ಬೆಳಗಾವಿ. ಗಡಿನಾಡ ಬೆಳಗಾವಿ ಗಣೇಶೋತ್ಸವ ಸಂದರರ್ಭದಲ್ಲಿ ಯಾವುದೇ ರೀತಿಯ ತೊಂದರೆ ಆಗದಂತೆ ನೋಡಿಕೊಳ್ಳಬೇಕೆಂದು ಪಾಲಿಕೆಯ ಮೇಯರ್ ಶೋಭಾ ಸೋಮನ್ನಾಚೆ ಅಧಿಕಾರಿಗಳಿಗೆ ಸೂಚಿಸಿದರು.
ಪಾಲಿಕೆಯಲ್ಲಿ ಕಳೆದ ದಿನ ನಡೆದ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು.

ಗಣೇಶ ಉತ್ಸವ ಸಂದರ್ಭದಲ್ಲಿ ಪಾಲಿಕೆಯಿಂದ ತೆಗೆದುಕೊಳ್ಳಬೇಕಾದ ಕ್ರಮಗಳ ಕುರಿತು ಚರ್ಚೆ ನಡೆಸಿದರು.
ಸ್ವಚ್ಚತೆ ಸೇರಿದಂತೆ ಮೆರವಣಿಗೆ ಸಾಗುವ ಮಾರ್ಗದಲ್ಲಿ ಅಡ್ಡಲಾಗಿ ಬಂದಿರುವ. ಟೊಂಗೆ, ವಾಯರ್ ಗಳನ್ನು ತೆರವು ಮಾಡಬೇಕು ಎಂದರು.
ಅಷ್ಟೇ ಅಲ್ಲ ರಸ್ತೆ ಮಧ್ಯದಲ್ಲಿ ಬಿದ್ದಿರುವ ತೆಗ್ಗು ಗುಂಡಿಗಳನ್ನು ಮುಚ್ವುವ ಕೆಲಸವನ್ಬು ತ್ವರಿತವಾಗಿ ಮುಗಿಸಬೇಕು ಎಂದರು.
ಉಪಮೇಯರ್ ಶೋಭಾ ಸೋಮನ್ನಾಚೆ ಸೇರಿದಂತೆ ನಾಲ್ಕು ಸ್ಥಾಯಿ ಸಮಿತಿ ಅಧ್ಯಕ್ಷರು, ನಗರಸೇವಕರು ಹಾಜರಿದ್ದರು.
ಇದೇ ಸಙದರ್ಭದಲ್ಲಿ ಹೆಚ್ವಿನ ಜವಾಬ್ದಾರಿ ಪಡೆದ. ಪಾಲಿಕೆಯ ಅಧೀಕ್ಷಕಿ ಅಭಿಯಂತ ಲಕ್ಷ್ಮೀ ನಿಪ್ಪಾಣಿಕರ ಅವರನ್ಬು ಮೇಯರ್ ಸೇರಿದಂತೆ ನಗರಸೇವಕಿ ಸಾರಿಕಾ ಪಾಟೀಲ ಮತ್ತಿತರರು ಅಭಿನಂದಿಸಿದರು