Headlines

ಕೆಎಸ್ಆರ್ ವಿದ್ಯಾರ್ಥಿಗಳ ಸಾಧನೆ

ಬೆಳಗಾವಿ.ನಗರದ ಕೆಎಸ್ ಆರ್ ಸಿಬಿಎಸ್ಈ ಶಾಲೆಯ ವಿದ್ಯಾರ್ಥಿಗಳ ಕರಾಟೆ ಸ್ಪರ್ಧೆಯಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ,ಈ ಶಾಲೆಯ 5, 6 ಮತ್ತು 8 ನೇ ತರಗತಿಯ ವಿದ್ಯಾರ್ಥಿಗಳು ಕಳೆದ ದಿ. 3 ರಂದು ಶಿವಮೊಗ್ಗದ ನೆಹರು ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ 18 ನೇ ರಾಷ್ಟ್ರೀಯ ಮಟ್ಟದ ಮುಕ್ತ ಕರಾಟೆ ಚಾಂಪಿಯನ್ಶಿಪ್ನಲ್ಲಿ ಭಾಗವಹಿಸಿ ಮೂರು ಸ್ಥಾನಗಳಲ್ಲಿ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಅಮಾನ್ ಮುಜಾವರ್, ಉಜೈಫ್ ಧಾರವಾಡಕರ್, ಉಜ್ಮಾ, ನಯನಾ ಪೆಸೇಕರ, ನಯನಾ ವೆರ್ಣೇಕರ ಅವರು ಜೀತೇಂದ್ರ ಕಾಕತಿಕರ್ ಅವರ ಮಾರ್ಗದರ್ಶನದಲ್ಲಿ ಈ…

Read More

ಕಿತ್ತೂರು ಉತ್ಸವಕ್ಕೆ 5 ಕೋಟಿ ಬೇಕು..!

ಬೆಳಗಾವಿ, ಕಳೆದ ವರ್ಷ ಸರಕಾರವು ಕಿತ್ತೂರು ಉತ್ಸವವನ್ನು ರಾಜ್ಯಮಟ್ಟದ ಉತ್ಸವವನ್ನಾಗಿ ಘೋಷಿಸಿ ಎರಡು ಕೋಟಿ ರೂಪಾಯಿ ಅನುದಾನ ನೀಡಿತ್ತು. ಅದೇ ರೀತಿ ಈ ಬಾರಿ ಐದು ಕೋಟಿ ರೂಪಾಯಿ ಅನುದಾನ ನೀಡುವಂತೆ ಕೋರಿ ಪ್ರಸ್ತಾವನೆ ಸಲ್ಲಿಸಲಾಗುವುದು” ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ತಿಳಿಸಿದರು. ಕಿತ್ತೂರು ಉತ್ಸವದ ಪೂರ್ವಭಾವಿಯಾಗಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಮಂಗಳವಾರ(ಸೆ.26) ನಡೆದ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಈ ಬಾರಿ ಐದು ಕೋಟಿ ರೂಪಾಯಿ ಅನುದಾನ ಕೋರಿ ಕಿತ್ತೂರು ಶಾಸಕರಾದ ಬಾಬಾಸಾಹೇಬ್ ಪಾಟೀಲ…

Read More

ಜನತಾದರ್ಶನಕ್ಕೆ ಸಚಿವರ ಗೈರು

ಬೆಳಗಾವಿ. ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿಯ ಜಿಲ್ಲೆಯ ಜನತಾದರ್ಶನಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಗೈರಾಗಿದ್ದಾರೆ.. ಈ ಮೂಲಕ ಲೋಕ ಅಖಾಡಾಕ್ಕೆ ಬೇರೊಬ್ವರನ್ನು ನೇಮಕ ಮಾಡಿದ್ದರ ಬಗ್ಗೆ ಅಸಮಾಧಾನವನ್ನು‌ ಈ ಮೂಲಕ ಹೊರಹಾಕಿದ್ದಾರೆಂದು ವ್ಯಾಖ್ಯಾನಿಸಲಾಗುತ್ತಿದೆ. ಹಾಗೆ ನೋಡಿದರೆ ಜನತಾ ದರ್ಶನ ಕಾರ್ಯಕ್ರಮ ಕಳೆದ ದಿನ ಅಂದರೆ 25 ರಂದೇ ನಡೆಯಬೇಕಿತ್ತು. ಆದರೆ ಸಚಿವರು ತಮ್ಮ ಸಮಯ ನೋಡಿಕೊಂಡು‌ ಅದನ್ನು ಇಂದಿಗೆ ಮುಂದೂಡಿದ್ದರು. ಇಂದು ನಡೆಯಬೇಕಿದ್ದ ಜನತಾದರ್ಶನಕ್ಕೆ ಜಿಲ್ಲಾಡಳಿತ ಎಲ್ಲ ರೀತಿಯ ವ್ಯವಸ್ಥೆ ಮಾಡಿತ್ತು. ಆದರೆ ಸಚಿವ ಸತೀಶ…

Read More

ಬೆಳಗಾವಿ-ಮೈಸೂರು ರೇಲ್ವೆಗೆ ಚಾಲನೆ

ಬೆಳಗಾವಿ. ಇನ್ನು‌ಮುಂದೆ ಮೈಸೂರಿಗೆ ರೈಲಿನ ಮೂಲಕ ಹೋಗಬೇಕೆನ್ನುವವರು ಪ್ರಯಾಸ ಪಡಬೇಕಾದ ಅವಶ್ಯಕತೆಯಿಲ್ಲ. ಸಂಸದೆ ಮಂಗಲಾ ಅಂಗಡಿ ಅವರ ಪ್ರಯತ್ನದ ಫಲವಾಗಿ ಇಂದಿನಿಂದ ಬೆಳಗಾವಿ ಮೈಸೂರು ನಡುವೆ ರೈಲು ಸಂಚಾರ‌ ಆರಂಭವಾಗಲಿದೆ. ಇಂದು ದಿ.‌26 ರಂದು ಸಂಜೆ 7.15.ಕ್ಕೆ ಸಂಸದರು ಬೆಳಗಾವಿ ರೈಲು ನಿಲ್ದಾಣದಲ್ಲಿ ಈ ರೈಲಿಗೆ ಹಸಿರು‌ ನಿಶಾನೆ ತೋರಿಸಲಿದ್ದಾರೆ.

Read More

ಜನತಾದರ್ಶನದಲ್ಲಿ ಸಂಸದರನ್ನು ಎಳೆದಾಡಿದ ಎಸ್ಪಿ

ಕೋಲಾರ, ಜನತಾದರ್ಶನದಿಂದ ಸಂಸದರನ್ನೇ ಎಳೆದಾಡಿದ ಎಸ್ಪಿ ಹೊರಗೆ ಹಾಕಿದ ಘಟನೆ ನಡೆದಿದೆ. ಶಾಸಕರು ಮತ್ತು ಸಂಸದ ಮುನಿಸ್ವಾಮಿ ಅವರ ನಡುವೆ ವಿಷಯಕ್ಕೆ ಸಂಬಂಧಿಸಿದಂತೆ ಮಾತಿನ ಚಕಮಕಿ ನಡೆದಿತ್ತು. ಈ ಸಂದರ್ಭದಲ್ಲಿ ಮಧ್ಯಪ್ರವೇಶ ಮಾಡಿದ ಎಸ್ಪಿ ಯವರು ಆವೇಶಭರಿತವಾಗಿ ಮಾತನಾಡಿದ್ದಲ್ಲದೇ ಅವರನ್ನು ಎಳೆದಾಡಿ ಹೊರಗೆ ಹಾಕುವ ಕೆಲಸ ಮಾಡಿದರು.

Read More

ಬೆಳಗಾವಿಗೆ ಹೊಸ ಯೋಜನೆ- ಚರ್ಚೆ

ಹುಕ್ಕೇರಿ : ಲೋಕೋಪಯೋಗಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಅವರು ಸೋಮವಾರ ಬೆಂಗಳೂರಿನ ಕೆ.ಆರ್.ವೃತ್ತದಲ್ಲಿರುವ ಇಲಾಖೆಯ ಆರ್ಕಿಟೆಕ್ಚರ್ ವಿಭಾಗ ಹಾಗೂ ಮುಖ್ಯ ಅಭಿಯಂತರರ ಕಚೇರಿಗೆ ಭೇಟಿ ನೀಡಿ ಬೆಳಗಾವಿಯ ಹೊಸ ಯೋಜನೆಗಳ ಕುರಿತು ಸುಧೀರ್ಘ ಚರ್ಚೆ ನಡೆಸಿದರು. ಸಚಿವ ಜಾರಕಿಹೊಳಿ ಅವರು ಆರ್ಕಿಟೆಕ್ಚರ್ ವಿಭಾಗಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಇದೇ ವೇಳೆ ವಿವಿಧ ಯೋಜನೆಗಳ ಮಾಹಿತಿ ಪಡೆದರು. ಇಲಾಖೆಯ ವಿವಿಧ ಹೊಸ ಯೋಜನೆಗಳು ಮತ್ತು ಬೆಳಗಾವಿ ನಗರದ ಜಿಲ್ಲಾ ಕ್ರೀಡಾಂಗಣ ನವೀಕರಣ, ಹೊಸದಾಗಿ ನಿರ್ಮಿಸಲು…

Read More

ಗಣೇಶ ದರ್ಶನಕ್ಕೆ ಬೈಕ ಹತ್ತಿದ ಶಾಸಕ

ಬೆಳಗಾವಿ.ಕಿರಿಯರಲ್ಲಿ ಹಿರಿಯ ರಾಜಕಾರಣಿ ಎನಿಸಿಕೊಂಡು ವಿನೂತನ ಕಾರ್ಯಗಳ ಮೂಲಕ ಸೈ ಎನಿಸಿಕೊಂಡವರು ಬೆಳಗಾವಿ ದಕ್ಷಿಣ ಕ್ಷೇತ್ರದ ಬಿಜೆಪಿ ಶಾಸಕ ಅಭಯ ಪಾಟೀಲ ಒಬ್ಬರು, ತಮ್ಮ ಅಧಿಕಾರಾವಧಿಯಲ್ಲಿ ಎಂದಿಗೂ ಹೈಟೆಕ್ ರಾಜಕಾರಣ ಮಾಡದೇ ಕ್ಷೇತ್ರದ ಜನರ ಮಧ್ಯದಲ್ಲಿದ್ದು ಮುನ್ನಡೆದವರಲ್ಲಿ ಇವರು ಮೊದಲಿಗರು ಎನ್ನಬಹುದು ,ಈಗ ವಿಶೇಷವಾಗಿ ಬೆಳಗಾವಿ ಗಣೇಶ ದರ್ಶನಕ್ಕೆ ಅವರು ಕಾರ್ಯಕರ್ತನ ಬೈಕ್ ಏರಿ ಹೊರಟಿದ್ದು ಎಲ್ಲರನ್ನು ಹುಬ್ಬೇರಿಸುವಂತೆ ಮಾಡಿದೆ. ಛತ್ತೀಸಗಡ ಚುನಾವಣೆ ಉಸ್ತುವಾರಿ ಜವಾಬ್ದಾರಿ ಮಧ್ಯೆಯೇ‌ ಬಿಡುವು ಮಾಡಿಕೊಂಡ ಅಭಯ ಪಾಟೀಲರು, ಗಣೇಶ ಹಬ್ಬದ ಸಂದರ್ಭದಲ್ಲಿ…

Read More

ಕಾವೇರಿಗೆ ಜೈ ಎಂದ ಎಕೆಬಿಎಂಎಸ್..!

ದಾವಣಗೆರೆ. ರಾಜ್ಯದ ರೈತರ ಹಿತ ಕಾಪಾಡುವ ನಿಟ್ಟಿನಲ್ಲಿ ನಡೆದಿರುವ ಕಾವೇರಿ ಹೋರಾಟಕ್ಜೆ ಅಖಿಲ ಕರ್ನಾಟಕ ಬ್ರಾಹ್ಮಣ ನಹಾಸಭಾ ಬೆಂಬಲ ಸೂಚಿದಿದೆ. ಇಂದಿಲ್ಲಿ ಮಹಾಸಭಾ ಅಧ್ಯಕ್ಷ ಅಶೋಕ‌ ಹಾರನಹಳ್ಳಿ ಅಧ್ಯಕ್ಷತೆಯಲ್ಲಿ‌ ನಡೆದ ಬ್ರಾಹ್ಮಣ ಮಹಾಸಭಾದ ಎರಡನೇ ಕಾರ್ಯಕಾರಿಣಿ ಸಭೆಯಲ್ಲಿ‌ ಈ‌ ಮಹತ್ವದ ತೀರ್ಮಾನ ತೆಗೆದುಕೊಳ್ಳಲಾಗಿದೆ. ರಾಜ್ಯದ ರೈತರ ಹಿತವನ್ನು ಕಾಪಾಡುವ ನಿಟ್ಟಿನಲ್ಲಿ ಸರ್ಕಾರ ಕ್ರಮ ತೆಗೆದುಕೊಳ್ಳಬೇಕು ಎನ್ನುವ ಮೂಲಕ ಕಾವೇರಿ ನದಿ ನೀರಿನ ಹೋರಾಟಕ್ಕೆ ಬೆಂಬಲಿಸುವ ಮಹತ್ವದ ತೀರ್ಮಾನವನ್ನು ಅಖಿಲ.ಕರ್ನಾಟಕ ಬ್ರಾಹ್ಮಣ ಮಹಾಸಭಾ ತೆಗೆದುಕೊಂಡಿತು. ಮಹಿಳಾ ಮೀಸಲಾತಿ ಸ್ವಾಗತ…

Read More

ಬ್ರಾಹ್ಮಣರ ಮೀಸಲಾತಿ ಕೋರ್ಟಗೆ ಮೊರೆ..!

ದಾವಣಗೆರೆ, ,ಬ್ರಾಹ್ಮಣರಿಗೆ ಸಿಗಬೇಕಾದ ಶೇ 1೦ ರಷ್ಡು ಮೀಸಲಾತಿಯನ್ನು ನೀಡದ ಸರ್ಕಾರದ ಕ್ರಮವನ್ಬು ಪ್ರಶ್ನಿಸಿ ಹೈಕೋರ್ಟ್ ಮೊರೆ ಹೋಗುವ ತೀರ್ಮಾನವನ್ನು ಅಖಿಲ ಕರ್ನಾಟಕ ಬ್ರಾಹ್ಮಣ‌ ಮಹಾಸಭಾ ಪ್ರಕಟಿಸಿದೆ. ದಾವಣಗೆರೆಯಲ್ಲಿ ನಡೆದ 2 ನೇ ಕಾರ್ಯಕಾರಿಣಿ ಸಭೆಯಲ್ಲಿ ಮಹಾಸಭಾ ಅದ್ಯಕ್ಷ ಅಶೋಕ ಹಾರನಹಳ್ಳಿ‌ ಈ ನಿರ್ಧಾರವನ್ನು ಪ್ರಕಟಿಸಿದರು. ಇನ್ನೊಙದೆರಡು ವಾರದಲ್ಲಿ ಕೋರ್ಟ ಮೆಟ್ಟಿಲು ಹತ್ತಲಾಗುವುದು ಎಂದರು. ಹುಬ್ಬಳ್ಳಿಯಲ್ಲಿ ಸಾಮಾನ್ಯ ಸಭೆ https://ebelagavi.com/index.php/2023/09/03/hi-35/

Read More

ಹುಬ್ಬಳ್ಳಿಯಲ್ಲಿ AKBMS ಸಾಮಾನ್ಯ ಸಭೆ

ದಾವಣಗೆರೆ, ಅಖಿಲ ಕರ್ನಾಟಕ ಮಹಾಸಭೆಯ ಸಾನಾನ್ಯ ಸಭೆ ನವೆಂಬರ್ ತಿಂಗಳಲ್ಲಿ ಹುಬ್ಬಳ್ಳಿ ಯಲ್ಲಿ ನಡೆಸಲು ಚಿಂತನೆ ನಡೆದಿದೆ ಎಂದು ಮಹಾಸಭಾ ಅಧ್ಯಕ್ಷ ಅಶೋಕ ಹಾರನಹಳ್ಳಿ ಹೇಳಿದರು. ಇಂದಿಲ್ಲಿ ನಡೆದ 2 ನೇ ಕಾರ್ಯಕಾರಿಣಿ ಸಭೆಯ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು. ಬೆಂಗಳೂರು ಹೊರತುಪಡಿಸಿ ಬೇರೆ ಬೇರೆ ಕಡೆಗೆ ಸಾಮಾನ್ಯ ಸಭೆ ನಡೆಸುವ ಬಗ್ಗೆ ತಿಳಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಬೈಲಾ ತಿದ್ದುಪಡಿ ಮಾಡುವ ಮೂಲಕ ಈ ಐತಿಹಾಸಿಕ ನಿರ್ಧಾರ ಮಾಡಲಾಗಿದೆ ಎಂದರು. ಈಗ ಹುಬ್ಬಳ್ಳಿ ಯಲ್ಲಿ ಸಭೆ ನಡೆಸು ಬಗ್ಗೆ…

Read More
error: Content is protected !!