ಬೆಳಗಾವಿಯಲ್ಲಿ ರಾಷ್ಟ್ರೀಯ ಮಟ್ಟದ ಕುರುಬ ಸಮಾಜದ ಸಮಾವೇಶ ದಿ.3. ರಂದು ನಡೆಯಲಿದೆ. ಈ ಹಿನ್ನೆಲೆಯಲ್ಲಿ ಕುರುಬ ಸಮಾಜದ ಇತಿಹಾಸ ಬಿಂಬಿಸುವ ಲೇಖನ
‘ಭಾರತದ ಕನಸು ಕಾಣುತ್ತಿರುವ ಕುರುಬರ ಹುಡುಗ’ ಎಂಬ ಅಭಿದಾನದೊಂದಿಗೆ ಚಕ್ರವರ್ತಿ ಚಂದ್ರಗುಪ್ತ ಮೌರ್ಯನ ಪುತ್ಥಳಿಯೊಂದನ್ನು ನಮ್ಮ ರಾಷ್ಟ್ರದ ಸಂಸತ್ತಿನ ಆವರಣದಲ್ಲಿ ಪ್ರತಿಷ್ಠಾಪಿಸಲಾಗಿದೆ.

ಇದೇ ಸಂಸತ್ತನ್ನು ನಿರ್ಮಿಸಲು ಜಾಗ ನೀಡಿದ ಇಂದೋರಿನ ರಾಣಿ ಅಹಲ್ಯಾದೇವಿ ಹೋಲ್ಕರ್ ಅವರ ಪ್ರತಿಮೆಯೂ ಸಹ ಆರದ ಬೆಳಕಿನೊಂದಿಗೆ ಅಲ್ಲಿ ಪ್ರಕಾಶಿಸುತ್ತಲೇ ಇದೆ. ಇದು ಈ ನೆಲದ ಹಿರಿಮೆ-ಗರಿಮೆಗಳ ಪ್ರತೀಕವಾದ ಕುರುಬರಿಗೆ ಅತೀವ ಹೆಮ್ಮೆಯ ಸಂಕೇತ. 1

ಈ ನೆಲವನ್ನಾಳಿದ ಇತಿಹಾಸವನ್ನು ಹೊಂದಿದ ಹಾಗೂ ಜಗತ್ತಿನ ಅತಿ ಪ್ರಮುಖ ವೃತ್ತಿಯಾದ ಪಶು ಸಂಗೋಪನೆಯನ್ನೇ ನಂಬಿ ಬದುಕುತ್ತಿರುವ ಕುರುಬ ಸಮುದಾಯ ಕೇವಲ ಕರ್ನಾಟಕ, ಭಾರತವಷ್ಟೇ ಅಲ್ಲ; ವಿಶ್ವದ ಎಲ್ಲೆಡೆಯೂ ಹರಡಿ ಹಂಚಿ ಹೋಗಿದೆ. ಅದರಲ್ಲಿಯೂ ನಮ್ಮ ಭಾರತದಲ್ಲಿಯೇ ವಿವಿಧ ರಾಜ್ಯಗಳಲ್ಲಿ ಕುರುಬ, ಧನಗ, ಕುರುಮನ್, ಪಾಲ್, ಬಫೇಲ್, ದೇವಾಸಿ, ರಬಾರಿ, ಮೊದಲಾದ ಹೆಸರುಗಳಿಂದ ಕರೆಯಲ್ಪಡುವ ಸುಮಾರು ಹನ್ನೆರಡು ಕೋಟಿಗೂ ಹೆಚ್ಚು ಕುರುಬ ಸಮುದಾಯಗಳಿವೆ.

ಹೀಗೆ ವಿಶ್ವಾದ್ಯಂತ ಅಲ್ಲಲ್ಲಿ ಉಳಿದುಕೊಂಡಿರುವ ಬೆಳೆಯುತ್ತಿರುವ ನಮ್ಮೆಲ್ಲ ಸಮುದಾಯದ ಬೇರುಗಳನ್ನು ಒಗ್ಗೂಡಿಸಿ, ಬೆಳೆಸುವ ಉದ್ದೇಶದಿಂದ ಅಸ್ಥಿತ್ವಕ್ಕೆ ತರಲಾದ ಮಹತ್ವಾಕಾಂಕ್ಷೆಯೇ ಶೆಫರ್ಡ್ ಇಂಡಿಯಾ ಇಂಟರ್ ನ್ಯಾಷನಲ್,

2014ರ ಅಕ್ಟೋಬರ್ 2ರಂದು ಗಾಂಧಿ ಜಯಂತಿಯ ಪವಿತ್ರ ದಿನದಂದೇ ಆರಂಭಗೊಂಡ ಈ ಸಂಸ್ಥೆ ತನ್ನ ಒಂಬತ್ತನೆಯ ವಾರ್ಷಿಕೋತ್ಸವವನ್ನು 2023 ಅಕ್ಟೋಬರ್ 3ರ ಮಂಗಳವಾರ ಬೆಳಗಾವಿಯಲ್ಲಿ ಸಂಭ್ರಮಿಸಲು ಉದ್ದೇಶಿಸಿದ್ದು, ದೇಶದ ವಿವಿಧೆಡೆಗಳ ಸಾಧಕರು, ಹಿರಿಯರು, ಗಣ್ಯರು, ರಾಜಕೀಯ ನಾಯಕರು, ರಾಜ್ಯಪಾಲರು ಪಾಲ್ಗೊಳ್ಳಲಿದ್ದಾರಲ್ಲದೇ, ಇಡೀ ಭಾರತದಲ್ಲಿ ನಮ್ಮ ಸಮುದಾಯದಿಂದ ಮುಖ್ಯಮಂತ್ರಿಗಳಾಗಿರುವ, ಹೆಮ್ಮೆಯ ನಾಯಕ ಸನ್ಮಾನ್ಯ ಶ್ರೀ ಸಿದ್ದರಾಮಯ್ಯನವರಿಗೆ ರಾಷ್ಟ್ರೀಯ ಸನ್ಮಾನ ಮಾಡುವ ಘನೋದ್ದೇಶವನ್ನು ಹೊಂದಲಾಗಿದೆ.

ಕುರುಬ ಎಂಬುದು ಕೇವಲ ಒಂದು ಜಾತಿಯಲ್ಲ ; ಇದೊಂದು ಮಹಾನ್ ಸಂಸ್ಕೃತಿ, ಈ ನೆಲದ ಮೂಲದೊಂದಿಗೆ ಬೆರೆತುಹೋದ, ಬೆಸೆದುಕೊಂಡೇ ಬೆಳೆಯುತ್ತಿರುವ ಭವ್ಯ ಭಾರತದ ಮಹಾನ್ ಶಕ್ತಿ, ಊರು-ಕೇರಿಗಳನ್ನು ಸುತ್ತಿ, ಜನರ ನೋವು-ನಲಿವು,ದುಃಖ- ದುಮ್ಮಾನಗಳಿಗೆ ಕಣ್ಣಿವಿಯಾಗಿ, ಸಮಾಜದ ಪಾಡುಗಳೆಲ್ಲವನ್ನೂ ಹಾಡುಗಳನ್ನಾಗಿಸಿದ

ಮಹಾನ್ ಸಂತ ಕನಕದಾಸ ನಮ್ಮವ, ಸಾಹಿತ್ಯ-ಸಂಸ್ಕೃತಿಗೆ ಮಹತೊಡುಗೆ ನೀಡಿ, ವಿಶ್ವದಲ್ಲಿಯೇ ಖ್ಯಾತನೆಂದು ಅಮರನಾದ ಕಾಳಿದಾಸನೂ ನಮ್ಮವ. ದೇಶನಿಷ್ಟೆಗೆ ಹೆಸರಾದ ಸಂಗೊಳ್ಳಿ ರಾಯಣ್ಣ ನಮ್ಮೆಲ್ಲರ ಹೆಮ್ಮೆ, ವಿಜಯನಗರ ಸಾಮ್ರಾಜ್ಯದ ಸಂಸ್ಥಾಪಕರಾದ ಹಕ್ಕ- ಬುಕ್ಕರು ಕೂಡ ಕುರುಬ ಸಮಾಜದವರೆಂಬುದು ಹೆಮ್ಮೆಯ ವಿಷಯ.
ಶಿವನಿಷ್ಟಗೆ ಖ್ಯಾತರಾದ ಅಹಲ್ಯಾಬಾಯಿ ಹೋಳ್ವ ನಮ್ಮವರೆ. ಅವರೆಲ್ಲರ ತತ್ವ ಆದರ್ಶ ಮೌಲ್ಯ, ಜೀವನ ಪ್ರೀತಿಗಳನ್ನು ಅಮರವಾಗಿಸಬೇಕೆಂಬ ಸದುದ್ದೇಶದಿಂದಲೇ ಸ್ಥಾಪಿಸಲಾದುದು ಕನಕ ಗುರುಪೀಠ, ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಹಾಗೂ ರಾಜ್ಯದ ಹಿತಕ್ಕೆ ದುಡಿದ ಹಿರಿಯ ನಾಯಕರ ಮುಂದಾಲೋಚನೆ, ಮುಂಗಾಣೆಗಳ ಕಾರಣದಿಂದಾಗಿ ಕಾಗಿನೆಲೆ ಮಹಾ ಸಂಸ್ಥಾನ ಕನಕ ಗುರುಪೀಠವನ್ನು ಅಸ್ತಿತ್ವಕ್ಕೆ ತರಲಾಯಿತು.
ನಂಜನಗೂಡಿನ ಆಜನ್ಮ ಬ್ರಹ್ಮಚಾರಿಗಳಾಗಿದ್ದ ಶ್ರೀ ತಾರಕರನ್ನು, ಮಠ-ಪೀಠಗಳ ಗುರು ಪರಂಪರೆ ಹಾಗೂ ಆಧ್ಯಾತ್ಮ ಅಧ್ಯಯನಕ್ಕಾಗಿ ಹೃಷಿಕೇಶ, ಬದರಿನಾಥ, ಗಯಾ ಮತ್ತಿತರೆ ಶ್ರೀಕ್ಷೇತ್ರಗಳಿಗೆ ಕಳುಹಿಸಿ, ಅವರು ಮರಳಿ ಬರುವುದರ ಒಳಗಾಗಿ ಕನಕಪೀಠಕ್ಕೆ ಅಗತ್ಯವಾದ ಕಟ್ಟಡ ಮತ್ತಿತರೆ ಮೂಲಭೂತ ಅಗತ್ಯಗಳನ್ನೆಲ್ಲ ಸಿದ್ಧಗೊಳಿಸಲಾಗಿತ್ತು.
ತಾರಕರಿಗೆ ಶ್ರೀಶ್ರೀಶ್ರೀ ಬೀರೇಂದ್ರ ಕೇಶವ ತಾರಕಾನಂದಪುರಿ ಮಹಾಸ್ತಾಮೀಜಿಗಳೆಂದು ನಾಮಕರಣ ಮಾಡಿ, ನಾಡಿನ ಎಲ್ಲ ಪ್ರಮುಖ ಸ್ವಾಮೀಜಿಗಳ ಸಮಕ್ಷಮದಲ್ಲಿ, ಕಾಗಿನೆಲೆಯ ಬ್ರಾಹ್ಮಣರು, ಮುಸ್ಲಿಮರು, ದಲಿತರು, ವಾಲ್ಮೀಕಿ ನಾಯಕರು, ವೀರಶೈವ ಸಮಾಜದ ಬಂಧುಗಳೇ ಖುದ್ದಾಗಿ ಅಡ್ಡಪಲ್ಲಕ್ಕಿಯಲ್ಲಿ ಶ್ರೀಗಳನ್ನು ಹೊತ್ತು ತಂದು ಪಟ್ಟಾಭಿಷಿಕ್ತರನ್ನಾಗಿ ಮಾಡಿದ್ದು, ಈ ಕನ್ನಡ ಮಣ್ಣನ ಸಹಬಾಳ್ವೆಗೆ ಸಾಕ್ಷಿಯಾಯಿತಲ್ಲದೆ, ಅಂದಿನಿಂದಲೇ ಕುರುಬ ಸಮುದಾಯವನ್ನು ಪ್ರತಿನಿಧಿಸುವ ಮಠ-ಪೀಠವೂ ಉದಯವಾಗಿದ್ದು ಈಗ ಇತಿಹಾಸ.
ಮೂಲಪೀಠವಾದ ಕಾಗಿನೆಲೆಯ ಕನಕಗುರು ಪೀಠದ ಪ್ರಥಮ ಜಗದ್ಗುರು ಬ್ರಹ್ಮಲೀನ ಶ್ರೀ ಶ್ರೀ ಶ್ರೀ ಬೀರೇಂದ್ರ ಕೇಶವ ತಾರಕಾನಂದಪುರಿ ಸ್ವಾಮೀಜಿಗಳ ಕೃಪಾಶೀರ್ವಾದದೊಂದಿಗೆ ರಾಜ್ಯದ ನಾಲ್ಕು ಕಂದಾಯ ವಿಭಾಗಗಳನ್ನು ಪ್ರತಿನಿಧಿಸುವ ಸಲುವಾಗಿ ಶಾಖಾ ಮಠಗಳನ್ನು ಪ್ರಾರಂಭಿಸಲಾಯಿತು.
ಬೆಳಗಾವಿ ವಿಭಾಗದ ಶ್ರೀಶ್ರೀಶ್ರೀ ನಿರಂಜನಾನಂದಪುರಿ ಸ್ವಾಮೀಜಿಯವರನ್ನು ಜಗದ್ಗುರುಗಳನ್ನಾಗಿ ನೇಮಕ ಮಾಡಲಾಯಿತು. ಮೈಸೂರಿನ ಮಠಕ್ಕೆ ಶ್ರೀಶ್ರೀ ಶಿವಾನಂದಪುರಿ ಸ್ವಾಮೀಜಿಗಳು, ಹೊಸದುರ್ಗದ ಪೀಠಕ್ಕೆ ಶ್ರೀಶ್ರೀ ಈಶ್ವರಾನಂದಪುರಿ ಸ್ವಾಮೀಜಿಗಳು ಹಾಗೂ ಕೃಷ್ಣಾ ನದಿಗೆ ಅಡ್ಡಲಾಗಿ ಕಟ್ಟಿರುವ ತಿಂಥಣಿ ಸೇತುವೆ ಬಳಿ ನಿರ್ಮಿಸಲಾಗಿರುವ ಮಠಕ್ಕೆ ಶ್ರೀಶ್ರೀ ಸಿದ್ದರಾಮಾನಂದ ಸ್ವಾಮೀಜಿಗಳನ್ನು ನಿಯುಕ್ತಿಗೊಳಿಸಿ ಸಮುದಾಯದ ಹಿತ ಕಾಯುವ ಕೆಲಸವನ್ನು ಶ್ರದ್ಧಾಭಕ್ತಿಗಳಿಂದ ಮಾಡಲಾರಂಭಿಸಲಾಯಿತು. ಶೈವ ಪಂಥಕ್ಕೆ ಸೇರಿದ ಕುರುಬ ಸಮುದಾಯ, ಬೀರೇಶ್ವರನನ್ನು ಆರಾಧ್ಯ ದೈವವನ್ನಾಗಿಸಿಕೊಂಡಿದ್ದಾರೆ. ದೇಶದ ಮಳೆ, ಬೆಳೆ ಆಗು-ಹೋಗು, ಆರೋಗ್ಯಗಳನ್ನು ಕುರಿತಂತೆ ಕಾರಣಿಕ ಹೇಳುವ ಹಿರೇಮೈಲಾರದ ಕಾರಣಿಕರು ನಮ್ಮವರೆ.
ಅಂಥ ಅಪಾರ ಹೆಮ್ಮೆಯ ಕುರುಬ ಸಮುದಾಯದ ಹಿತಾಸಕ್ತಿಗಳನ್ನು ಕಾಪಾಡುವ ಹಾಗೂ ಹೊಸ ಆಶಯಗಳಿಗೆ ಹೊಂದಿಕೊಳ್ಳುವ ಹತ್ತು ಹಲವಾರು ಜವಾಬುದಾರಿಕೆಗಳನ್ನು ಸಮರ್ಥವಾಗಿ ನಿಭಾಯಿಸುವ ಹಾಗೂ ಭಾರತ ಸರ್ಕಾರಕ್ಕೆ ಕೆಲವೊಂದು ಸಲಹೆಗಳನ್ನು ನೀಡುವ ಮೂಲಕ ಕುರುಬರ ಆಶೋತ್ತರಗಳನ್ನು ರಕ್ಷಿಸುವ ಕೆಲಸ ಈಗಿನ ಬಹುದೊಡ್ಡ ಜರೂರಾಗಿದೆ. ಬೆಳಗಾವಿಯಲ್ಲಿ ಇದೇ ಆಕ್ಟೋಬರ್ 2ರಂದು ನಡೆಯಲಿರುವ ಕನ್ನಡ್ ಅಂಬಾ ಅರಿಟನ್ಯಾಷನಲ್ ಕಾರ್ಯಕಾರಿ ಸಮಿತಿಯ ಸಭೆ ಈ ಎಲ್ಲ ಸಂಗತಿಗಳ ಬಗ್ಗೆ ಅಮೂಲಾಗ್ರ ಚಿಂತನ-ಮಂಥನಗಳನ್ನು ನಡೆಸಲಿದೆ.
ಅಕ್ಟೋಬರ್ 3ರ ಮಂಗಳವಾರ ಸಮಸ್ಯೆ ಕುರುಬ ಸಮುದಾಯದ ಬೃಹತ್ ರಾಷ್ಟ್ರೀಯ ಸಮಾವೇಶ ನಡೆಯಲಿದ್ದು, ನಮ್ಮ ಅಭಿಮಾನದ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಸಿದ್ದರಾಮಯ್ಯನವರಿಗೆ ರಾಷ್ಟ್ರೀಯ ಸನ್ಮಾನದ ಗೌರವ ನೀಡಲಾಗುತ್ತಿದೆ.
ನಾಡಿನ ಮತ್ತು ಗಡಿಯಾಚೆಯ ಸಮಸ್ತ ಕುರುಬ ಬಾಂಧವರು ಸಂಘಟನೆಯ ಎಲ್ಲ ಕಾರ್ಯಗಳಿಗೂ ಸಹಭಾಗಿತ್ವ ನೀಡಿದ್ದಾರೆ. ಅವರೆಲ್ಲರಿಗೂ ನಮ್ಮ ಹೃದರ್ಯಾಕಲಾಳದ ಕೃತಜ್ಞತೆಗಳನ್ನು ಸಲ್ಲಿಸುವುದರ ಜತೆಗೆ ರಾಜ್ಯದ ಮೂಲೆ-ಮೂಲೆಗಳಲ್ಲಿರುವ ಸಮುದಾಯದ ಎಲ್ಲ ಜನರೂ, ಬೆಳಗಾವಿಗೆ ಬರುವ ಮೂಲಕ ಸಮುದಾಯದ ಒಗ್ಗಟ್ಟಿನ ಮಂತ್ರ ಪ್ರತಿಧ್ವನಿಸುವಂತೆ ಮಾಡಬೇಕಾಗಿದೆ. ಎಲ್ಲರೂ ಬನ್ನಿ, ನಮ್ಮ ಬಲವನ್ನು ಸಾರೋಣ, ಒಲವನ್ನು ಹಂಚೋಣ.