ಶಾಸಕರ ಗಮನಕ್ಕೆ ಬಾರದೆ ಶಿಫಾರಸ್ಸು ಪತ್ರಕ್ಕೆ ಸಮ್ಮತಿ ಕೊಟ್ಟವರು ಯಾರು?
ಆ ಸುದ್ದಿ ಕೇಳಿ ಗರಂ ಆದ ಮಾಜಿ ಶಾಸಕ.!
ನಂತರ ತಗ್ಲಾಕ್ಕೊಂಡ ಆ ಸಿಪಿಐ ಯಾರು?
ಬೆಳಗಾವಿ.
ಇಂತಹ ಪವಾಡಗಳು ಕೇವಲ ಗಡಿನಾಡ ಬೆಳಗಾವಿಯಲ್ಲಿ ಮಾತ್ರ ನಡೆಯಲು ಸಾಧ್ಯ
ಇನ್ನು ಇದು ಯಾವ ಇಲಾಖೆಯಲ್ಲಿ ನಡೆಯುತ್ತಿದೆ ಎನ್ನುವುದನ್ನು ಇಲ್ಲಿ ಬಿಡಿಸಿ ಹೇಳಬೇಕಾದ ಅವಶ್ಯಕತೆನೂ ಇಲ್ಲ. ಏಕೆಂದರೆ ಅದು ಪೊಲೀಸ ಇಲಾಖೆಯಲ್ಲಿ ಎನ್ನುವುದು ಬಹುತೇಕರ ಊಹೆ.ಅದು ಸತ್ಯ.
ಸಹಜವಾಗಿ ರಾಜ್ಯದಲ್ಲಿ ಸರ್ಕಾರ ಬದಲಾದಂತೆ ಅಧಿಕಾರಿಗಳ ವರ್ಗಾವಣೆಗಳು ಆಗುತ್ತವೆ.
ಅದರಲ್ಲಿ ದೊಡ್ಡದೇನೂ ಇಲ್ಲ.ಆಯಾ ಶಾಸಕರು ತಮಗೆ ಬೇಕಾದವರನ್ನು ತಮ್ನ ಕ್ಷೇತ್ರಕ್ಕೆ ಪತ್ರ ಕೊಟ್ಟು ವರ್ಗಾವಣೆ ಮಾಡಿಸಿಕೊಳ್ಳುತ್ತಾರೆ.ಅದಿಷ್ಟೇ ಆಗಿದ್ದರೆ ಅದು ಸುದ್ದಿನೇ ಅಲ್ಲ.ಆದರೆ ಅದಕ್ಕಿಂತ ಭಿನ್ನ ಆಗಿದ್ದರಿಂದಲೇ ಇದು ಈಗ ಪೊಲೀಸ್ ಇಲಾಖೆಯಲ್ಲಿ ಚರ್ಚೆಯ ವಸ್ತು ಆಗಿದೆ.
ಅಸಲಿಗೆ ಬೆಳಗಾವಿಯಲ್ಲಿ ಸಮರ್ಥವಾಗಿ ಕೆಲಸ ನಿರ್ವಹಿಸುತ್ತಿದ್ದ ಎಸಿಪಿ ಮಟ್ಟದ ಅಧಿಕಾರಿಯನ್ನು ಎತ್ತಂಗಡಿ ಮಾಡಬೇಕು ಎಂದು ಸಿಪಿಐ ಒಬ್ಬರು ಶಾಸಕರ ಆಪ್ತನ ಮೂಲಕ ಶಿಫಾರಸ್ಸು ಪತ್ರ ಮಾಡಿಸಲು ಹೋಗಿ ತಗ್ಲಾಕ್ಕೊಂಡಿದ್ದಾರೆ.
ಗಮನಿಸಬೇಕಾದ ಸಂಗತಿ ಎಂದರೆ ಆ ಎಸಿಪಿ ಎಲ್ಲರಿಗೂ ಮತ್ತು ಎಲ್ಲ ಶಾಸಕರಿಗೂ ಬೇಕಾದ ವ್ಯಕ್ತಿ.
ಆದರೆ ಇಲ್ಲಿ ಶಾಸಕ ರಾಜು ಶೇಠ ಗಮನಕ್ಕೆ ಬಾರದೆನೇ ಅವರ ಆಪ್ತ ಸಹಾಯಕರಿಗೆ ಹೇಳಿ ಎಸಿಪಿ ಅವರ ವರ್ಗಾವಣೆ ಶಿಫಾರಸ್ಸು ಪತ್ರ ಟೈಪಿಂಗಗೆ ಹೇಳಿದ್ದರು.
ಇಲ್ಲಿ ಆಪ್ತ ಸಹಾಯಕರಿಗೆ ಶಾಸಕರು ಸಮ್ಮತಿ ಕೊಟ್ಟಿದ್ದಾರೆಂದು ತಿಳಿಸಲಾಗಿತ್ತು.ಅವರ ಸೂಚನೆಯನ್ನು ನಂಬಿದ ಶಾಸಕರ ಆಪ್ತ ಸಹಾಯಕ ಪತ್ರ ರೆಡಿ ಮಾಡಲು ಕಚೇರಿಯಲ್ಲಿ ನೀಡಿದ್ದರು
ಗಮನಿಸಬೇಕಾದ ಸಂಗತಿ ಎಂದರೆ, ಈ ಪತ್ರದ ವಿಷಯ ಶಾಸಕರ ಹಿರಿಯ ಸಹೋದರ ಕಿವಿಗೆ ಬಿತ್ತು. ತಕ್ಷಣ ತಡಮಾಡದ ಅವರು ಗರಂ ಆಗಿ ನೇರವಾಗಿ ಶಾಸಕರಿಗೆ ಕರೆ ಮಾಡಿದರು. ಅತ್ತ ಶಾಸಕರು ಆ ರೀತಿ ಎಸಿಪಿ ವರ್ಗಾವಣೆ ಗೆ ನಾನು ಹೇಳಿಯೇ ಇಲ್ಲ ಎನ್ನುವ ಉತ್ತರ ಸಹ ಕೊಟ್ಟರು. ವಿಷಯ ಅಲ್ಲಿಗೆ ಮುಗಿಯಲಿಲ್ಲ. ಶಾಸಕರ ಪಿಎಗೂ ಕರೆ ಮಾಡಿ ವಿಚಾರಣೆ ಮಾಡಿದಾಗ ಇದು ಶಾಸಕರ ಗಮನಕ್ಕೆ ಬಾರದೇ ಸಿಪಿಐ ಮಾಡಿದ್ದು ಎನ್ನುವುದು ಗೊತ್ತಾಯಿತು. ಹೀಗಾಗಿ ಈಗ ಇಲಾಖೆಯಲ್ಲಿಯೇ ಆ ಸಿಪಿಐ ಯಾರು ಎನ್ನುವ ಚರ್ಚೆ ಜೋರಾಗಿ ನಡೆದಿದೆ