ಇವರು ಜಾತಿ ಮೀರಿ ಬೆಳೆದವರು. ಹಿಂದೂಗಳ ಜೊತೆಗೆ ಮುಸ್ಲೀಂರ ಹಬ್ಬವನ್ನೂ ಆಚರಿಸ್ತಾರೆ. ಟೆನ್ಶನ್ನೇ ಇಲ್ಲ.
ಬೆಳಗಾವಿ.
ಅದೊಂದು ಕಾಲವಿತ್ತು. ಗಣೇಶನ ಹಬ್ಬ ಬಂತೆಂದರೆ ಸಾಕು.ಗಡುನಾಡಿನ ಜನರಲ್ಲಿ ಒಂದು ರೀತಿಯ ಢವ ಢವ ಶುರು ಆಗ್ತಿತ್ತು.

ಆಗ ಪೊಲೀಸರಿಗೆ ರಾತ್ರಿ ಯಾವುದು, ಹಗಲು ಯಾವುದು ಗೊತ್ತೆ ಆಗುತ್ತಿರಲಿಲ್ಲ. ಅದರಲ್ಲೂ ವಿಸರ್ಜನೆ ಮೆರವಣಿಗೆ ಮುಗಿಯೋತನಕ ಉಸಿರು ಬಿಗಿ ಹಿಡಿದುಕೊಂಡೇ ಕೆಲಸ ಮಾಡುತ್ತಿದ್ದರು.

ಹೀಗಾಗಿ ಪೊಲೀಸರು ತಮ್ಮ ಕುಟುಂಬದೊಂದಿಗೆ ಹಬ್ಬ ಹರಿದಿನಗಳನ್ನು ಆಚರಿಸಿದ್ದೇ ಕಡಿಮೆ. ಆದರೆ ಈಗ ಕಾಲ ಬದಲಾಗಿದೆ.

ಯಾರಿಗೂ ತಂಟೆ ತಕರಾರು ಬೇಡವಾಗಿದೆ. ಅದೇ ಜಾರಣದಿಂದ ಪೊಲೀಸರು ತಮ್ಮ ಮನೆಯಲ್ಲಿ ಹಬ್ಬ ಆಚರಿಸಿ ಕೆಲಸಕ್ಕೆ ನಿರಾಳವಾಗಿ ಬರುವ ವಾತಾವರಣ ಸೃಷ್ಟಿಯಾಗಿದೆ.

ಗಮನಿಸಬೇಕಾದ ಸಂಗತಿ ಎಂದರೆ, ಬೆಳಗಾವಿಯಲ್ಲಿ ಮಾತ್ರ ಪೊಲೀಸರು ಸೌಗಾರ್ದತೆಯನ್ನು ಕಾಯ್ದುಕೊಂಡು ಹೊರಟಿದ್ದಾರೆ. ಹಿಂದೂಗಳ ಹಬ್ಬದ ಜೊತೆಗೆ ಮುಸ್ಲೀಂರ ಹಬ್ಬವನ್ನು ಠಾಣೆಯಲ್ಲಿ ಸೌಹಾರ್ದತೆಯಿಂದ ಆಚರಿಸುತ್ತಾರೆ. ಇಲ್ಲಿ ಜಾತಿ, ಭಾಷೆ ಸಂಬಂಧವೇ ಬರಲ್ಲ.

ಹೇಮಂತ ನಿಂವಾಳ್ಕರ ಎಸ್ಪಿ ಆಗಿದ್ದ ಸಂದರ್ಭ ಹಿಡಿದುಕೊಂಡು ಈಗಲೂ ಈ ರೀತಿಯ ಕಾರ್ಯಕ್ರಮಗಳು ನಡೆದುಕೊಂಡು ಬರುತ್ತಿವೆ ಎನ್ನಬಹುದು.

ಆಗ ಮಾರ್ಕೆಟ್ ಸಿಪಿಐ ಆಗಿದ್ದ ಎನ್.ವಿ ಬರಮನಿ ಸೇರಿದಂತೆ ಈ ನಿಟ್ಟಿನಲ್ಲಿ ಹೆಚ್ಚಿಗೆ ಕೆಲಸ ಮಾಡಿದರು.
ಇವರದ್ದು ಅಪರೂಪದ ವ್ಯಕ್ತಿತ್ವ..!
ಸಧ್ಯ ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ಸಿಪಿಐ ಆಗಿರುವ ಕಾಲಿಮಿರ್ಚಿ ಅವರದ್ದು ಅಪರೂಪದ ವ್ಯಕ್ತಿತ್ವ.

ಠಾಣೆಯಲ್ಲಿಯೇ ಅತ್ಯಂತ ಸಡಗರ ಸಂಭ್ರಮದಿಂದ ಅವರು ಗಣೇಶನ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಿದರು.
ಕುಂಕುಮ ಹಚ್ವಿಕೊಂಡು ಕೊರಳಲ್ಲಿ ಕೆಂಪು ಬಣ್ಣದ ರುಮಾಲು ಹಾಕಿಕೊಂಡು ತೆರೆದ ಜೀಪಿನಲ್ಲಿ ಸಂಬ್ರಮದಿಂದ ಗಣಪತಿಯನ್ನು ಠಾಣೆಯಲ್ಲಿ ಪ್ರತಿಷ್ಠಾಪಿಸಿದರು.
ಅಷ್ಟೇ ಅಲ್ಲ ಬೆಳಗಾವಿಯ ಪ್ರತಿಯೊಂದು ಠಾಣೆಯಲ್ಲಿ ಗಣೇಶ ಹಬ್ಬದ ಪ್ರಯುಕ್ತ ಮಹಾ ಪ್ರಸಾದವನ್ಬು ಏರ್ಪಾಡು ಮಾಡಲಾಗುತ್ತದೆ.
ಹೀಗಾಗಿ ಬೆಳಗಾವಿ ಪೊಲೀಸರೆಂದರೆ ಎಲ್ಲರಿಗೂ ಅಚ್ಚುಮೆಚ್ಚು. ಅದೇ ಕಾರಣದಿಂದ ಹಬ್ಬ ಹರಿದಿನ ಬಂದರೆ ಪೊಲೀಸರು ಅಷ್ಟೊಂದು ತೆಲೆಬಿಸಿ ಮಾಡಿಕೊಳ್ಳಲ್ಲ.