ಪಿಡಬ್ಲುಡಿ ಕಮಿಟಿಯಲ್ಲಿ ವ್ಯಾಪಕ ಚರ್ಚೆ
ಮೊದಲು ನೇಮಕ– ನಂತರ ಒಪ್ಪಿಗೆ
ಪಾಲಿಕೆಯಲ್ಲಿ ಬಗೆಹರಿಯದ ಪೌರ ಕಾರ್ಮಿಕರ ನೇಮಕ
ಬೆಳಗಾವಿ.
ಮಹಾನಗರ ಪಾಲಿಕೆಯಲ್ಲಿ ತೀವೃ ಚರ್ಚೆ ವ ಸ್ತುವಾಗಿರುವ 138 ಪೌರ ಕಾರ್ಮಿಕರ ನೇಮಕಾತಿ ವಿಷಯ ಇಂದಿಲ್ಲಿ ನಡೆದ ನಗರ ಯೋಜನೆ ಮತ್ತು ಸ್ಥಾಯಿ ಸಮಿತಿ ಕಮಿಟಿ ಸಭೆಯಲ್ಲಿ ಪ್ರತಿಧ್ವನಿಸಿತು.
138 ಜನ ಪೌರ ಕಾರ್ಮಿಕರಲ್ಲಿ 8 ಜನ ಮಹಾರಾಷ್ಟ್ರದವರು ಏಕೆ ಎಂಬುದರ ಬಗ್ಗೆಯೂ ಸಭೆಯಲ್ಲಿ ಗಂಭೀರ ಚರ್ಚೆ ಯಾಯಿತು,

ಈ ಬಗ್ಗೆ ಇ ಬೆಳಗಾವಿ ವರದಿಯನ್ನು ಪ್ರಕಟಿಸಿತ್ತು, ಅಷ್ಟೇ ಅಲ್ಲ ಈ ಬಗ್ಗೆ ಪಾಲಿಕೆ ಆಯುಕ್ತರು ತನಿಖೆಗೆ ಆದೇಶ ಮಾಡಿದ್ದರು,

ಒಂದು ಹಂತದಲ್ಲಿ ಪೌರ ಕಾರ್ಮಿಕರ ನೇಮಕಾತಿ ಬಗ್ಗೆ ಸ ಭೆಗೆ ತಪ್ಪು ಮಾಹಿತಿ ನೀಡಲು ಯತ್ನಿಸಿದ ಸಹಾಯಕ ಕಾರ್ಯಪಾಲಕ ಅಭಿಯಂತ ಹನುಮಂತ ಕಲಾದಗಿ ಅವರನ್ನು ಕಮಿಟಿ ಅಧ್ಯಕ್ಷೆ ವಾಣಿ ಜೋಶಿ ಸೇರಿದಂತೆ ಸದಸ್ಯರು ತರಾಟೆಗೆ ತೆಗೆದುಕೊಂಡರು.

ಆಗಸ್ಟ್ 16 ರಂದು ನಡೆದ ಸಾಮಾನ್ಯ ಸಭೆಯಲ್ಲಿ 138 ಕಾರ್ಯಕಾರ್ಮಿಕರ ನೇಮಕ ನಿರ್ಣಯ ಅಂಗೀಕರಿಸಿದ್ದರೆ, ಜುಲೈ 1ರಿಂದ ನೇಮಕ ಹೇಗೆ ಮಾಡಿಕೊಂಡಿದ್ದೀರಿ ಎಂದು ಕಮಿಟಿ ಅಧ್ಯಕ್ಷೆ ವಾಣಿ ಜೋಶಿ ಪ್ರಶ್ನಿಸಿದರು,
ಮಹಾ ದವರಿಗೆ ಕೆಲಸ- ವಿಚಾರಣೆಗೆ ಸೂಚನೆ

https://ebelagavi.com/index.php/2023/08/29/hey-5/
ಆದರೆ ಈ ಪ್ರಶ್ನೆಗೆ ಉತ್ತರಿಸಲು ತಡವರಿಸಿದಾಗ ಸದಸ್ಯರು ಅವರನ್ನು ತೀವೃವಾಗಿ ತರಾಟೆಗೆ ತೆಗದುಕೊಂಡರು, ಅಷ್ಟೇ ಅಲ್ಲ ಇದರಲ್ಲಿ ಎಂಟು ಜನ ಮಹಾರಾಷ್ಟ್ರದವರು ಎಂದು ಮಾಧ್ಯಮದಲ್ಲಿ ವರದಿಯಾಗಿದೆ, ಹಾಗಿದ್ದರೆ, ಬೆಳಗಾವಿ ಮಹಾನಗರ ಪಾಲಿಕೆಯಿಂದ ಅವರನ್ನು ಹೇಗೆ ನೇಮಿಸಲಾಯಿತು ಎಂದು ಪ್ರಶ್ನಿಸಿದರು,

ಈ ನೇಮಕಾತಿ ಪ್ರಕ್ರಿಯೆ ಕುರಿತು ಆಯುಕ್ತರು ತನಿಖೆಗೆ ಆದೇಶಿಸಿದ್ದಾರೆ. ಎಲ್ಲ 138 ಕಾರ್ಮಿಕರ ಮಾಹಿತಿ ಸಂಗ್ರಹಿಸಿ ಆಯುಕ್ತರಿಗೆ ಸಲ್ಲಿಸಲಾಗುವುದು ಎಂದು ಅಧೀಕ್ಷಕ ಅಭಿಯಂತರ ಲಕ್ಷ್ಮೀ ನಿಪ್ಪಾಣಿಕರ ಸ್ಪಷ್ಟಪಡಿಸಿದರು,
ಸಂತೋಷ ಪೇಡ್ನೇಕರ, ಮಂಗೇಶ ಪವಾರ, ಆರ್.,ಎಂ. ಚವ್ಹಾಣ, ರೂಪಾ ಚಿಕ್ಕಲದಿನ್ನಿ, ಜರೀನಾ ಪತ್ತೇಖಾನ್ ಆಡಳಿತ ಪಕ್ಷದ ನಾಯಕ ರಾಜಶೇಖರ ಡೋಣಿ, ವಿರೋಧ ಪಕ್ಷದ ನಾಯಕ ಮುಜಮಿಲ್ ಡೋಣಿ ಉಪಸ್ಥಿತರಿದ್ದರು.