ಬೆಳಗಾವಿ.ಮಹಾನಗರ ಅಷ್ಟೇ ಅಲ್ಲ ರಾಜ್ಯ ಮಟ್ಟದಲ್ಲಿ ದೊಡ್ಡ ಮಟ್ಟದ ಸುದ್ದಿ ಮಾಡಿರುವ 138 ಜನ ಪೌರ ಕಾರ್ಮಿಕರ ಬಗ್ಗೆ ಮುಂದಿನ ಸಭೆಯಲ್ಲಿ ಚರ್ಚೆ ಮಾಡುವುದಾಗಿ ಮೇಯರ್ ಶೋಭಾ ಸೋಮನ್ನಾಚೆ ಹೇಳಿದರು.
ಎಂಎನ್ ಎಸ್ ಸದಸ್ಯ ರವಿ ಸಾಳುಂಕೆ ಅವರು ಇಂದಿಲ್ಲಿ ನಡೆದ ಸಭೆಯಲ್ಲಿ ಈ ವಿಷಯ ಪ್ರಸ್ತಾಪ ಮಾಡಿದರು.

ಆದರೆ ಇದರ ಬಗ್ಗೆ ಮುಂದಿನ ಸಭೆಯಲ್ಲಿ ಚರ್ಚಿಸೋಣ ಎಂದು ಮೇಯರ್ ರೂಲಿಂಗ್ ನೀಡಿದರು.

ಕಳೆದ ಎರಡು ತಿಂಗಳಿಂದ ಸಂಬಳವಿಲ್ಲದೇ 138 ಜನ ಪಿಕೆಗಳು ಪರದಾಟ ನಡೆಸಿದ್ದಾರೆ. ಈ ಬಗ್ಗೆ ಪ್ರತಿಭಟನೆ ಕೂಡ ಮಾಡಿದ್ದಾರೆ . ಈಗಾಗಲೇ ಈ ಪಿಕೆಗಳ ನೇಮಕಾತಿ ನಿಯಮಾನುಸಾರ ಆಗಿಲ್ಲ ಎಂದು ಹೇಳಿದ ಆಯುಕ್ತ ಅಶೋಕ ದುಡಗುಂಟಿ ಅವರು ಸಂಬಳ ನೀಡಿಲ್ಲ. ಅದಕ್ಕೆ ಸಂಬಂಧಿಸಿದ ಕಡತಕ್ಕೆ ಸಹಿ ಕೂಡ ಮಾಡದೇ ವಾಪಸ್ಸು ಕಳಿಸಿದ್ದಾರೆ.

ಈಗ ಇದರೊಳಗೆ ನಡೆದಿದೆ ಎನ್ನಲಾದ ಮಾತುಗಳನ್ನು ಗಂಭೀರವಾಗಿ ಪರಿಗಣಿಸಿದ ಆಯುಕ್ತರು ವಿಚಾರಣೆಗೆ ಸರ್ಕಾರಕ್ಕೆ ಪತ್ರವನ್ನು ಬರೆದಿದ್ದಾರೆ.
ಇದೆಲ್ಲದರ ನಡುವೆ ಪಿಕೆ ಕೆಲಸ ನಿರ್ವಹಿಸಿ ಸಂಬಳಕ್ಕಾಗಿ ಪರದಾಟ ನಡೆಸಿದವರಲ್ಲಿ ಕೆಲವರು ಪ್ರತಿಭಟನೆ ಹಾದಿ ಹಿಡಿದಿದ್ದಾರೆ. ಬಹುತೇಕರು ಸ್ವಚ್ಚತೆ ಕೆಲಸವನ್ನು ಬಂದ್ ಮಾಡಿದ್ದಾರೆ.
ಕಸದ ವಾಹನ ಚಾಲಕರೂ ಸಹ ತಮ್ಮ ಕೆಲಸವನ್ನು ಸ್ಥಗಿತಗೊಳಿಸಿದ್ದಾರೆ. ಇನ್ನೂ ಕೆಲವರು ಜಿಲ್ಲಾ ಮಂತ್ರಿ ಗಳು ಬಂದಾಗ ಅವರ ಸಮ್ನುಖದಲ್ಲಿ ಪ್ರತಿಭಟನೆ ನಡೆಸುವ ಸಿದ್ಧತೆ ನಡೆಸಿದ್ದಾರೆ. ಮತ್ತು ಸಂಬಳ ಕೊಡಿಸುವಂತೆ ಕೋರಿ ಲೋಕಾಯುಕ್ತ ಕಚೇರಿ ಮೆಟ್ಟಿಲು ಹತ್ಯುವ ತಯಾರಿಯಲ್ಲಿದ್ದಾರೆಂದು ಗೊತ್ತಾಗಿದೆ.
ಇದೆಲ್ಲದರ ಮಧ್ಯೆ ಆಯುಕ್ತರು ಸ್ವಚ್ಚತಾ ಅಭಿಯಾನಕ್ಕೆ ಚಾಲನೆ ನೀಡಿದ್ದಾರೆ.
ಅತೀ ಶ್ಯಾಣ್ಯಾ ಆದವರು ಏನಾದರು?

https://ebelagavi.com/index.php/2023/09/16/k/