Headlines

ಇನ್ನೂ‌ ಮುಗಿಯದ ವಿಸರ್ಜನೆ

ಅಲ್ಲಲ್ಲಿ ನಿದ್ರೆಗೆ ಜಾರಿದ ಕಾರ್ಯಕರ್ತರು. ಮೂರ್ತಿ ಮುಂದಕ್ಕೆ ಸಾಗುವುದೇ ಕಷ್ಡ ಎನ್ನುತ್ತಿರುವ ಪೊಲೀಸರು.9 ಗಂಟೆ ಆದರೂ ಮುಗಿಯದ ವಿಸರ್ಜನೆ. ಬೆಳಗಾವಿ – ನಗರದಲ್ಲಿ ನಿನ್ನೆ ಸಂಜೆ ಆರಂಭವಾದ ಶ್ರೀ ಮೂರ್ತಿ ವಿಸರ್ಜನೆ ಮೆರವಣಿಗೆ ಶುಕ್ರವಾರ ಬೆಳಗ್ಗೆ ಒಂಬತ್ತು ಗಂಟೆವರೆಗೂ ಮುಂದುವರೆದಿತ್ತು.. ಡಾಲ್ಬಿ ಸದ್ದಿನಿಂದಾಗಿ ಈ ವರ್ಷವೂ ಶ್ರೀಮೂರ್ತಿ ವಿಸರ್ಜನೆ ವಿಳಂಬವಾಗಿ ಸಾಗುತ್ತಿದೆ . ಡಾಲ್ಬಿ ಸದ್ದಿಗೆ ಕುಣಿದು ಕುಪ್ಪಳಿಸುತ್ತಿರುವವರನ್ನು ಕಂಡು ಜನಬೆಚ್ಚಿ ಬಿದ್ದಿದ್ದಾರೆ ಗಮನಿಸಬೇಕಾದ ಸಂಗತಿ ಎಂದರೆ, ಗಣೇಶ ಮಂಡಳದ ಕಾರ್ಯಕರ್ತರು ಮೂರ್ತಿಯನ್ನು ಹೊಂಡಕ್ಕೆ ತೆಗೆದುಕೊಂಡು ಹೋಗುವ…

Read More

ಕನ್ನಡ ಧ್ವಜ ಕಸಿದುಕೊಂಡರು..!

ಬೆಳಗಾವಿ. ಗಣೇಶ ವಿಸರ್ಜನೆ ಮೆರವಣಿಗೆಯಲ್ಲಿ ಕನ್ನಡ ಬಾವುಟ ಹಿಡಿದು ಕುಣಿಯುತ್ತಿದ್ದುದಕ್ಕೆ ಓರ್ವ ಆಕ್ಷೇಪಿಸಿ ಬಾವುಟ ಕಿತ್ತುಕೊಂಡು ಹೋದ ಘಟನೆ ಬೋಗಾರವೇಸ್ ವೃತ್ತದಲ್ಲಿ 1.ಗಂಟೆ 7 ನಿಮಿಷದಲ್ಲಿ‌ ನಡೆದಿದೆ . ಗಣೇಶ ವಿಸರ್ಜನೆ ಮೆರವಣಿಗೆಯಲ್ಲಿ ಹಾಡಿಗೆ ತಕ್ಕಂತೆ ಗುಂಪಿನಲ್ಲಿದ್ದ ವ್ಯಕ್ತಿ ಕನ್ನಡ ಬಾವುಟ ಹಿಡಿದುಕೊಂಡು ಕುಣಿಯುತ್ತಿದ್ದನು. ಈ ಸಂದರ್ಭದಲ್ಲಿ ಅಲ್ಲಿಯೇ ಇದ್ದ ವ್ಯಕ್ಯಿ ಆ ಕನ್ನಡ ಬಾವುಟವನ್ನು ಕಸಿದುಕೊಂಡು ಹೋದನು.

Read More

ಮೆರವಣಿಗಿಯೊಳಗ ಪೋಜ್ ಕೊಟ್ಟಾಳೊ…!

ಬೆಳಗಾವಿ. ಗಣೇಶ ವಿಸರ್ಜನೆ ಮೆರವಣಿಗೆ ನ ಭೂತೊ ನ ಭವಿಷ್ಯತಿ ಎನ್ನುವಂತೆ ಸಾಗಿದೆ. ಬೋಗಾರವೇಸ್ ವೃತ್ತದಲ್ಲಿ ಎಲ್ಲಿ ನೋಡಿದಲ್ಲಿ ಜನರೇ ಜನ‌. ಗಣಪತಿ ಬಪ್ಪ ಮೋರಯಾ ಎಬ್ನುವ ಘೋಷಣೆ ನಡುವೆ ಡಿಜೆ ಸಂಗೀತ ಭಾರೀ ಸದ್ದು ಮಾಡುತ್ತಿದೆ. ಇದೆಲ್ಲದರ ನಡುವೆ ಸಿಕ್ಕಾಪಟ್ಟೆ ವೈರಲ್ ಆಗಿರುವ ಶಾಂತಾಬಾಯಿ ..ಹಾಡಿಗೆ ಜನ‌ಹುಚ್ಚೆದ್ದು ಕುಣಿದು ಕುಪ್ಪಳಿಸಿದರು. ಇದೆಲ್ಲಕ್ಕಿಂತ ಮುಖ್ಯವಾಗಿ ಪೋಜ್ ಕೊಟ್ಟಾಳೊ ಹುಡುಗಿ ಪೋಜ್ ಕೊಟ್ಟಾಳೊ ಎನ್ನುವ ಕನ್ನಡ ಹಾಡಿಗೆ ಕುಣಿದ ದೃಶ್ಯ ಎಲ್ಲರ ಗಮನ ಸೆಳೆಯಿತು.

Read More

ಗಣಪತಿ ಬಪ್ಪ ಮೋರಯಾ..!

ಗಣೇಶ ವಿಸರ್ಜನೆ ಮೆರವಣಿಗೆ ಆರಂಭ, ಶಾಸಕ ಅಭಯ ಪಾಟೀಲ, ಕವಟಗಿಮಠ, ರಾಜು ಶೇಠ, ಮೇಯರ್ ಭಾಗಿ, ಮೆರವಣಿಗೆ ಕಣ್ತುಂಬಿಕೊಳ್ಳುವ ಸಂಭ್ರಮಕ್ಕೆ ಖಾಕಿ ಅಡ್ಡಿ, ಅಂಬ್ಯುಲೆನ್ಸ್ ಹೋಗದಂತೆ ಬ್ಯಾರಿಕೇಡ್ ಹಾಕಿದ ಖಾಕಿ ಬೆಳಗಾವಿ.ಗಡಿನಾಡ ಬೆಳಗಾವಿಯಲ್ಲಿ ಹನ್ನೊಂದು ದಿನಗಳ ಕಾಲ ವಿರಾಜಮಾನಗೊಂಡ ಗಣಪತಿ‌ ವಿಸರ್ಜನೆ ಮೆರವಣಿಗೆ ನಿಗದಿತ ಸಮಯಕ್ಕೆ ಆರಂಭಗೊಂಡಿದೆ. ಕಾವೇರಿ ಕೋಲ್ಡ್ರಿಂಕ್ಸ್ ಬಳಿ ಶಾಸಕ ಅಭಯ ಪಾಟೀಲ ವಿಧಾನ. ಪರಿಷತ್ತಿನ ಮಾಜಿ ಸದಸ್ಯ ಮಹಾಂತೇಶ ಕವಟಗಿಮಠ, ಶಾಸಕ ಆಸೀಫ್ ಶೇಠ, ಮೇಯರ್ ಶೋಭಾ ಸೋಮನ್ನಾಚೆ, ಉಪ‌ಮೇಯರ್ ರೇಷ್ಮಾ ಪಾಟೀಲ,…

Read More

3 ದಿನ ಮೋಡ ಬಿತ್ತನೆ

3 ದಿನ ಬೆಳಗಾವಿ ಜಿಲ್ಲೆಯಲ್ಲಿ ಮೋಡ ಬಿತ್ತನೆ: ಸಚಿವ ಸತೀಶ್‌ ಜಾರಕಿಹೊಳಿ ಬೆಳಗಾವಿ: ರಾಜ್ಯದಲ್ಲಿ ಬರಗಾಲದ ಛಾಯೆ ಆವರಿಸಿದ್ದು, ಮುಂಗಾರು ಮಳೆ ತೀವ್ರ ಕೊರತೆಯಿಂದ ಜಿಲ್ಲೆಯ ಜನ ಸಂಕಷ್ಟ ಅನುಭವಿಸುತ್ತಿದ್ದಾರೆ. ಆದಕಾರಣ ಮಳೆಗಾಗಿ ನಾಳೆಯಿಂದ ಬೆಳಗಾವಿ ಜಿಲ್ಲೆಯಲ್ಲಿ ಮೂರು ದಿನ ಬೆಳಗಾಂ ಶುಗರ್ಸ್‌ನಿಂದ ಮೋಡ ಬಿತ್ತನೆ ಮಾಡಲಾಗುತ್ತಿದ್ದು, ರಾಜ್ಯ, ಕೇಂದ್ರ ಸರ್ಕಾರದಿಂದ ಒಪ್ಪಿಗೆ ದೊರೆತಿದೆ ಎಂದು ಲೋಕೋಪಯೋಗಿ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್‌ ಜಾರಕಿಹೊಳಿ ಅವರು ತಿಳಿಸಿದರು. ನಗರದ ಕಾಂಗ್ರೆಸ್‌ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ…

Read More
error: Content is protected !!