ಬೆಳಗಾವಿ. ವಿಘ್ನನಿವಾರಕ ಗಣೇಶನಿಗೆ ಸ್ವಾಗತ ಕೋರಲು ಬೆಳಗಾವಿ ರೆಡಿ ಆಗಿದೆ.

ಮಹಾನಗರ ಪಾಲಿಜೆಯು ಈ ಸಂದರ್ಭದಲ್ಲಿ ಯಾವುದೇ ರೀತಿಯ ಅಡ್ಡಿ ಆತಂಕಗಳು ಬರಬಾರದು ಎನ್ನುವ ನಿಟ್ಟಿನಲ್ಲಿ ಎಲ್ಲ ರೀತಿಯ ಮುಂಜಾಗ್ರತಾ ಕ್ರಮ ತೆಗೆದುಕೊಂಡಿದೆ.


ಇಂದು ಬೆಳಿಗ್ಗೆ ಗಣೇಶನ ವಿಸರ್ಜನೆ ಗೆ ಸಿದ್ಧವಾದ ಜಕ್ಕೇರಿ ಹೊಂಡಕ್ಕೆ ಮೇಯರ್ ಶೋಭಾ ಸೋಮನ್ನಾಚೆ ಚಾಲನೆ ನೀಡಿದರು.

ಉಪಮೇಯರ್ ರೇಷ್ನಾ ಪಾಟೀಲ, ನಗರ ಯೋಜನೆ ಮತ್ತು ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷೆ ವಾಣಿ ವಿಲಾಸ ಜೋಶಿ, ನಗರಸೇವಕರಾದ ಗಿರೀಶ ಧೋಂಗಡಿ, ರಾಜು ಭಾತಖಾಂಡೆ, ನಿತಿನ್ ಜಾಧವ, ಅಭಿಜಿತ್ ಜವಳಕರ, ಶ್ರೀಶೈಲ್ ಕಾಂಬಳೆ ಮುಂತಾದವರು ಈ ಸಂದರ್ಭದಲ್ಲಿ ಹಾಜರಿದ್ದರು.
