
L and Tಗೆ 21 ಕೋಟಿ ದಂಡ
ದಂಡ ವಿಧಿಸಿದ ಮಹಾನಗರ ಪಾಲಿಕೆ. ಪಾಲಿಕೆ ಆಯುಕ್ತರ ದಿಟ್ಟ ನಿರ್ಧಾರ. ಬುದ್ದಿ ಹೇಳಿದರೂ ಸುಧಾರಿಸದ ಕಂಪನಿ. ಕಳಪೆ ಕಾಮಗಾರಿಯ ಆರೋಪ ಬೆಳಗಾವಿ.ಕೊಟ್ಟ ಜವಾಬ್ದಾರಿಯನ್ನು ನಿಭಾಯಿಸದವರಿಗೆ ಸರಿಯಾದ ರೀತಿಯಲ್ಲಿ ಬುದ್ದಿ ಕಲಿಸುವ ಕೆಲಸವನ್ನು ಬೆಳಗಾವಿ ಮಹಾನಗರ ಪಾಲಿಕೆ ಆಯುಕ್ತ ಅಶೋಕ ದುಡಗುಂಟಿ ಅವರು ಮಾಡಿದ್ದಾರೆ. ಬೆಳಗಾವಿಗೆ ನಿರಂತರ ಕುಡಿಯುವ ನೀರು ಪೂರೈಕೆ ಜವಾಬ್ದಾರಿ ಹೊತ್ತ ಎಲ್ ಆ್ಯಂಡ್ ಟಿ ಕಂಪನಿಗೆ ಮಹಾನಗರ ಪಾಲಿಕೆಯು ಬರೊಬ್ಬರಿ 21 ಕೋಟಿ 46 ಲಕ್ಷ ರೂ ದಂಡ ವಿಧಿಸಿದೆ. ನಿಗದಿತ ಅವಧಿಯಲ್ಲಿ ಗುರಿಸಾಧನೆ…