ಬೆಳಗಾವಿ. ಗಣೇಶ ವಿಸರ್ಜನೆ ಮೆರವಣಿಗೆ ನ ಭೂತೊ ನ ಭವಿಷ್ಯತಿ ಎನ್ನುವಂತೆ ಸಾಗಿದೆ.
ಬೋಗಾರವೇಸ್ ವೃತ್ತದಲ್ಲಿ ಎಲ್ಲಿ ನೋಡಿದಲ್ಲಿ ಜನರೇ ಜನ. ಗಣಪತಿ ಬಪ್ಪ ಮೋರಯಾ ಎಬ್ನುವ ಘೋಷಣೆ ನಡುವೆ ಡಿಜೆ ಸಂಗೀತ ಭಾರೀ ಸದ್ದು ಮಾಡುತ್ತಿದೆ.
ಇದೆಲ್ಲದರ ನಡುವೆ ಸಿಕ್ಕಾಪಟ್ಟೆ ವೈರಲ್ ಆಗಿರುವ ಶಾಂತಾಬಾಯಿ ..ಹಾಡಿಗೆ ಜನಹುಚ್ಚೆದ್ದು ಕುಣಿದು ಕುಪ್ಪಳಿಸಿದರು.
ಇದೆಲ್ಲಕ್ಕಿಂತ ಮುಖ್ಯವಾಗಿ ಪೋಜ್ ಕೊಟ್ಟಾಳೊ ಹುಡುಗಿ ಪೋಜ್ ಕೊಟ್ಟಾಳೊ ಎನ್ನುವ ಕನ್ನಡ ಹಾಡಿಗೆ ಕುಣಿದ ದೃಶ್ಯ ಎಲ್ಲರ ಗಮನ ಸೆಳೆಯಿತು.