Headlines

ಹುಷಾರು..ಇವರು ನಿಮ್ಮಠಾಣೆಗೂ ಬರ್ತಾರೆ!

ಎರಡು ಠಾಣೆಗಳಿಗೆ RULE 7 ಜಾರಿ

ಪೊಲೀಸ್ ಆಯುಕ್ತರ ದಿಟ್ಟ ಕ್ರಮ.

ಮಾರುವೇಷದಲ್ಲಿ ಠಾಣೆಗೆ ಕಳಿಸಿ ಚಳಿ ಬಿಡಿಸಿದರು.

ದೂರು ದಾಖಲಿಗೆ ವಿಳಂಬ ಮಾಡಿದರೆ ಕ್ರಮ.

ಬೆಳಗಾವಿ‌ .

ಇದೊಂಥರಾ ವಿಚಿತ್ರ ಪ್ರಯೋಗ. ಆದರೆ ವಾಸ್ತವತೆ ಚೆಕ್ ಮಾಡಬೇಕಾದರೆ ಇದೊಂದು ಉತ್ತಮ ಹೆಜ್ಜೆ ಎಂದು ಹೇಳಬಹುದು.

ಎಲ್ಲಕ್ಕಿಂತ ಮುಖ್ಯವಾಗಿ ಇ ಬೆಳಗಾವಿ ಡಾಟ್ ಕಾಮ್‌ ಇಂತಹ ಹಲವು ಸತ್ಯ ಸಂಗತಿಗಳನ್ನು ಜನರ ‌ಮುಂದಿಡುವ ಕೆಲಸ ಮಾಡುತ್ತಲೇ ಇದೆ.‌

ಅದು ಕೆಲವರಿಗೆ ಸರಿ‌ ಅನಿಸಬಹುದು, ಅಥವಾ ಅನಿಸದೇ ಇರಬಹುದು.

ಕೆಲವೊಮ್ಮೆ ಸತ್ಯ‌ಸಂಗತಿಗಳನ್ನು ತೆರೆದಿಟ್ಟಾಗ ‌ಅದನ್ನು‌ ಅರಗಿಸಿಕೊಳ್ಳದವರು unknown ನಂಬರದಿಂದ ಮತ್ತು ಬೇರೆ ಬೇರೆ ಹೆಸರಿನಿಂದ ಧಮಕಿ ಹಾಕುವುದು, ಹಾಕಿಸುವುದು ಹೊಸದೇನಲ್ಲ‌.

ಆದರೆ ನಾವು ಅಂತಹ ಗೊಡ್ಡು ಬೆದರಿಕೆಗಳಿಗೆ ಹೆದರುವ ಮಾತೇ ಇಲ್ಲ. ನಾವೇನು ಜೂಜು ಅಡ್ಡೆ ನಡೆಸಲ್ಲ. ಅಕ್ರಮವಾಗಿ ಪಡಿತರ ಅಕ್ಕಿ ಸಾಗಾಟ ಕೂಡ ಮಾಡಲ್ಲ. ಸುದ್ದಿಯೇ ನಮ್ಮ ಬಂಡವಾಳ. ಅದೇ ನಮ್ಮ‌ಶಕ್ತಿ.

ಅದೇ ಕಾರಣದಿಂದ ನಾವು ಯಾವುದೇ ಅಕ್ರಮ‌ ದಂಧೆಕೋರರ ಮಾತುಗಳಿಗೆ ಕವಡೆ ಕಾಸಿನ ಕಿಮ್ಮತ್ತು ಕೊಡಲ್ಲ. ಆದರೆ ಬೆದರಿಕೆ ಹಾಕಿದವರ ಸಂಪೂರ್ಣ ಜಾತಕ ‘ಇ ಬೆಳಗಾವಿ’ ಬಳಿ ಇರುತ್ತದೆ ಎನ್ನುವುದನ್ನು‌ ಯಾರೂ ಮರೆಯಬಾರದು.

ಅದನ್ನು ಬಿಡಿ.ಪತ್ರಿಕಾ ರಂಗದ ಇತಿಹಾಸದಲ್ಲಿ ಇಂತಹ ಅನೇಕ ಗೊಡ್ಡು ಬೆದರಿಕೆಗಳನ್ನು ಸಮರ್ಥವಾಗಿ ಎದುರಿಸುತ್ತ ಬೆಳೆಯುತ್ತಿದ್ದೇವೆ.. ಮೇಲಾಗಿ ಬರೀ ಅಂತೆ ಕಂತೆಗಳ‌ಮೇಲೆ ‘ಇ ಬೆಳಗಾವಿ’ ಸುದ್ದಿ ಪ್ರಕಟಿಸಲ್ಲ. ಒಮ್ಮೆ ಸುದ್ದಿ ಬೆನ್ನಟ್ಟಿದರೆ ಹಿಂದೆ ಸರಿಯೋ ಮಾತೇ ಇಲ್ಲ. ಯಾವಾಗಲೂ ಬೆಳಗಾವಿಗರ ಪರ ನಿಲ್ಲುವುದು ನಮ್ಮ ಉದ್ದೇಶ

ಉತ್ತಮ ಕೆಲಸ

ಈಗ ನಾವು ಮುಖ್ಯವಾಗಿ ಹೇಳಲು ಹೊರಟಿರುವುದು ಬೆಳಗಾವಿಯಲ್ಲಿ ಜನಸ್ನೇಹಿ ಪೊಲೀಸ್ ವ್ಯವಸ್ಥೆ ಯಾವ ರೀತಿ ಇದೆ ಎನ್ನುವುದರ ಬಗ್ಗೆ .

ಇಲ್ಲಿ ದೂರುದಾರರು ನ್ಯಾಯ ಕೋರಿ ಠಾಣೆ ಮೆಟ್ಟಿಲು ಹತ್ತಿದಾಗ ಎಷ್ಟು ಕಷ್ಟ ಪಡಬೇಕಾಗುತ್ತದೆ ಎನ್ನುವುದು ಅನುಭವಿಸಿದವರಿಗೇ ಗೊತ್ತು.

ಪೊಲೀಸ್ ಮಹಾನಿರ್ದೇಶಕರು ತಮ್ಮ‌ ಇಲಾಖೆಯನ್ನು ಇನ್ನಷ್ಟು ಸುಧಾರಿಸುವ ನಿಟ್ಟಿನಲ್ಲಿ ಕೆಲವೊಂದಿಷ್ಟು ಕ್ರಮವನ್ನು ತೆಗೆದುಕೊಂಡಿದ್ದಾರೆ. ಅದರಲ್ಲಿ ಇಲಾಖೆಯಿಂದಲೇ ಕೆಲವರನ್ಬು ದೂರು ಕೊಡುವ ನೆಪದಲ್ಲಿ ಠಾಣೆಗೆ ಕಳಿಸುವುದು.

ಬೆಳಗಾವಿಯ ಕೆಲವೊಂದು ಠಾಣೆಗಳಿಗೆ ಪೊಲೀಸ್ ಆಯುಕ್ತರು ಮತ್ತು ಡಿಸಿಪಿಯವರು ಕೂಡಿಕೊಂಡು ಮಾರುವೇಷದಲ್ಲಿ ಕೆಲವರನ್ನು ದೂರು ಕೊಡುವ ನೆಪದಲ್ಲಿ ಕಳಿಸಿದ್ದರಂತೆ.‌ಅದರಲ್ಲಿ ಕೆಲ ಠಾಣೆಗಳಲ್ಲಿ ಉತ್ತಮ ಸ್ಪಂದನೆ ಸಿಕ್ಕರೆ ಇನ್ನೂ ಕೆಲವೆಡೆ ಸ್ಪಂದನೆ ಸಿಗಲಿಲ್ಲ.

ಬೆಳಗಾವಿಯ ಎಪಿಎಂಸಿ ಮತ್ತು ಸಂಚಾರ ಠಾಣೆಯಲ್ಲಿ ಉತ್ತಮವಾಗಿ ಸ್ಪಂದಿಸಿದರೆ, ಉದ್ಯಮಬಾಗ ಮತ್ತು ಖಡೇಬಜಾರ ಠಾಣೆಯಲ್ಲಿ ನೊಂದವರ‌ ನೋವನ್ನು ಕೇಳುವ ಕನಿಷ್ಟ ಸೌಜನ್ಯ ಕೂಡ ತೋರಲಿಲ್ಲ ಎಂದು ಹೇಳಲಾಗಿದೆ.

ಹೀಗಾಗಿ ಪೊಲೀಸ್ ಆಯುಕರು ಈ ಎರಡು ಠಾಣೆಗಳಿಗೆ RULE 7 ನೀಡಿದ್ದಾರೆ ಎಂದು ಹೇಳಲಾಗಿದೆ.

ಇಲ್ಲಿ ಮುಖ್ಯವಾಗಿ ಪೊಲೀಸ್ ಆಯುಕ್ತ ಸಿದ್ರಾಮಪ್ಪ ಅವರು ಖುದ್ದು ತಾವೇ ಬೆಳ್ಳಂ ಬೆಳಿಗ್ಗೆ ಈಗ ಚೆಕಿಂಗ್ ಹೊರಟಿದ್ದಾರೆ. ಈ ಸಂದರ್ಭದಲ್ಲಿ ಕರ್ತವ್ಯದಲ್ಲಿರದ ಸಿಬ್ಬಂದಿಗಳಿಗೆ ಮೈಚಳಿ ಬಿಡಿಸುವ ಕೆಲಸವನ್ನು ಅವರು ಮಾಡುತ್ತಿದ್ದಾರೆ.

ಭೇಷ ಅಬಕಾರಿ.ಲಾರಿಯಲ್ಲಿ ಸಾರಾಯಿ ಹೊಂಡ

https://ebelagavi.com/index.php/2023/09/02/hi-33/

ಹೀಗಾಗಿ ಬೆಳಗಾವಿಯಲ್ಲಿ‌ ರೂಲ್ ಸೆವೆನ್ ತೆಗೆದುಕೊಂಡವರ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಒಂದು ರೀತಿಯಲ್ಲಿ ಇದು ಕರ್ತವ್ಯ ಲೋಪ ಎಸಗುವ ಸಿಬ್ಬಂದಿಗಳಿಗೆ ಎಚ್ಚರಿಕೆ ಗಂಟೆ ಎಂದು ಹೇಳಬಹುದು

Leave a Reply

Your email address will not be published. Required fields are marked *

error: Content is protected !!