ಬೆಳಗಾವಿ. ಸಧ್ಯದ ಪರಿಸ್ಥಿತಿ ಯನ್ನು ಗಮನಿಸಿದರೆ ಗಡಿನಾಡ ಬೆಳಗಾವಿಯಲ್ಲಿ ಅಕ್ರಮ ದಂಧೆಯ ಅಡ್ಡೆಗಳು ನಾಯಿ ಕೊಡೆಗಳಂತೆ ತಲೆಎತ್ತಿಕೊಂಡಿವೆ. ಅವುಗಳ ನಿಯಂತ್ರಣ ಮಾಡಬೇಕಾದವರು ಕೈಕಟ್ಟಿಕೊಂಡು ಕುಳಿತಿದ್ದಾರೆ ಎನ್ನುವ ಗಂಭೀರ ಆರೋಪ ಕೇಳಿ ಬರುತ್ತಿದೆ. ಇದೆಲ್ಲದರ ನಡುವೆ ಕ್ಲಬ್ ನಡೆಸುವ ವ್ಯಕ್ತಿಯೊಬ್ಬ ಬಿಚ್ಚಿಟ್ಟ ಹಫ್ತಾ ರಹಸ್ಯ ಇಡೀ ಇಲಾಖೆಯನ್ನು ಬೆಚ್ಚಿ ಬೀಳಿಸುವಂತಿದೆ. ಪೊಲೀಸ್ ಆಯುಕ್ತರನ್ನು ಹೊರತುಪಡಿಸಿ ಕೆಲ ಆಧೀನ ಅಧಿಕಾರಿಗಳ ಹೆಸರು ಉಲ್ಲೇಖಿಸಿ ತಿಂಗಳು ಎಷ್ಟೆಷ್ಟು ಮಾಮೂಲಿ ಹೋಗುತ್ತದೆ ಎನ್ನುವುದು ‘ ಇ ಬೆಳಗಾವಿ’ ಗೆ ಸಿಕ್ಕ ಆಡಿಯೋದಲ್ಲಿ ಉಲ್ಲೇಖವಾಗಿದೆ.