Headlines

ಸತೀಶ್, ರಾಜು ಒಕೆ,, ಫಿರೋಜ್ ಯಾಕೆ?

ಸಚಿವ ಹೆಬ್ಬಾಳಕರ, ಶಾಸಕ ಅಭಯ ಪಾಟೀಲ ,ಚನ್ನರಾಜ ಹಟ್ಟಿಹೊಳಿ ಇಲ್ಲ ಯಾಕೆ?

ದಿ.ಉಮೇಶ ಕತ್ತಿಗೆ ಮಾಡಿದ. ಅವಮಾನವೇ?

ವಿವಾದದಲ್ಲಿ ಬೆಳಗಾವಿ ಹೋಲ್ಡಿಂಗ್.

ತಪ್ಪು ಮಾಡಿದವರು ಯಾರಣ್ಣ?

ಬೆಳಗಾವಿ:
ಇದೊಂದು ಸಣ್ಣ ವಿಷಯ ಎನಿಸಿದರೂ ಒಳ ರಾಜಕೀಯ ಏಟು ಬಹಳ ದೊಡ್ಡದಿದೆ ಎನಿಸದೇ ಇರದು.
ಬೆಳಗಾವಿ ಜಿಲ್ಲೆಯ ರಾಜಕೀಯ ಬಲ್ಲವರಿಗೆ ಈ ಸಣ್ಣ ವಿಷಯದ ಒಳ ಹೊಡೆತ ಅರ್ಥವಾಗುತ್ತದೆ.
ಸಿಂಪಲ್ ಆಗಿದ್ದು ಇಷ್ಟೆ.


ಬೆಳಗಾವಿಯ ಹೃದಯಭಾಗ ಎನಿಸಿಕೊಂಡ ಕಿತ್ತೂರು ಚನ್ನಮ್ಮ‌ವೃತ್ತದಲ್ಲಿ (ತೋಟಗಾರಿಕೆ ಇಲಾಖೆ ಬಳಿ) ಮಹಾನಗರ ಪಾಲಿಕೆಯಿಂದ ಅತ್ಯಂತ ದೊಡ್ಡದಾದ ಹೋಲ್ಡಿಂಗ್ ಅಳವಡಿಸಲಾಗಿದೆ. ಅದು ಅಂದವೂ ಆಗಿದೆ.
ಅಲ್ಲಿ ಸ್ವಾತಂತ್ರ್ಯೊತ್ಸವ ಶುಭಾಶಯ ಕೋರಿ ಜಿಲ್ಲಾ ಮಂತ್ರಿ ಸತೀಶ ಜಾರಕಿಹೊಳಿ, ಉತ್ತರ ಕ್ಷೇತ್ರದ ಶಾಸಕ ಆಸೀಫ್ ಶೇಠ ಜೊತೆಗೆ ಮಾಜಿ ಶಾಸಕ ಫಿರೋಜ ಶೇಠ ಪೊಟೊವನ್ನು ಹಾಕಲಾಗಿದೆ.


ಮತ್ತೊಂದು ಬದಿಗೆ ಸಿಎಂ, ಡಿಸಿಎಂ ಪೊಟೊ ಇದೆ.
ಗಮನಿಸಬೇಕಾದ ಸಂಗತಿ ಎಂದರೆ, ಅದನ್ನು ಖಾಸಗಿಯವರು ಯಾರಾದರೂ ಹಾಕಿದ್ದರೆ ಅದು ಅವರಿಷ್ಟ ಎಂದು ಸುಮ್ಮನಿರಬಹುದಿತ್ತು. ಆದರೆ ಆ ದೊಡ್ಡ ಹೋಲ್ಡಿಂಗ್ ನಲ್ಲಿ ಮಹಾನಗರ ಪಾಲಿಕೆ, ಬೆಳಗಾವಿ ಹೆಸರು ಇದ್ದುದರಿಂದ ಇದು ವಿವಾದಕ್ಕೆ ಎಡೆ ಮಾಡಿಕೊಡುತ್ತಿದೆ.

ಒಂದು ವೇಳೆ ಇದು‌ ಮಹಾನಗರ ಪಾಲಿಕೆ ವತಿಯಿಂದ ಹಾಕಿದ್ದರೆ ಅದರಲ್ಲಿ ಗ್ರಾಮೀಣ ಶಾಸಕಿ ಲಕ್ಷ್ಮೀ ಹೆಬ್ಬಾಳಕರ, ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಡಿಹೊಳಿ, ಬೆಳಗಾವಿ ದಕ್ಷಿಣ ಕ್ಷೇತ್ರದ ಶಾಸಕ ಅಭಯ ಪಾಟೀಲರ ಜೊತೆಗೆ ಸಂಸದೆ ಮಂಗಲಾ ಅಂಗಡಿ, ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಬೆಳಗಾವಿ ಪಾಲಿಕೆ ಮೇಯರ್ ಪೊಟೊ ಇರಬೇಕಿತ್ತು.

ಆದರೆ ಅದರಲ್ಲಿ ಇವರ್ಯಾರದ್ದು ಇರದೇ ಇದ್ದುದು ದೊಡ್ಡ ವಿವಾದ ಆಗುವ ಸಾಧ್ಯತೆಗಳಿವೆ

ವೃತ್ತದ ಅಂದ ಹೆಚ್ಚಬೇಕು ..!

ಉಮೇಶ ಕತ್ತಿ ಸಚಿವರಾಗಿದ್ದ ಸಂದರ್ಭದಲ್ಲಿ ಬೆಳಗಾವಿ ನಗರದ ಎಲ್ಲ‌ ವೃತ್ತಗಳ ಅಂದವನ್ನು ಹೆಚ್ಚಳ ಮಾಡಬೇಕು ಎನ್ನುವ ನಿರ್ಧಾರ ಮಾಡಲಾಯಿತು. ಹೀಗಾಗಿ ಚನ್ನಮ್ಮ ವೃತ್ತದ ಅಂದ ಹೆಚ್ಚಿಸುವ ಕೆಲಸವನ್ನು ಉಮೇಶ ಕತ್ತಿ ಒಡೆತನದ ವಿಶ್ವರಾಜ ಶುಗರ್ಸದವರು ತೆಗೆದುಕೊಂಡರು.
ಅವರು ಅಲ್ಲಿ ಫೌಂಟೇನ್ ಸಹ ನಿರ್ಮಿಸಿ ಅಲ್ಲಿ ವಿಶ್ವರಾಜ ಶುಗರ್ಸ ಹೆಸರು ಹಾಕಿದ್ದರು.
ಈ ಬಗ್ಗೆ ಪಾಲಿಕೆಯಲ್ಲಿ ಗೊತ್ತುವಳಿ ಸಹ ಪಾಸಾಗಿತ್ತು.
ಗಮನಿಸಬೇಕಾದ ಮತ್ತೊಂದು ಸಂಗತಿ ಏನೆಂದರೆ, ಉಮೇಶ ಕತ್ತಿ ಜಿಲ್ಲಾ ಮಂತ್ರಿ ಆಗಿದ್ದಾಗಲೇ ಬೆಳಗಾವಿಯಲ್ಲಿ ವಿಶ್ವ ಕನ್ನಡ ಸಮ್ಮೇಳನ ಕೂಡ ನಡೆಯಿತು. ಹೀಗಾಗಿ ಅದಕ್ಕೆಲ್ಲ ಬೆಳಗಾವಿ ವೃತ್ತಗಳ ಅಂದ ಮೆರಗು ತಂದಿತು ಎನ್ನುವುದರಲ್ಲಿ ಅನುಮಾನವೇ ಇಲ್ಲ.

ಈಗೇನಾಗಿದೆ ಗೊತ್ತಾ ?

ಉಮೇಶ ಕತ್ತಿ‌ ನಿಧನರಾಗಿ ಇದೇ ಬರುವ ಸೆಪ್ಟೆಂಬರ್ 6 ಕ್ಕೆ ಒಂದು ವರ್ಷ ಆಗುತ್ತದೆ. ಅಂತಹುದರಲ್ಲಿ ಅವದ ವಿಶ್ವರಾಜ ಶುಗರ್ಸ ಹೆಸರಿನ ಫಲಕ ತೆಗೆದು ಹಾಕಿ ಹೋಲ್ಡಿಂಗನ್ನು ಕೇವಲ ಆಯ್ದ ಕಾಂಗ್ರೆಸ್ ಗೆ ಸಿಮೀತ‌ ಮಾಡಿದ್ದು ಈಗ ಚರ್ಚೆಗೆ ಕಾರಣವಾಗಿದೆ.
ಅದನ್ನು ಪಾಲಿಕೆವತಿಯಿಂದ ಹಾಕಿದ್ದರೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ, ಅಭಯ ಪಾಟೀಲ, ಚನ್ನರಾಜ ಹಟ್ಟಿಹೊಳಿ ಜೊತೆಗೆ ದಕ್ಷಿಣ ಕ್ಷೇತ್ರದ ಶಾಸಕ ಅಭಯ ಪಾಟೀಲರ ಪೊಟೊ ಇರಬೇಕಿತ್ತು. ಇದೆಲ್ಲದರ ಜೊತೆಗೆ ಮಾಜಿ ಶಾಸಕ ಫಿರೋಜ ಶೇಠ ಪೊಟೊ ಯಾಕೆ ಬಂತು ಎನ್ನುವುದು ಬೆಳಗಾವಿಗರ ಪ್ರಶ್ನೆಯಾಗಿದೆ. ಅದಕ್ಕೆ ಉತ್ತರಿಸೋರು ಯಾರು?

4 thoughts on “ಸತೀಶ್, ರಾಜು ಒಕೆ,, ಫಿರೋಜ್ ಯಾಕೆ?

Leave a Reply

Your email address will not be published. Required fields are marked *

error: Content is protected !!