ಕುರುಬರೆಂದರೆ ಬರೀ ಜಾತಿಯಲ್ಲ..ಸಂಸ್ಕೃತಿ
ಬೆಳಗಾವಿಯಲ್ಲಿ ರಾಷ್ಟ್ರೀಯ ಮಟ್ಟದ ಕುರುಬ ಸಮಾಜದ ಸಮಾವೇಶ ದಿ.3. ರಂದು ನಡೆಯಲಿದೆ. ಈ ಹಿನ್ನೆಲೆಯಲ್ಲಿ ಕುರುಬ ಸಮಾಜದ ಇತಿಹಾಸ ಬಿಂಬಿಸುವ ಲೇಖನ ‘ಭಾರತದ ಕನಸು ಕಾಣುತ್ತಿರುವ ಕುರುಬರ ಹುಡುಗ’ ಎಂಬ ಅಭಿದಾನದೊಂದಿಗೆ ಚಕ್ರವರ್ತಿ ಚಂದ್ರಗುಪ್ತ ಮೌರ್ಯನ ಪುತ್ಥಳಿಯೊಂದನ್ನು ನಮ್ಮ ರಾಷ್ಟ್ರದ ಸಂಸತ್ತಿನ ಆವರಣದಲ್ಲಿ ಪ್ರತಿಷ್ಠಾಪಿಸಲಾಗಿದೆ. ಇದೇ ಸಂಸತ್ತನ್ನು ನಿರ್ಮಿಸಲು ಜಾಗ ನೀಡಿದ ಇಂದೋರಿನ ರಾಣಿ ಅಹಲ್ಯಾದೇವಿ ಹೋಲ್ಕರ್ ಅವರ ಪ್ರತಿಮೆಯೂ ಸಹ ಆರದ ಬೆಳಕಿನೊಂದಿಗೆ ಅಲ್ಲಿ ಪ್ರಕಾಶಿಸುತ್ತಲೇ ಇದೆ. ಇದು ಈ ನೆಲದ ಹಿರಿಮೆ-ಗರಿಮೆಗಳ ಪ್ರತೀಕವಾದ ಕುರುಬರಿಗೆ…