
ಆ ಕೊಲೆ ಹಿಂದಿತ್ತು ಹೆಣ್ಣಿನ ಹೆಜ್ಜೆ…!
ಗಾಡಿವಡ್ಡರ ಕೊಲೆ ಇಬ್ಬರ ಬಂಧನ. ಪ್ರಕರಣ ಬೇಧಿಸಿದ ಅಧಿಕಾರಿಗಳಿಗೆ ಬಹುಮಾನ ಬೆಳಗಾವಿ: ಅಡ್ಡದಾರಿ ಹಿಡಿದ ಯುವಕನೊಬ್ಬನಿಗೆ ಹೊಡೆದು ಬುದ್ಧಿಮಾತು ಹೇಳಿದ್ದೇ ಶಿವಬಸವನಗರದಲ್ಲಿ ಎರಡು ದಿನಗಳ ಹಿಂದೆ ನಾಗರಾಜ ಗಾಡಿವಡ್ಡರ ಕೊಲೆಗೆ ಕಾರಣವಾಯಿತು ಎಂಬ ಅಚ್ಚರಿಯ ಅಂಶವೊಂದು ತನಿಖೆಯ ವೇಳೆ ಬಯಲಾಗಿದೆ.ಈ ಪ್ರಕರಣದ ಪ್ರಧಾನ ರೂವಾರಿ ಮೂರನೇ ಆರೋಪಿ ನಿಪ್ಪಾಣಿಯ ಯುವಕ ರಾಮನಗರದಲ್ಲಿನ ವಿವಾಹಿತ ಮಹಿಳೆಯೊಬ್ಬಳ ಜತೆ ಅನೈತಿಕ ಸಂಬಂಧ ಹೊಂದಿದ್ದು, ಆಕೆಯನ್ನು ಸೇರಲು ವಾರಕ್ಕೊಮ್ಮೆ ನಿಪ್ಪಾಣಿಯಿಂದ ಇಲ್ಲಿಗೆ ಬರುತ್ತಿದ್ದ ಎಂದು ಹೇಳಲಾಗುತ್ತಿದೆ. ಈ ಯುವಕನ ಚಲನವಲನಗಳನ್ನು ಗಮನಿಸಿದ…