
ಗೊಣ್ಣೆ ಹುಳು ನಿರ್ವಹಣೆಗೆ ಕುರಿತು ಕಾರ್ಯಾಗಾರ
ಬೆಳಗಾಂ ಶುಗರ್ಸ್, ಎಸ್.ನಿಜಲಿಂಗಪ್ಪ ಸಕ್ಕರೆ ಸಂಸ್ಥೆ ಸಹಯೋಗಕಬ್ಬು ಬೆಳೆಗೆ ತಗಲುವ ಗೊಣ್ಣೆ ಹುಳುನಿರ್ವಹಣೆಗೆ ಕುರಿತು ಕಾರ್ಯಾಗಾರ ಬೆಳಗಾವಿ, ಬೆಳಗಾಂ ಶುಗರ್ಸ ಮತ್ತು ಎಸ್.ನಿಜಲಿಂಗಪ್ಪ ಸಕ್ಕರೆ ಸಂಸ್ಥೆ, ಬೆಳಗಾವಿ ಸಹಯೋಗದೊಂದಿಗೆ ಗೋಕಾಕ ತಾಲೂಕಿನ ಸುಲಧಾಳ ಗ್ರಾಮದ ಶ್ರೀ ಜಡಿಸಿದ್ದೇಶ್ವರ ಮಠದಲ್ಲಿ ಕಬ್ಬು ಬೆಳೆಗಾರರಿಗೆ ಗೊಣ್ಣೆ ಹುಳುವಿನ ಸಮಗ್ರ ನಿರ್ವಹಣೆ ಕುರಿತು ಒಂದು ದಿನದ ಕಾರ್ಯಾ ಗಾರವನ್ನು ಹಮ್ಮಿಕೊಳ್ಳಲಾಗಿತ್ತು. ಮುಖ್ಯ ಅಥಿತಿಗಳಾಗಿ ಆಗಮಿಸಿದ ಸಂಸ್ಥೆಯ ಕೃಷಿ ವಿಭಾಗದ ಮುಖ್ಯಸ್ಥ ಎನ್.ಆರ್.ಯಕ್ಕೇಲಿ ಮಾತನಾಡಿ, ಪ್ರಸಕ್ತ ವರ್ಷದಲ್ಲಿ ಮಳೆಯ ಪ್ರಮಾಣದಲ್ಲಿ ಇಳಿಕೆಯಾಗಿರುವುದರಿಂದ ಗೊಣ್ಣೆ…