ʻವಡೋದರದ ಭಾರತೀಯ ರೈಲ್ವೆ ಗತಿ ಶಕ್ತಿ ವಿಶ್ವವಿದ್ಯಾಲಯ & ಏರ್‌ಬಸ್ ಸಂಸ್ಥೆ ಏರೋಸ್ಪೇಸ್ ಬೋಧನೆ ಮತ್ತು ಸಂಶೋಧನೆಗಾಗಿ ಒಡಂಬಡಿಕೆ ಒಪ್ಪಂದಕ್ಕೆಸಹಿʼ
• ʻಈ ಒಡಂಬಡಿಕೆ ಒಪ್ಪಂದದಿಂದ ವಿದ್ಯಾರ್ಥಿಗಳ ಉದ್ಯಮಕ್ಕೆ ಸಿದ್ಧರಾಗಲು ನೆರವಾಗಲಿದೆʼ – ರೈಲ್ವೆ ಸಚಿವರಾದ ಅಶ್ವಿನಿ ವೈಷ್ಣವ್
• 15,000 ವಿದ್ಯಾರ್ಥಿಗಳಿಗೆ ಏರ್‌ಬಸ್ ಸಂಸ್ಥೆಯಲ್ಲಿ ಉದ್ಯೋಗಾವಕಾಶ ದೊರಕಲಿವೆ
• “ಈ ಗತಿ ಶಕ್ತಿ ವಿಶ್ವವಿದ್ಯಾಲಯು ಸಾರಿಗೆ ಮತ್ತು ಲಾಜಿಸ್ಟಿಕ್ಸ್ ಕ್ಷೇತ್ರಗಳ ಮೇಲೆ ಹೆಚ್ಚು ಗಮನಹರಿಸಲಿದೆ. ಅವುಗಳಲ್ಲಿ ರೈಲ್ವೆ, ಹಡಗು, ಬಂದರು, ಹೆದ್ದಾರಿ, ರಸ್ತೆಗಳು, ಜಲಮಾರ್ಗ ಮತ್ತು ವಾಯುಯಾನ ಸೇರಿದಂತೆ ವಿವಿಧ ಕ್ಷೇತ್ರಗಳಿಗೆ ಪೂರೈಸುವ ಗುರಿಗಳನ್ನು ಹಾಕಿಕೊಂಡ ಮೊದಲ ವಿಶ್ವವಿದ್ಯಾಲಯ ಆಗಿದೆ.
• ಈ ಒಡಂಬಡಿಕೆ ಒಪ್ಪಂದದಿಂದ ಕೈಗಾರಿಕೆ ಮತ್ತು ಅಕಾಡೆಮಿಗಳಿಗೆ ಹೊಸ ಶಿಕ್ಷಣ ನೀತಿಯನ್ನು ಮತ್ತಷ್ಟು ಬಲಪಡಿಸಲಿದೆ
ವಡೋದರ.
ಭಾರತೀಯ ರೈಲ್ವೆ ಗತಿ ಶಕ್ತಿ ವಿಶ್ವವಿದ್ಯಾಲಯ ಮತ್ತು ಏರ್‌ಬಸ್ ಸಂಸ್ಥೆ ಸಹಯೋಗದೊಂದಿಗೆ ಭಾರತೀಯ ವಾಯುಯಾನ ಕ್ಷೇತ್ರವನ್ನು ಮತ್ತಷ್ಟು ಬಲಪಡಿಸಲು ಪ್ರವೇಶಿಸಲಿದೆ. ಭಾರತ ಮತ್ತು ದಕ್ಷಿಣ ಏಷ್ಯಾ ಏರ್‌ಬಸ್ ಸಂಸ್ಥೆಯ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಶ್ರೀ ರೆಮಿ ಮೈಲಾರ್ಡ್ ಮತ್ತು ಶಕ್ತಿ ವಿಶ್ವವಿದ್ಯಾಲಯದ ಉಪಕುಲಪತಿ ಪ್ರೊ. ಮನೋಜ್ ಚೌಧರಿ ನಡುವೆ ನವ ದೆಹಲಿಯ ರೈಲ್ ಭವನದಲ್ಲಿ ಗುರುವಾರ ಒಂದು ಒಡಂಬಡಿಕೆ ಒಪ್ಪಂದಕ್ಕೆ ಸಹಿ ಹಾಕಲಾಯಿತು. ಗತಿ ಶಕ್ತಿ ವಿಶ್ವವಿದ್ಯಾಲಯದ ಮೊದಲ ಕುಲಪತಿ ರೈಲ್ವೆ, ಸಂಪರ್ಕ, ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವ ಅಶ್ವಿನಿ ವೈಷ್ಣವ್ ಅವರ ನೇತೃತ್ವದಲ್ಲಿ ಈ ಒಡಂಬಡಿಕೆ ಪತ್ರಕ್ಕೆ ಸಹಿ ಹಾಕಲಾಯಿತು.
ಈ ಸಂದರ್ಭದಲ್ಲಿ ರೈಲ್ವೆ ಮಂಡಳಿಯ ಅಧ್ಯಕ್ಷರು ಮತ್ತು ಸಿಇಒ ಜಯವರ್ಮ ಸಿನ್ಹಾ ಮತ್ತು ರೈಲ್ವೆ ಮಂಡಳಿಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ಏರ್‌ಬಸ್ ಸಂಸ್ಥೆ ಮತ್ತು ಟಾಟಾ ಇತ್ತೀಚೆಗೆ ವಡೋದರದಲ್ಲಿ (ಗುಜರಾತ್) ಭಾರತದಲ್ಲಿ C295 ವಿಮಾನ ಸೌಲಭ್ಯವನ್ನು ವಿನ್ಯಾಸ, ಆವಿಷ್ಕರ, ತಯಾರಿ ಮತ್ತು ಅಭಿವೃದ್ಧಿಪಡಿಸಲು ಮುಂದಾಗಿದ್ವು. ಏರ್‌ಬಸ್ ಸಂಸ್ಥೆ ವಿಶ್ವದ ಅತಿದೊಡ್ಡ ವಾಣಿಜ್ಯ ವಿಮಾನ ತಯಾರಕ ಮತ್ತು ಹೆಲಿಕಾಪ್ಟರ್‌ಗಳು, ರಕ್ಷಣಾ ಮತ್ತು ಬಾಹ್ಯಾಕಾಶ ಉಪಕರಣಗಳ ಪ್ರಮುಖ ಉತ್ಪಾದಕ ಸಂಸ್ಥೆ ಆಗಿದೆ. ಈ ಕಂಪನಿಯು ಭಾರತದೊಂದಿಗೆ ಉತ್ತಮ ಬೆಳವಣಿಗೆಯ ಸಂಬಂಧವನ್ನು ಹೊಂದಿದೆ. ಕಂಪನಿಯು ಭಾರತವನ್ನು ಜಾಗತಿಕ ವಾಯುಯಾನದ ಪ್ರಮುಖ ಚಾಲಕ ಮತ್ತು ಅನಿವಾರ್ಯ ಪ್ರತಿಭೆ ಮತ್ತು ಸಂಪನ್ಮೂಲ ಕೇಂದ್ರವಾಗಿ ಗುರುತಿಸುತ್ತದೆ ಮತ್ತು ದೇಶದಲ್ಲಿ ಸಂಪೂರ್ಣ ಸಮಗ್ರ ಏರೋಸ್ಪೇಸ್ ಪರಿಸರ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲು ಅಗತ್ಯವಿರುವ ಎಲ್ಲಾ ಬಿಲ್ಡಿಂಗ್ ಬ್ಲಾಕ್‌ಗಳನ್ನು ಪಕ್ವಗೊಳಿಸಲು ಬದ್ಧವಾಗಿದೆ. ಮೇಕ್ ಇನ್ ಇಂಡಿಯಾ ಭಾರತದಲ್ಲಿ ಏರ್‌ಬಸ್‌ನ ವ್ಯವಹಾರ ಕಾರ್ಯತಂತ್ರದ ಹೃದಯಭಾಗದಲ್ಲಿದೆ ಮತ್ತು ಕಂಪನಿಯು ತನ್ನ ಜಾಗತಿಕ ಉತ್ಪನ್ನಗಳಿಗೆ ಭಾರತದ ಕೊಡುಗೆಯನ್ನು ಸ್ಥಿರವಾಗಿ ಹೆಚ್ಚಿಸಲಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಅಶ್ವಿನಿ ವೈಷ್ಣವ್, “ಗತಿ ಶಕ್ತಿ ವಿಶ್ವವಿದ್ಯಾಲಯವು ಉದ್ಯಮ-ಶೈಕ್ಷಣಿಕ ಪಾಲುದಾರಿಕೆಗಳ ಮೇಲೆ ಹೆಚ್ಚು ಕೇಂದ್ರೀಕರಿಸಲಿದೆ. ಇದರ ಎಲ್ಲಾ ಕೋರ್ಸ್‌ಗಳನ್ನು ಉದ್ಯಮದ ಸಹಯೋಗದಲ್ಲಿ ವಿನ್ಯಾಸಗೊಳಿಸಲಾಗುವುದು. ಈ ವಿಶ್ವವಿದ್ಯಾಲಯದಲ್ಲಿ ಓದುವ ವಿದ್ಯಾರ್ಥಿಗಳು ಉದ್ಯಮಕ್ಕೆ ಸಿದ್ಧರಾಗುತ್ತಾರೆ. ಸಾರಿಗೆ ಮತ್ತು ಲಾಜಿಸ್ಟಿಕ್ಸ್ ಕ್ಷೇತ್ರಗಳಲ್ಲಿ ಉದ್ಯೋಗ ಸಿಗಲಿದೆ. ಏರ್‌ಬಸ್ ಸಂಸ್ಥೆನೊಂದಿಗೆ ಇಂದಿನ ಒಡಂಬಡಿಕೆಯ ಪ್ರಮುಖ ಉದ್ದೇಶದ ಗುರಿಯನ್ನು ಸಾಧಿಸುವಲ್ಲಿ ಮಹತ್ವದ ಹೆಜ್ಜೆಯಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ರೆಮಿ ಮೈಲಾರ್ಡ್, “ಭಾರತದಲ್ಲಿ ಏರೋಸ್ಪೇಸ್ ಪರಿಸರ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲು ಬದ್ಧವಾಗಿರುವ ಸಂಸ್ಥೆಯಾಗಿದ್ದು, ಬಂಡವಾಳ ಅಭಿವೃದ್ಧಿ ಹೂಡಿಕೆ ಮಾಡುವ ನಮ್ಮ ಗುರುತರ ಜವಾಬ್ದಾರಿ ನಮ್ಮದಾಗಿದೆ. ಗತಿ ಶಕ್ತಿ ವಿಶ್ವವಿದ್ಯಾಲಯ ದೊಂದಿಗಿನ ಪಾಲುದಾರಿಕೆಯು ದೇಶದಲ್ಲಿ ಅತ್ತ್ಯುತ್ತಮ ಉದ್ಯೋಗಿಗಳನ್ನು ಬೆಳಸಲು ನೆರವಾಗಲಿದೆ. ಇಂದು ವೇಗವಾಗಿ ಬೆಳೆಯುತ್ತಿರುವ ಏರೋಸ್ಪೇಸ್ ವಲಯಕ್ಕೆ ಸೇವೆ ಸಲ್ಲಿಸಲು ಭವಿಷ್ಯದಲ್ಲಿ ಸಿದ್ಧವಾಗಲಿದೆ ಎಂದು ಹೇಳಿದರು.
ಉದ್ಯಮ-ಶೈಕ್ಷಣಿಕ ಪಾಲುದಾರಿಕೆಯು ವಲಯ-ಸಂಬಂಧಿತ ಕೌಶಲ್ಯ ಕೋರ್ಸ್‌ಗಳು ಮತ್ತು ನಿಯಮಿತ ವಿದ್ಯಾರ್ಥಿಗಳು ಮತ್ತು ಕೆಲಸ ಮಾಡುವ ವೃತ್ತಿಪರರಿಗೆ ಕಾರ್ಯಕ್ರಮಗಳ ಸಹ-ಅಭಿವೃದ್ಧಿ ಮತ್ತು ಸಹ-ವಿತರಣೆಯನ್ನು ಸಕ್ರಿಯಗೊಳಿಸುತ್ತದೆ. ಅಧ್ಯಾಪಕರಿಗೆ ಜಂಟಿ ಸಂಶೋಧನೆ ಮತ್ತು ಉದ್ಯಮದ ಅನುಭವಗಳು ವಿದ್ಯಾರ್ಥಿಗಳಿಗೆ ಇಂಟರ್ನ್‌ಶಿಪ್ ಮತ್ತು ಉದ್ಯೋಗಗಳು ಮತ್ತು ವಿದ್ಯಾರ್ಥಿವೇತನ ಕಾರ್ಯಕ್ರಮಗಳಾಗಿವೆ. ಇದರಿಂದ ಉದ್ಯಮದ ಅವಶ್ಯಕತೆಗಳಿಗೆ ಅನುಗುಣವಾಗಿ ವಿದ್ಯಾರ್ಥಿಗಳಿಗೆ ಉದ್ಯೋಗಾವಕಾಶಗಳನ್ನು ಒದಗಿಸಲಿದೆ. ಭಾರತೀಯ ಏರ್‌ಬಸ್ ಸಂಸ್ಥೆಯ ಕಾರ್ಯಾಚರಣೆಗಳಲ್ಲಿ 15,000 ವಿದ್ಯಾರ್ಥಿಗಳನ್ನು ಸೇರಿಸುವ ಸಾಧ್ಯತೆಯಿದೆ ಎಂದು ನಿರೀಕ್ಷಿಸಲಾಗಿದೆ ಎಂದು ತಿಳಿಸಿದರು
2022ರಲ್ಲಿ ಸಂಸತ್ತಿನ ಕಾಯಿದೆಯ ಮೂಲಕ ವಡೋದರಾದಲ್ಲಿ ಗತಿ ಶಕ್ತಿ ವಿಶ್ವವಿದ್ಯಾಲಯವನ್ನು ಸ್ಥಾಪಿಸಲಾಯಿತು. ಎಲ್ಲಾ ಸಾರಿಗೆ ಮತ್ತು ಲಾಜಿಸ್ಟಿಕ್ಸ್ ಕ್ಷೇತ್ರಗಳಲ್ಲಿರುವ ಮಾನವಶಕ್ತಿ ಮತ್ತು ಪ್ರತಿಭೆಗಳನ್ನು ಹೊರತರುವ ಉದ್ದೇಶವಾಗಿದೆ. ಸರ್ಕಾರ ಸರ್ಕಾರದ ರೈಲ್ವೆ ಸಚಿವಾಲಯದ ಅಡಿಯಲ್ಲಿ ಈ ಕೇಂದ್ರೀಯ ವಿಶ್ವವಿದ್ಯಾನಿಲಯ ಕಾರ್ಯನಿರ್ವಹಿಸಲಿದ್ದು ಇದರ ಮೊದಲ ಕುಲಪತಿಗಳಾಗಿ ರೈಲ್ವೆ, ಸಂವಹನ, ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್ ಕಾರ್ಯ ನಿರ್ವಹಿಸುತ್ತಿದ್ದಾರೆ.
ಸಾರಿಗೆ ಮತ್ತು ಲಾಜಿಸ್ಟಿಕ್ಸ್ ಕ್ಷೇತ್ರಗಳ ಮೇಲೆ ಪ್ರತ್ಯೇಕವಾಗಿ ಕೇಂದ್ರೀಕರಿಸಿದ ಮೊದಲನೆಯ ಗತಿ ಶ್ತಕಿ ವಿಶ್ವವಿದ್ಯಾಲಯವಾಗಿದೆ. ರೈಲ್ವೆ, ಹಡಗು, ಬಂದರುಗಳು, ಹೆದ್ದಾರಿಗಳು ಹಾಗೂ ರಾಷ್ಟ್ರೀಯ ಅಭಿವೃದ್ಧಿ ಯೋಜನೆಗಳ (ಪಿಎಂ ಗತಿ ಶಕ್ತಿ ರಾಷ್ಟ್ರೀಯ ಮಾಸ್ಟರ್ ಪ್ಲಾನ್ 2021 ಮತ್ತು ರಾಷ್ಟ್ರೀಯ ಲಾಜಿಸ್ಟಿಕ್ಸ್ ನೀತಿ 2022) ಆದೇಶವನ್ನು ಪೂರೈಸುವ ಗುರಿಯನ್ನು ಹೊಂದಿದೆ. ರಸ್ತೆಗಳು, ಜಲಮಾರ್ಗಗಳು ಮತ್ತು ವಾಯುಯಾನ ಸೇರಿದಂತೆ ಇನ್ನೀತರ ಬೇಡಿಕೆ-ಚಾಲಿತ ಪಠ್ಯಕ್ರಮವನ್ನು ಅನುಸರಿಸಿ ಮತ್ತು ಭಾರತೀಯ ರೈಲ್ವೆಯ ಎಲ್ಲಾ ಕೇಂದ್ರೀಕೃತ ತರಬೇತಿ ಸಂಸ್ಥೆಗಳ ಅತ್ಯಾಧುನಿಕ ಮೂಲಸೌಕರ್ಯವನ್ನು ನಿಯಂತ್ರಿಸುವ ಮೂಲಕ ತಂತ್ರಜ್ಞಾನ, ಅರ್ಥಶಾಸ್ತ್ರ, ನಿರ್ವಹಣೆ ಮತ್ತು ನೀತಿಯನ್ನು ಒಳಗೊಂಡಿರುವ ವೃತ್ತಿಪರರ ಸಂಪನ್ಮೂಲ ಸಂಗ್ರಹವನ್ನು ರಚಿಸುತ್ತದೆ. ಬಹುಶಿಸ್ತೀಯ ಬೋಧನೆ (ಸ್ನಾತಕ/ಸ್ನಾತಕೋತ್ತರ / ಡಾಕ್ಟರೇಟ್), ಕಾರ್ಯನಿರ್ವಾಹಕ ತರಬೇತಿ ಮತ್ತು ಸಂಶೋಧನೆ, ಸೇರಿದಂತೆ ಗತಿ ಶಕ್ತಿ ವಿಶ್ವವಿದ್ಯಾಲಯು ಭಾರತೀಯ ರೈಲ್ವೆಯಲ್ಲಿ ಸೇವೆ ಸಲ್ಲಿಸುತ್ತಿರುವ ಅಧಿಕಾರಿಗಳಿಗೆ ತರಬೇತಿ ಸಹ ಪಡೆದುಕೊಳ್ಳಲು ನೇರವಾಗಲಿದೆ.
ಉದ್ಯಮ-ಚಾಲಿತ ಮತ್ತು ನಾವೀನ್ಯತೆ-ನೇತೃತ್ವದ ವಿಶ್ವವಿದ್ಯಾಲಯವಾಗಿರುವುದರಿಂದ ಗತಿ ಶಕ್ತಿ ವಿಶ್ವವಿದ್ಯಾಲಯ ಈಗಾಗಲೇ ವಿಶ್ವದಾದ್ಯಂತದ ಪ್ರಮುಖ ಸಂಸ್ಥೆಗಳು ಮತ್ತು ಕೈಗಾರಿಕೆಗಳೊಂದಿಗೆ ಹಲವಾರು ಸಹಯೋಗಗಳನ್ನು ಹೊಂದಿದೆ.