ಬೆಳಗಾವಿ.
ಗಡಿನಾಡ ಬೆಳಗಾವಿಯಲ್ಲಿ ನಾಳೆ ದಿ.3 ರಂದು ರಾಷ್ಟ್ರೀಯ ಮಟ್ಟದ ಕುರುಬರ ಸಮಾವೇಶ ನಡೆಯಲಿದೆ.
ಈ ಸಮಾವೇಶದ ಹಿನ್ನೆಲೆಯಲ್ಲಿ ಜಿಲ್ಲಾ ಕ್ರೀಡಾಂಗಣದಲ್ಲಿ ಎಲ್ಲ ಸಿದ್ಧತೆಗಳು ಜೋರಾಗಿ ನಡೆದಿವೆ. ಲಕ್ಷಾಂತರ ಜನ ಸೇರುವ ನಿರೀಕ್ಷೆ ಇದೆ ಎಂದು ಸಂಘಟಕರು ತಿಳಿಸಿದ್ದಾರೆ.

ಈ ಮಹಾ ಸಮಾವೇಶದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರನ್ನು ಸನ್ಮಾನಿಸಲಾಗುತ್ತಿದೆ ಎಂದು ಸಂಘಟಕರು ಹೇಳಿದ್ದಾರೆ.

ಈ ಸಮಾವೇಶದಲ್ಲಿ ರಾಜಕೀಯ ಇಲ್ಲ. ಎಲ್ಲ ಪಕ್ಷದವರು ಇದ್ದಾರೆ ಎಂದು ಹೇಳಿದ್ದರು. ಆದರೆ ಸನಾವೇಶದ ಸ್ವಾಗತ ಸಮಿತಿ ಪಟ್ಟಿ ಮತ್ತು ಹೊರಡಿಸಿದ ಭಿತ್ತಿ ಪತ್ರವನ್ಬು ಗಮನಿಸಿದರೆ ಅದರಲ್ಲೂ ರಾಜಕೀಯ ವಾಸನೆ ಬರತೊಡಗಿದೆ.

ಕುರುಬ ಸಮಾಜದಲ್ಲಿ ಸಿದ್ಧರಾಮಯ್ಯ ಹೇಗೆ ನಾಯಕರೋ ಹಾಗೆ ಬಿಜೆಪಿಯ ಕೆ.ಎಸ್. ಈಶ್ವರಪ್ಪ ಕೂಡ ನಾಯಕರು.!
ಆದರೆ ಈ ಸಮಾವೇಶದ. ಭಿತ್ತಿ ಪತ್ರದಲ್ಲಾಗಲೀ ಅಥವಾ ಸ್ವಾಗತ ಸಮಿತಿಯಲ್ಲಾಗಲೀ ಎಲ್ಲಿಯೂ ಈಶ್ವರಪ್ಪ ಅವರ ಪೊಟೊ ಹೋಗಲಿ ಕನಿಷ್ಟ ಹೆಸರು ಸಹ ಹಾಕಿಲ್ಲ. ಹೀಗಾಗಿ ಇದು ಒಂದು ರೀತಿಯ ಕುರುಬ ಸಮಾಜದಲ್ಲಿಯೇ ವಿಭಿನ್ನ ಚರ್ಚೆಗೆ ಎಡೆ ಮಾಡಿಕೊಟ್ಟಿದೆ.
ಬೆಳಗಾವಿ ಜಿಲ್ಲೆಯ ಸಂಘಟನೆ ಹೊಣೆಯನ್ನು ನಿಪ್ಪಾಣಿಯ ಚಿಂಗಳೆ ಅವರಿಗೆ ನಾಯಕರು ವಹಿಸಿದ್ದರು . ಆದರೆ ಚಿಕ್ಕೋಡಿ ಲೋಕಸಭೆ ಕ್ಷೇತ್ರದ ಮೇಲೆ ಕಣ್ಣುಟ್ಟಿರುವ ಚಿಂಗಳೆ ಅವರು, ಕಾಂಗ್ರೆಸ್ ನಾಯಕರ ಮನವೊಲಿಸಲು ಈ ರೀತಿ ಆಟ ಆಡಿದರಾ ಹೇಗೆ ಎನ್ನುವ ಚರ್ಚೆ ಕೂಡ ನಡೆದಿದೆ