ಅಂತರರಾಜ್ಯ ಕಳ್ಳರ ಬಂಧನ 23 ವಾಹನ ವಶಕ್ಕೆ
ಬೆಳಗಾವಿ.
ಜಿಲ್ಲೆಯ ವಿವಿಧ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮೋಟಾರ್ ಸೈಕಲ ಕಳ್ಳತನ ಮಾಡುತ್ತಿದ್ದ ಗ್ಯಾಂಗನ್ನು ಪೊಲೀಸರು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಕೊಲ್ಲಾಪುರದ ಕರ್ವೀರ ತಾಲುಕಿನ ಕಳಂಭ ಗ್ರಾಮದ ಸಂತೋಷ ರಾಮಚಂದ್ರ ನಿಶಾನೆ (30) ಮತ್ತು ಗೋಕಾಕ ಜಿಲ್ಲೆಯ ಕೆಳಗಿನಹಟ್ಟಿಯ ಭರಮಪ್ಪ ಯಲ್ಲಪ್ಪ ಕೊಪ್ಪದ (21) ಎಂಬುವರೇ ಬಂಧಿತ ಕಳ್ಳರು ಎಂದು ಪೊಲೀಸರು ತಿಳಿಸಿದ್ದಾರೆ,

ಬೆಳಗಾವಿ, ಗೋಕಾಕ, ಅಂಕಲಗಿ, ನಿಪ್ಪಾಣಿ, ಹುಕ್ಕೇರಿ, ಸಂಕೇಶ್ವರ ಸೇರಿದಂತೆ ಬೇರೆ ಬೇರೆ ಕಡೆಗೆ ಗ್ಯಾಂಗ್ ಕದ್ದ 8 ಲಕ್ಷ 25 ಸಾವಿರ ರೂ ಮೌಲ್ಯದ 23 ಮೋಟಾರು ವಾಹನಗಳನ್ನು ಪೊಲೀಸರು ಜಪ್ತಿ ಮಾಡಿಕೊಂಡಿದ್ದಾರೆ
ಮೋಟಾರು ವಾಹನಗಳ ಕಳ್ಳತನ ಪ್ರಕರಣಗಳು ಹೆಚ್ಚಾಗಿದ್ದರ ಬಗ್ಗೆ ಅಂಕಲಗಿ, ಗೋಕಾಕ ಶಹರ, ಹಾಗೂ ಗೋಕಾಕ ಗ್ರಾಮೀಣ ಪೊಲೀಸ ಠಾಣೆಗಳಲ್ಲಿ ಹಲವು ಪ್ರಕರಣಗಳು ದಾಖಲಾಗಿದ್ದವು..

ಅಲ್ಲದೇ ದಿನಾಂಕ: 23 ರಂದು ಕುಂದರಗಿ ಗ್ರಾಮದ ಶ್ರೀ ಲಕ್ಷ್ಮೀ ದೇವಸ್ಥಾನದ ಎದುರಿಗೆ ಇರುವ ಪಾಶ್ಚಾಪೂರ – ಅಂಕಲಗಿ ರಸ್ತೆಯ ಬದಿಗೆ ನಿಲ್ಲಿಸಿದ ಮೋಟಾರ್ ಸೈಕಲ್ ಕಳ್ಳತನವಾದ ಬಗ್ಗೆ ಅಂಕಲಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು,
ಈ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿದ್ದ ಎಸ್ಪಿ ಡಾ, ಸಂಜೀವ ಪಾಟೀಲರು, ಪ್ರಕರಣದ ಪತ್ತೆಗಾಗಿ ಗೋಕಾಕ ಸಿಪಿಐ ಗೋಪಾಲ ಆರ್. ರಾಠೋಡ ನೇತೃತ್ವದಲ್ಲಿ ತಂಡವನ್ನು ರಚಿಸಿದ್ದರು.
ಸಚಿವೆಯ ತವರು ಜಿಲ್ಲೆಯಲ್ಲಿ ಸಿಗದ ನ್ಯಾಯ

https://ebelagavi.com/index.php/2023/08/19/hi-8/
ಈ ತಂಡವು ಮಹಾರಾಷ್ಟ್ರದ ಕೊಲ್ಲಾಪೂರ, ಕರವೀರ, ಇಂಚಲಕರಂಜಿ, ಹಾಧಕಣಗಲಾ, ಹಾಗೂ ಕನರ್ಾಟಕದ ಬೆಳಗಾವಿ, ಗೋಕಾಕ, ಅಂಕಲಗಿ, ನಿಪ್ಪಾಣಿ, ಹುಕ್ಕೇರಿ, ಸಂಕೇಶ್ವರ, ಹಾಗೂ ವಿವಿದೆಡೆ ಕಳ್ಳತನದಲ್ಲಿ ನಿರತರಾಗಿದ್ದ ಇಬ್ಬರನ್ನು ಬಂಧಿಸಿದೆ, .
ಅಂತರರಾಜ್ಯ ಕಳ್ಳರನ್ನು ಬಂಧಿಸುವಲ್ಲಿ ಎಚ್.ಡಿ.ಯರಝವರ್ಿ, ಎಮ್.ಡಿ.ಘೋರಿ, ಕಿರಣ ಮೋಹಿತ , ಬಿ.ವಿ.ನೇರ್ಲಿ, ವಿಠಲ ನಾಯಕ, ಡಿ.ಜಿ. ಕೊಣ್ಣೂರ, ಎಸ್.ವಿ.ಕಸ್ತೂರಿ, ಎಮ್.ಬಿ.ತಳವಾರ, ಎಸ್.ಎಚ್.ದೇವರ, ಎಸ್.ಬಿ.ಚಿಪ್ಪಲಕಟ್ಟಿ, ಎಸ್.ಬಿ.ಯಲ್ಲಪ್ಪಗೌಡರ, ಪಿ.ಕೆ.ಹೆಬ್ಬಾಳ, ಎಮ್.ಎಮ್.ಹಾಲೊಳ್ಳಿ, ಎ.ಆರ್.ಮಾಳಗಿ ಯಶಸ್ವಿಯಾಗಿದ್ದಾರೆ,
One thought on “ಖಾಕಿ ಬಲೆಗೆ ಸಿಕ್ಕಿ ಬಿದ್ದ ಕಳ್ಳರು..!”