭಂಡಾರಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಕಿ ಈ ತೀರ್ಮಾನ ಕೈಕೊಳ್ಳಲಾಗಿದೆ.

ಜಿಲ್ಲಾ ಬ್ರಾಹ್ಮಣ ಸಮಾಜ ಟ್ರಸ್ಟನ ಕಾರ್ಯವನ್ನು ಜಿಲ್ಲೆಯಾದ್ಯಂತ ವಿಸ್ತರಣೆ ಮಾಡುವುದರ ಜೊತೆಗೆ ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯರನ್ನು ಮಾಡಿಕೊಂಡು ಸಮಾಜ‌ಮುಖಿ ಕಾರ್ಯವನ್ನು ಮಾಡಲು ನಿರ್ಧರಿಸಲಾಯಿತು.
ಇದರ ಜೊತೆಗೆ ಕಳೆದ ಬಾರಿಯಂತೆ ಈ ಸಲವೂ ಸಹ ಸಮಾಜದ ಬಡ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸಕ್ಕೆ ಅನುಕೂಲ ಮಾಡಿಕೊಡುವ ಬಗ್ಗೆ ನಿರ್ಧರಿಸಲಾಯಿತು.
ಇದನ್ನು ಹೊರತುಪಡಿಸಿ ಇದೇ ಏಪ್ರಿಲ್ ತಿಂಗಳಲ್ಲಿ ನಡೆಯುವ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಚುನಾವಣೆ ಬಗ್ಗೆ ಕೂಡ ಗಂಭೀರ ಚರ್ಚೆ ನಡೆಯಿತು.

ಈ ವಿಷಯದ ಬಗ್ಗೆ ಪ್ರಸ್ತಾಪಿಸಿದ ಟ್ರಸ್ಟ್ ಉಪಾಧ್ಯಕ್ಷ ಭರತ ದೇಶಪಾಂಡೆ ಅವರು, ಈ ಚುನಾವಣೆಯಲ್ಲಿ ಹಾಲಿ ಅಧ್ಯಕ್ಷ ಅಶೋಕ ಹಾರನಹಳ್ಳಿ ಬೆಂಬಲಿತ ಅಭ್ಯರ್ಥಿ ವಿ. ಭಾನುಪ್ರಕಾಶ ಶರ್ಮ ಅವರಿಗೆ ಬಲಿಸಲು ಮಹತ್ವದ ನಿರ್ಧಾರ ಕ್ಕೆ ಎಲ್ಲರೂ ಸಮ್ನತಿ ಸೂಚಿಸಿದರು.
ಬೆಳಗಾವಿ ಜಿಲ್ಲಾ ಪ್ರತಿನಿಧಿ ಸ್ಥಾನಕ್ಕೆ ಮಾಜಿ ನಗರಸೇವಕಿ ಅನುಶ್ರೀ ದೇಶಪಾಂಡೆ ಅವರನ್ನು ಕಣಕ್ಕಿಳಿಸಲು ಎಲ್ಲರೂ ಸಮ್ಮತಿ ಸೂಚಿಸಿದರು. ಅಷ್ಟೆ ಅಲ್ಲ ಬೆಳಗಾವಿ ಜಿಲ್ಲಾ ಪ್ರತಿನಿಧಿ ಸ್ಥಾನಕ್ಕೆ ಅವಿರೋಧ‌ ಆಯ್ಕೆ ‌ಮಾಡುವ ನಿಟ್ಟಿನಲ್ಲಿ ಎಲ್ಲರೂ ಪ್ರಯತ್ನ ಮಾಡೋಣ ಎಂದು ಭರತ ದೇಶಪಾಂಡೆ ಹೇಳಿದರು.
ಇದರ ಜೊತೆಗೆ ಬ್ರಾಹ್ಮಣ ಟ್ರಸ್ಟ್ ವೆಬ್ ಸೈಟ ಮಾಡುವ ಬಗ್ಗೆ ನಿರ್ಧಾರ‌ಮಾಡಲಾಯಿತು.
ಟ್ರಸ್ಟ್ ಖಜಾಂಚಿ ರಾಜಶೇಖರ ತಳೇಗಾಂವ, ಜಂಟಿ ಕಾರ್ಯ ದರ್ಶಿ ವಿಲಾಸ ಜೋಶಿ, ಅನುಶ್ರೀ ದೇಶಪಾಂಡೆ ಮುಂತಾದವರು ಹಾಜರಿದ್ದರು.

Leave a Reply

Your email address will not be published. Required fields are marked *

error: Content is protected !!