ಹೊಡೆದವರು ನಿರಾಳ,
ಹೊಡೆಸಿಕೊಂಡವನ ನರಳಾಟ.
ಮನೆಯಲ್ಲಿ ತುತ್ತು ಅನ್ನಕ್ಕೂ ಪರದಾಟ.
ಶೌಚಕ್ಕೂ ಬೇರೆಯವರ ಆಶ್ರಯ
ಬೆಳಗಾವಿ.
ಉದ್ಯಮಬಾಗ ಪೊಲೀಸರಿಂದ ಹಲ್ಲೆಗೊಳಗಾದ ಬಡಪಾಯಿ ಅಂಗವಿಕಲನ ಪರಿಸ್ಥಿತಿ ನೋಡಿದರೆ ಕರುಳು ಚುರ್ ಎನ್ನುತ್ತದೆ.
ಇಲ್ಲಿ ಹಲ್ಲೆ ಮಾಡಿದ ಪೊಲೀಸರು ನಿರಾಳವಾಗಿ ವರ್ಗಾವಣೆಗೊಂಡಿದ್ದಾರೆ. ಆದರೆ ಹಲ್ಲೆಗೊಳಗಾದ ಅಂಗವಿಕಲ ಈಗ ಹಾಸಿಗೆ ಹಿಡಿದಿದ್ದಾನೆ.

ಮನೆಯಲ್ಲಿ ಶೌಚಾಲಯಕ್ಕೆ ಹೋಗಲೂ ಬೇರೆಯವರ ಆಶ್ರಯ ಪಡಬೇಕಾಗಿದೆ. ದುಡಿದು ಮನೆ ನಡೆಸಬೇಕಾದ ಅಂಗವಿಕಲ ನಿರಂಜನ ಚೌಗಲಾ ಈಗ ಕನಿಷ್ಟ ಇನ್ನೂ 6 ತಿಂಗಳು ಹಾಸಿಗೆ ಬಿಟ್ಟು ಏಳದ ಪರಿಸ್ಥಿತಿಯಲ್ಲಿದ್ದಾನೆ. ಒಂದು ರೀತಿಯಲ್ಲಿ ತುತ್ತು ಕೂಳಿಗೂ ಪರದಾಟ ಮಾಡಬೇಕಾದ ಅನಿವಾರ್ಯ ಸ್ಥಿತಿ ಆತನಿಗೆ ಬಂದಿದೆ.
ಇಲ್ಲಿ ಆಸ್ಪತ್ರೆಗೆ ದಾಖಲಾಗಿದ್ದ ನಿರಂಜನನ್ನು ತಾವೇ ಡಿಸ್ಚಾರ್ಜ ಮಾಡಿಸಿ ಖಾಸಗಿ ಆಸ್ಪತ್ರೆಗೆ ದಾಖಲಿಸಿದ ಹಿಂದಿನ ಉದ್ದೇಶ ಏನಿತ್ತು ಎನ್ನುವುದು ಸ್ಪಷ್ಟವಾಗಬೇಕಿದೆ.
ಇದರ ಜೊತೆ ಅಂಗವಿಕಲನ ಹತ್ತಿರ ಆಂಗ್ಲ ಭಾಷೆಯಲ್ಲಿ ಏನು ಬರೆದು ಸಹಿ ಮಾಡಿಸಿಕೊಂಡರು ಎನ್ನುವುದು ತಿಳಿಯಬೇಕಿದೆ.
ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಸರಿಯಾಗುವುದಿಲ್ಲ ಎಂದು ಹೇಳಿ ಆಂಗ್ಲಭಾಷೆಯಲ್ಲಿ ಬರೆದ ಪತ್ರಕ್ಕೆ ಪೊಲೀಸರು ನನ್ನಿಂದ ಸಹಿ ಹಾಕಿಸಿಕೊಂಡರು ಎಂದು ಅಂಗವಿಕಲ ನಿರಂಜನ ತಿಳಿಸಿದ್ದಾನೆ.
ಆ ಅಡಿಯೊದಲ್ಲಿರುವ ಖಾಕಿದಾರಿಗಳೆಷ್ಟು?

https://ebelagavi.com/index.php/2023/08/18/hi-6/
ಖಾಸಗಿ ಆಸ್ಪತ್ರೆಗೆ ದಾಖಲಿಸಿದ ನಂತರ ಕೂಡ ಪೊಲೀಸರು ಅಲ್ಲಿ ಚಿಕಿತ್ಸೆಗೆ ಯಾವುದೇ ರೀತಿಯ ನೆರವು ಕಲ್ಪಿಸಲಿಲ್ಲ. ಹೀಗಾಗಿ ನಾನು ಮತ್ತೇ ಜಿಲ್ಲಾ ಆಸ್ಪತ್ರೆಗೆ ದಾಖಲಾದೆ, ಅಲ್ಲಿ ಕಾಲಿಗೆ ಅಪರೇಶನ್ ಮಾಡಿಸಿಕೊಂಡು ಕಳೆದ ಎರಡು ದಿನದ ಹಿಂದೆ ಮನೆಗೆ ಬಂದಿದ್ದೇನೆ ಎಂದನು

ಡಿಸಿ ವಿಚಾರಣೆ ಏನಾಯಿತು?
ಕಳೆದ ಅಗಸ್ಟ 15 ರಂದು ಜಿಲ್ಲಾಮಂತ್ರಿ ಸತೀಶ ಜಾರಕಿಹೊಳಿ ಪತ್ರಿಕಾಗೋಷ್ಟಿಯಲ್ಲಿ ಅಂಗವಿಕಲನ ಮೇಲೆ ನಡೆದ ಪೊಲೀಸ್ ದೌರ್ಜನ್ಯದ ಬಗ್ಗೆ ಪತ್ರಕರ್ತರು ಪ್ರಸ್ತಾಪ ಮಾಡಿದ್ದರು,
ಆಗ ಪ್ರಕರಣದ ಕುರಿತಂತೆ ಜಿಲ್ಲಾಧಿಕಾರಿಗಳು ವಿಚಾರಣೆ ನಡೆಸುತ್ತಾರೆ ಎಂದು ಸತೀಶ ಜಾರಕಿಹೊಳಿ ಹೇಳಿದ್ದರು,

ಆದರೆ ಈಗ ಜಿಲ್ಲಾಧಿಕಾರಿಗಳು ಹಲ್ಲೆ ಪ್ರಕರಣವನ್ನು ವಿಚಾರಣೆ ನಡೆಸಿದರಾ ಅಥವಾ ಇಲ್ಲವೇ ಎನ್ನುವುದು ಸ್ಪಷ್ಟವಾಗಬೇಕಿದೆ.