Headlines

2ಎ ಮೀಸಲಾತಿಗೆ ಮತ್ತೇ ಹೋರಾಟ

ಬೆಳಗಾವಿ.

ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡುವಂತೆ ಆಗ್ರಹಿಸಿ ಸಾಂಕೇತಿಕ ಇಷ್ಟಲಿಂಗ ಪೂಜೆ ಮಾಡುವ ಮೂಲಕ ಮತ್ತೆ ಹೋರಾಟ ಆರಂಭಿಸುತ್ತೇವೆ ಎಂದು ಕೂಡಲಸಂಗಮದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು.

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಿಕ್ಷಣ ಉದ್ಯೋಗ ಕ್ಷೇತ್ರದಲ್ಲಿ ಬಡ್ತಿ ಪಡೆಯಲು ಕಳೆದ 3 ವರ್ಷಗಳಿಂದ 2 ಮೀಸಲಾತಿ ಹೋರಾಟ ಮಾಡುತ್ತಾ ಬರುತ್ತೇದ್ದೇವೆ .ಹಿಂದಿನ ಸರ್ಕಾರ 2 ಮೀಸಲಾತಿ ಬದಲಾಗಿ 2 ಡಿ ಮೀಸಲಾತಿ ನೀಡಿತ್ತು

ಕಾಂಗ್ರೆಸ್ ಸರ್ಕಾರ ಬಂದ ತಕ್ಷಣ ನಮ್ಮ ಸಮುದಾಯದ ನಾಯಕರು ,ಶಾಸಕರು ಎಲ್ಲರೂ ಸಿ.ಎಂ ಸಿದ್ದರಾಮಯ್ಯಗೆ ಮನವಿ ಸಲ್ಲಿಸಿ ಬಂದಿದ್ದೇವು. ,ಸಿದ್ದರಾಮಯ್ಯನವರು ನಮಗೆ ಬಜೆಟ್ ನಂತರ ಮಾತುನಾಡುತ್ತೇನೆ ಎಂದು ಹೇಳಿದ್ದರು.

ಆದರೆ ಬಜೆಟ್ ಮುಗಿದು 2 ತಿಂಗಳು ಆದ್ರೂ ಸಿಎಂ ಸಿದ್ದರಾಮಯ್ಯ ಕಡೇಯಿಂದ ಯಾವದೇ ಪ್ರತಿಕ್ರಿಯೆ ಬಂದಿಲ್ಲ ,ಸರ್ಕಾರದ ಗಮನ ಸೆಳೆಯಲು ಸೆಪ್ಟಂಬರ್ .10 ರಂದು ನಿಪ್ಪಾಣಿ ಯಿಂದ ಇಷ್ಟಲಿಂಗ ಪೂಜೆ ಮೂಲಕ ಹೋರಾಟ ಆರಂಭಿಸುತ್ತೇವೆ ಎಂದು ಹೇಳಿದರು.

ನಿಪ್ಪಾಣಿ ಹೋರಾಟ ಆರಂಭವಾಗಿ ಜಮಖಂಡಿ ,ಚಡಚಣ ಹೀಗೆ ರಾಜ್ಯ ವ್ಯಾಪ್ತಿ ಹೋರಾಟ ಮಾಡುತ್ತೇವೆ , ತಾಲೂಕಿಗಳಲ್ಲಿ ಮೀಸಲಾತಿ ಜಾಗೃತಿ ಮೂಡಿಸಿ ಜಿಲ್ಲೆಗಳಲ್ಲಿ ಇಷ್ಟಲಿಂಗ ಪೂಜೆ ಮಾಡುತ್ತೇವೆ ಎಂದರು.


ಈಗಾಗಲೇ ನಿಪ್ಪಾಣಿ ಜನತೆಯಲ್ಲಿ ಜಾಗೃತಿ ಮೂಡಿಸಲಾಗಿದೆ ಅಲ್ಲಿ ಬೆಳ್ಳಗೆ 9.00 ಗಂಟೆಗೆ ಶಿವಾಜಿ ,ಚೆನ್ನಮ್ಮ .ಬಸವಣ್ಣ ಮೂರ್ತಿಗೆ ಮಾರ್ಲಾಪಣೆ ಮಾಡಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಕುಳಿತುಕೊಂಡ ಸಾಮೂಹಿಕ ಇಷ್ಟಲಿಂಗ ಪೂಜೆ ಮಾಡುತ್ತೇವೆ ಎಂದರು.,.

ಈ ಸಂದರ್ಭದಲ್ಲಿ ಅರ್ ಕೆ ಪಾಟೀಲ ರಾಜಶೇಖರ್ ಪಾಟೀಲ ಸೇರಿದಂತೆ ಪಂಚಮಸಾಲಿ ಮುಖಂಡರು ಸುದ್ದಿಗೋಷ್ಠಿಯಲ್ಲಿ ಭಾಗಿಯಾಗಿದ್ದರು

Leave a Reply

Your email address will not be published. Required fields are marked *

error: Content is protected !!