ಬೆಳಗಾಂ ಶುಗರ್ಸ್, ಎಸ್.ನಿಜಲಿಂಗಪ್ಪ ಸಕ್ಕರೆ ಸಂಸ್ಥೆ ಸಹಯೋಗ
ಕಬ್ಬು ಬೆಳೆಗೆ ತಗಲುವ ಗೊಣ್ಣೆ ಹುಳು
ನಿರ್ವಹಣೆಗೆ ಕುರಿತು ಕಾರ್ಯಾಗಾರ
ಬೆಳಗಾವಿ,
ಬೆಳಗಾಂ ಶುಗರ್ಸ ಮತ್ತು ಎಸ್.ನಿಜಲಿಂಗಪ್ಪ ಸಕ್ಕರೆ ಸಂಸ್ಥೆ, ಬೆಳಗಾವಿ ಸಹಯೋಗದೊಂದಿಗೆ ಗೋಕಾಕ ತಾಲೂಕಿನ ಸುಲಧಾಳ ಗ್ರಾಮದ ಶ್ರೀ ಜಡಿಸಿದ್ದೇಶ್ವರ ಮಠದಲ್ಲಿ ಕಬ್ಬು ಬೆಳೆಗಾರರಿಗೆ ಗೊಣ್ಣೆ ಹುಳುವಿನ ಸಮಗ್ರ ನಿರ್ವಹಣೆ ಕುರಿತು ಒಂದು ದಿನದ ಕಾರ್ಯಾ ಗಾರವನ್ನು ಹಮ್ಮಿಕೊಳ್ಳಲಾಗಿತ್ತು.


ಮುಖ್ಯ ಅಥಿತಿಗಳಾಗಿ ಆಗಮಿಸಿದ ಸಂಸ್ಥೆಯ ಕೃಷಿ ವಿಭಾಗದ ಮುಖ್ಯಸ್ಥ ಎನ್.ಆರ್.ಯಕ್ಕೇಲಿ ಮಾತನಾಡಿ, ಪ್ರಸಕ್ತ ವರ್ಷದಲ್ಲಿ ಮಳೆಯ ಪ್ರಮಾಣದಲ್ಲಿ ಇಳಿಕೆಯಾಗಿರುವುದರಿಂದ ಗೊಣ್ಣೆ ಹುಳುವಿನ ಬಾಧೆ ಹೆಚ್ಚಾಗಿ ಕಂಡು ಬರುತ್ತಿದೆ. ಇದು ಉತ್ತಮ ಇಳುವರಿ ನಿರಿಕ್ಷೇಯಲ್ಲಿದ್ದ ರೈತರಲ್ಲಿ ಆತಂಕವನ್ನು ಉಂಟುಮಾಡಿದೆ ಎಂದರು.



ಕಬ್ಬು ಬೆಳೆಯನ್ನು ಒಣಗಿಸಿ ಕಡಿಮೆ ಇಳುವರಿಗೆ ಕಾರಣವಾಗುತ್ತಿದೆ. ಎಸ್.ನಿಜಲಿಂಗಪ್ಪ ಸಕ್ಕರೆ ಸಂಸ್ಥೆ, ಬೆಳಗಾವಿಯಲ್ಲಿ ಪ್ರಮಾಣಿಕರಿಸಿದ ಮೆಟಾರೈಜಿಯಂ ಯನ್ನು ಬಳಸಿ ಗೊಣ್ಣೆ ಹುಳುವಿನ ಬಾದೆಯನ್ನು ಹತೋಟಿಗೆ ತರಲು ಸಾಧ್ಯವಿದೆ ಎಂದು ತಿಳಿಸಿದರು ಕೀಟದ ಹತೋಟಿಗಾಗಿ ಮಾಗಿ ಉಳುಮೆಯ ಮಹತ್ವ ತಿಳಿಸಿದರು.


ಸಂಸ್ಥೆಯ ಕೀಟ ಶಾಸ್ತ್ರಜ್ಞ ಡಾ..ಮಂಜುನಾಥ ಚೌರಡ್ಡಿ ಯವರು ಗೊಣ್ಣೆ ಹುಳುವಿನ ಸಮಗ್ರ ನಿರ್ವಹಣಾ ತಾಂತ್ರಿಕತೆಗಳನ್ನು ಕಾರ್ಯಾಗಾರದಲ್ಲಿ ತಿಳಿಸಿದರು.

ಕಬ್ಬಿನ ತಾಕುಗಳಲ್ಲಿ ದೀಪಾಕರ್ಷಕ ಬಲೆಗಳನ್ನು ಅಳವಡಿಸಿ ರಾತ್ರಿ ಸಮಯದಲ್ಲಿ ಈ ಕೀಟದ ದುಂಬಿಗಳು ಆಕರ್ಷಣೆ ಹೊಂದಿ ಸಾವನಪ್ಪುತ್ತವೆ. ಅದೇ ರೀತಿಯಾಗಿ ಸಂಸ್ಥೆಯಲ್ಲಿ ಉತ್ಪಾದಿಸುತ್ತಿರುವ ಜೈವಿಕ ಕೀಟನಾಶಕವನ್ನು ಎಕರೆಗೆ 5 ಕೆ.ಜಿ ಜೊತೆಗೆ ಸರಿಯಾಗಿ ಕಳೆತ ತಿಪ್ಪೆಗೊಬ್ಬರ ಮಿಶ್ರಣ ಮಾಡಿ ಕಬ್ಬನ್ನು ನಾಟಿ ಮಾಡುವಾಗ ಮತ್ತು ಬೊದು ಎರಿಸುವಾಗ ಬೆಳೆಯಲ್ಲಿ ಅಳವಡಿಸಿಕೊಂಡರೆ ಕೀಟವನ್ನು ನಿಯಂತ್ರಿಸಬಹುದು ಎಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿದ ಕಾರ್ಖಾನೆಯ ಕಬ್ಬು ವಿಭಾಗದ ಪ್ರಧಾನ ವ್ಯವಸ್ಥಾಪಕ ಶ್ಯಾಮರಾವ ಬೀರ್ಜೆ ಹಾಗೂ ಹಿರಿಯ ವ್ಯವಸ್ಥಾಪಕ ಶಂಕರಗೌಡ ಪಾಟೀಲರು ಕಬ್ಬು ಬೆಳೆಗಾರರಿಗೆ ಕಾರ್ಖಾನೆಯ ಸವಲತ್ತುಗಳ ಕುರಿತು ವಿವರಿಸಿದರು.
ಕಬ್ಬು ಬೆಳೆಗಾರರು ಅಡಸಾಲಿ ಅವಧಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕಬ್ಬನ್ನು ಬೆಳೆಯುವವರಿಗೆ ಕಾರ್ಖಾನೆಯ ವತಿಯಿಂದ ಉತ್ತಮ ತಳಿಯ ಕಬ್ಬಿನ ಬೀಜ ಅಥವಾ ಸಸಿಯನ್ನು ಪೂರೈಸಲಾಗುವುದು ಎಂದು ತಿಳಿಸಿದರು. ನಿಂಗೇಶ ನಾಯ್ಕ ರವರು ಕಾಯರ್ಾಗಾರ ನಡೆಸಿಕೊಟ್ಟರು. ಕಾಖರ್ಾನೆಯ ವ್ಯಾಪ್ತಿಯಲ್ಲಿರುವ ಸುಮಾರು 300 ಜನ ರೈತರು ಈ ಕಾರ್ಯಾಗಾರದಲ್ಲಿ ಭಾಗಿಯಾಗಿದ್ದರು.