7.5 ಲಕ್ಷ ಫಲಾಭವಿಗಳಿಗೆ ಒಂದೇ ಮೊಬೈಲ್ ನಂಬರ

ಮೋದಿ ಸರ್ಕಾರವು ಪ್ರಾರಂಭಿಸಿದ ಅತ್ಯಂತ ಮಹತ್ವಾಕಾಂಕ್ಷೆಯ ಸಾಮಾಜಿಕ ಕಲ್ಯಾಣ ಯೋಜನೆಗಳಲ್ಲಿ ಒಂದಾದ, “ಆಯುಷ್ಮಾನ್ ಭಾರತ್-ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆ” (AB-PMJAY)ಯಡಿ ಅವ್ಯವಹಾರ ನಡೆದಿದೆ ಎಂದು ಸಿಎಜಿ ವರದಿ ತಿಳಿಸಿದೆ.

ಭಾರತದ ಕಂಟ್ರೋಲರ್ – ಆಡಿಟರ್ ಜನರಲ್ (ಸಿಎಜಿ) ಆಯುಷ್ಮಾನ್ ಭಾರತ್ – ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆಯ ಬಹುದೊಡ್ಡ ಅವ್ಯವಹರಾದ ಬಗ್ಗೆ ಉಲ್ಲೇಖಿಸಿದ್ದು, 7.5 ಲಕ್ಷ ಫಲಾನುಭವಿಗಳು ಎಂದು ಹೇಳಲಾದ ವ್ಯಕ್ತಿಗಳು “ಒಂದೇ ಮೊಬೈಲ್” ಸಂಖ್ಯೆಯೊಂದಿಗೆ ಸಂಪರ್ಕ ಹೊಂದಿದ್ದಾರೆ ಎಂದು ಬಹಿರಂಗಪಡಿಸಿದ್ದಾರೆ.

ಇದಲ್ಲದೆ ದಾಖಲೆ ಪ್ರಕಾರ ಈ ಮೊದಲೇ ಮೃತಪಟ್ಟಿದ್ದಾರೆಂದು ಘೋಷಿಸಿಲಾಗಿದ್ದ 3,446 ರೋಗಿಗಳ ಚಿಕಿತ್ಸೆಗಾಗಿ 6.97 ಕೋಟಿ ರೂಪಾಯಿ ಪಾವತಿಸಲಾಗಿದೆ ಎಂದು ಭಾರತದ ಕಂಟ್ರೋಲರ್ ಮತ್ತು ಆಡಿಟರ್ ಜನರಲ್ (ಸಿಎಜಿ) ತಿಳಿಸಿದೆ.

ಈ ಯೋಜನೆಯಡಿ ಜನರಿಗೆ ನಗದು ರಹಿತ ಸೇವೆ ನೀಡಬೇಕಾಗಿತ್ತು. ಆದರೆ ಫಲಾನುಭವಿಗಳು ಚಿಕಿತ್ಸೆಗಾಗಿ ಹಣವನ್ನು ಪಾವತಿಸಿದ್ದಾರೆ ಎಂದು ಭಾರತದ ಕಂಟ್ರೋಲರ್ ಮತ್ತು ಆಡಿಟರ್ ಜನರಲ್ (CAG) ಅವರ ವರದಿ ಹೇಳಿದೆ.

Leave a Reply

Your email address will not be published. Required fields are marked *

error: Content is protected !!